Select Your Language

Notifications

webdunia
webdunia
webdunia
webdunia

ಯಾಸಿರ್ ಶಾಹ್‌ ಅಮೋಘ ಸ್ಪಿನ್: ಲಾರ್ಡ್ಸ್ ಟೆಸ್ಟ್‌ನಲ್ಲಿ ಪಾಕ್‌ಗೆ ಇಂಗ್ಲೆಂಡ್ ವಿರುದ್ಧ ಜಯ

yasir shah
ಲಂಡನ್: , ಸೋಮವಾರ, 18 ಜುಲೈ 2016 (11:25 IST)
ಪಾಕಿಸ್ತಾನದ ಸ್ಪಿನ್ ಬೌಲರ್ ಯಾಸಿರ್ ಶಾಹ್ ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಒಟ್ಟು 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪಾಕಿಸ್ತಾನ ಇಂಗ್ಲೆಂಡ್‌ ವಿರುದ್ಧ 75 ರನ್ ಭರ್ಜರಿ ಜಯಗಳಿಸಿದೆ. ಲೆಗ್ ಸ್ಪಿನ್ನರ್ ಶಾಹ್ 141ಕ್ಕೆ 10 ವಿಕೆಟ್ ಕಬಳಿಸಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಶಾಹ್ ನಾಲ್ಕನೇ ದಿನ 69ಕ್ಕೆ ನಾಲ್ಕು ವಿಕೆಟ್ ಕಬಳಿಸುವ ಮೂಲಕ ಜಯ ತಂದಿತ್ತರು.
 
ಐದು ವರ್ಷಗಳ ನಿಷೇಧದ ಬಳಿಕ ಪುನಃ ಟೆಸ್ಟ್‌ನಲ್ಲಿ ಆಡಿರುವ ಮೊಹಮ್ಮದ್ ಅಮೀರ್ ಇಂಗ್ಲೆಂಡ್ ಕೊನೆಯ ಬ್ಯಾಟ್ಸ್‌ಮನ್ ಜೇಕ್ ಬಾಲ್ ಅವರನ್ನು ಔಟ್ ಮಾಡಿದರು. ಗೆಲ್ಲುವುದಕ್ಕೆ 283 ರನ್ ಅಗತ್ಯವಿದ್ದ ಇಂಗ್ಲೆಂಡ್ 207ಕ್ಕೆ ಆಲೌಟ್ ಆಗುವ ಮೂಲಕ ಸೋಲನುಭವಿಸಿದೆ.

ಇಂಗ್ಲೆಂಡ್ ಒಂದು ಹಂತದಲ್ಲಿ  ಜಾನಿ ಬೇರ್‌ಸ್ಟೋ (48) ಮತ್ತು ಕ್ರಿಸ್ ವೋಕ್ಸ್(23) ಅವರ 56 ರನ್ ಜತೆಯಾಟದಿಂದ 195 ರನ್‌ಗೆ 6 ವಿಕೆಟ್ ಮಾತ್ರ ಕಳೆದುಕೊಂಡು ಗೆಲ್ಲುವ ಭರವಸೆ ಮೂಡಿಸಿತ್ತು.  ಆದರೆ ಬೇರ್‌ಸ್ಟೋ ಶಾಹ್ ಲೆಗ್ ಬ್ರೇಕ್‌ಗೆ ಬೌಲ್ಡ್ ಆದಾಗ ಅವರ ಮೂರುವರೆ ಗಂಟೆಗಳ ಇನ್ನಿಂಗ್ಸ್‌ಗೆ ತೆರೆ ಬಿತ್ತು. ಎಡಗೈ ವೇಗಿ ಅಮೀರ್ ಸ್ಟುವರ್ಟ್ ಬ್ರಾಡ್ ಅವರನ್ನು ಬೌಲ್ಡ್ ಮಾಡಿದಾಗ ಇಂಗ್ಲೆಂಡ್ 196ಕ್ಕೆ 8 ವಿಕೆಟ್ ಕಳೆದುಕೊಂಡಿತ್ತು.
 
ಶಾಹ್ ಬಳಿಕ ವೋಕ್ಸ್ ಅವರನ್ನು ಔಟ್ ಮಾಡಿದರು. ಅಮೀರ್ ಕೊನೆಯ ವಿಕೆಟ್ ಕಬಳಿಸಿ ಇಂಗ್ಲೆಂಡ್ ಇನ್ನಿಂಗ್ಸ್‌ಗೆ ತೆರೆ ಎಳೆದರು.
 ಪಾಕಿಸ್ತಾನದ ಎಡಗೈ ವೇಗಿ ರಾಹತ್ ಅಲಿ ಇಂಗ್ಲೆಂಡ್‌ನ ಟಾಪ್ ಮೂವರು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದರಿಂದ ಇಂಗ್ಲೆಂಡ್ 47ಕ್ಕೆ 3 ವಿಕೆಟ್ ಕಳೆದುಕೊಂಡಿತ್ತು.

ಸ್ಕೋರು ವಿವರ
ಪಾಕಿಸ್ತಾನ ಮೊದಲ ಇನ್ನಿಂಗ್ಸ್ 339 ರನ್
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 272 ರನ್
ಪಾಕಿಸ್ತಾನ ಎರಡನೇ ಇನ್ನಿಂಗ್ಸ್ 215ಕ್ಕೆ ಆಲೌಟ್ 
ಬ್ಯಾಟಿಂಗ್ ವಿವರ 
ಶಫೀಕ್ 49 ರನ್, ಸರ್‌ಫ್ರಾಜ್ ಅಹ್ಮಗ್ 45,  ರನ್ ಯಾಸಿರ್ ಶಾಹ್ 30 ರನ್
ಇಂಗ್ಲೆಂಡ್ ಬೌಲಿಂಗ್ ವಿವರ:
ಸ್ಟುವರ್ಟ್ ಬ್ರಾಡ್ 3 ವಿಕೆಟ್, ಕ್ರಿಸ್ ವೋಕ್ಸ್ 5 ವಿಕೆಟ್ ಮೊಯಿನ್ ಅಲಿ 2 ವಿಕೆಟ್
ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 207ಕ್ಕೆ ಆಲೌಟ್, 
ಬ್ಯಾಟಿಂಗ್ ವಿವರ
ಜೇಮ್ಸ್ ವಿನ್ಸ್ 42 ರನ್, ಬಾಲಾನ್ಸ್ 43 ರನ್, ಬೇರ್‌ಸ್ಟೋ 48 ರನ್, ಕ್ರಿಸ್ ವೋಕ್ಸ್ 23 ರನ್ 
ಪಾಕಿಸ್ತಾನ ಬೌಲಿಂಗ್ ವಿವರ
ಮೊಹಮ್ಮದ್ ಅಮೀರ್ 2 ವಿಕೆಟ್, ರಾಹತ್ ಅಲಿ 3 ವಿಕೆಟ್, ಯಾಸಿರ್ ಶಾಹ್ 4 ವಿಕೆಟ್, ವಾಹಬ್ ರಿಯಾಜ್ 1 ವಿಕೆಟ್ 
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವೆಸ್ಟ್ ಇಂಡೀಸ್ ಅಧ್ಯಕ್ಷರ ಇಲೆವನ್, ಭಾರತ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯ