ಅಲಸ್ಟೈರ್ ಕುಕ್ ಬಳಗವು ಲಾರ್ಡ್ಸ್ ಟೆಸ್ಟ್‌ನಲ್ಲಿ ಪಾಕಿಸ್ತಾನ ವಿರುದ್ಧ 75 ರನ್ ಸೋಲನ್ನು ಅನುಭವಿಸಿದ್ದು, ಪಾಕಿಸ್ತಾನ ಲೆಗ್ ಸ್ಪಿನ್ನರ್ ಯಾಸಿರ್ ಶಾಹ್ 10 ವಿಕೆಟ್ ಕಬಳಿಸಿದ್ದರು. ಈ ಹಿನ್ನಲೆಯಲ್ಲಿ ಇಂಗ್ಲೆಂಡ್ ಈಗ ಪಾಕಿಸ್ತಾನದ ಮಾಜಿ ಆಫ್ ಸ್ಪಿನ್ನರ್ ಸಕ್ಲೇನ್ ಮುಶ್ತಾಖ್ ಅವರನ್ನು ಕೋಚಿಂಗ್ ಸಲಹೆಗಾರರಾಗಿ ನೇಮಿಸುವ ಮೂಲಕ ಅವರ ನೆರವನ್ನು ಪಡೆದಿದೆ.
ಈಗ ಇಂಗ್ಲೆಂಡ್ ಪಾಕಿಸ್ತಾನದ ಯಾಸಿರ್ ಶಾಹ್ ಬೌಲಿಂಗನ್ನು ಹೆಚ್ಚು ಟರ್ನ್ ತೆಗೆದುಕೊಳ್ಳುವ ಓಲ್ಡ್ ಟ್ರಾಫರ್ಡ್‌ನಲ್ಲಿ ಇನ್ನೂ ಉತ್ತಮವಾಗಿ ಆಡಲು ಆಶಿಸಿದೆ. ಲೆಗ್ ಸ್ಪಿನ್ನರ್ ಅದಿಲ್ ರಶೀದ್ ಅವರಿಗೆ ಚೊಚ್ಚಲ ಎಂಟ್ರಿ ನೀಡುವ ಕುರಿತು ಇಂಗ್ಲೆಂಡ್ ಯೋಚಿಸುತ್ತಿದ್ದು, ಅದಿಲ್ ರಷೀದ್ ಅವರನ್ನು ಮೊಯಿನ್ ಅಲಿಗೆ ಬೆಂಬಲವಾಗಿ ಅಥವಾ ಬದಲಿಯಾಗಿ ಆಡಿಸಲು ಪರಿಶೀಲಿಸುತ್ತಿದೆ.
ಸಕ್ಲೇನ್ ಮುಶ್ತಾಕ್ ಅವರು ಮೊಯಿನ್ ಅಲಿ ಮತ್ತು ರಷೀದ್‌ಗೆ ಸಲಹೆ ನೀಡುವುದಲ್ಲದೇ ಸ್ಪಿನ್ ಹೇಗೆ ಆಡುವುದೆಂಬುದನ್ನು ಕುರಿತು ಟಿಪ್ಸ್ ನೀಡುವುದು ಅಲ್ಪಾವಧಿ ಅನುಕೂಲವಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ