Select Your Language

Notifications

webdunia
webdunia
webdunia
webdunia

ವೆಸ್ಟ್ ಇಂಡೀಸ್ ಅಧ್ಯಕ್ಷರ ಇಲೆವನ್, ಭಾರತ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯ

west indies
ಸೇಂಟ್ ಕಿಟ್ಸ್ , ಭಾನುವಾರ, 17 ಜುಲೈ 2016 (14:06 IST)
ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ಅವರು ವೆಸ್ಟ್ ಇಂಡೀಸ್ ಅಧ್ಯಕ್ಷರ ಇಲೆವನ್ ವಿರುದ್ಧ ಎರಡನೇ ಅಭ್ಯಾಸ ಪಂದ್ಯದಲ್ಲಿ ಸ್ಟಾರ್ ಆಟಗಾರರಾಗಿ ಹೊರಹೊಮ್ಮಿದರು. ಭಾರತ ಎರಡನೇ ಅಭ್ಯಾಸ ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದ್ದರೂ ಮಾನಸಿಕವಾಗಿ ಜಯ ಸಾಧಿಸಿದೆ.
 
 ಮೂರನೇ ದಿನ 26ಕ್ಕೆ ಒಂದು ವಿಕೆಟ್‌ನೊಂದಿಗೆ ಆಟ ಆರಂಭಿಸಿದ ವೆಸ್ಟ್ ಇಂಡೀಸ್ ಅಧ್ಯಕ್ಷರ ಇಲೆವನ್ ಆರಂಭದಲ್ಲಿ ಜಡೇಜಾ ಜಾನ್ ಕ್ಯಾಂಪ್‌ಬೆಲ್ ವಿಕೆಟ್ ಉರುಳಿಸಿದ್ದರಿಂದ ಅಧ್ಯಕ್ಷರ ಇಲೆವನ್‌ಗೆ ಹಿನ್ನಡೆ ಉಂಟಾಯಿತು. ಅಶ್ವಿನ್ ಬೌಲಿಂಗ್‌ನಲ್ಲಿ ಶಾರ್ಟ್ ಫೈನ್ ಲೆಗ್‌ನಲ್ಲಿ ಕೊಹ್ಲಿ ಅದ್ಭುತ ಕ್ಯಾಚ್ ಹಿಡಿದು ಶಾಯ್ ಹೋಪ್ ಅವರನ್ನು ಔಟ್ ಮಾಡಿದರು.
 
 ಜರ್ಮೈನ್ ಬ್ಲಾಕ್‌ವುಡ್, ವಿಷುಯಾಲ್ ಸಿಂಗ್ ಮತ್ತು ಮಾಂಟ್‌ಸಿನ್ ಹಾಡ್ಜ್ ''ಸುರಕ್ಷತೆ ಮೊದಲು'' ಎಂಬ ನಿಲುವು ತಾಳಿದ್ದರಿಂದ ಆತಿಥೇಯರು ಹೇಗೋ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.  ಕಳೆದ ಒಂದೂವರೆ ವರ್ಷದಿಂದ ಟೆಸ್ಟ್ ತಂಡದಲ್ಲಿರುವ ಬ್ಲಾಕ್‌ವುಡ್ 51 ರನ್ ಸ್ಕೋರ್ ಮಾಡಿದರು. ಉಳಿದಿಬ್ಬರು ಬ್ಯಾಟ್ಸ್‌ಮನ್ ತಲಾ 39 ರನ್ ಸ್ಕೋರ್ ಮಾಡಿದರು.
 ಇದಕ್ಕೆ ಮುಂಚೆ ಜಡೇಜಾ ಮತ್ತು ಅಶ್ವಿನ್ ಸಾರಥ್ಯದಲ್ಲಿ ಭಾರತವು ಅಧ್ಯಕ್ಷರ ಇಲೆವನ್ ತಂಡವನ್ನು 180 ರನ್‌ಗೆ ಆಲೌಟ್ ಮಾಡಿತು. ಬಳಿಕ ರಾಹುಲ್, ಕೊಹ್ಲಿ ಮತ್ತು ಜಡೇಜಾ ಅರ್ಧಶತಕಗಳ ನೆರವಿನಿಂದ 184 ರನ್ ಮೊದಲ ಇನ್ನಿಂಗ್ಸ್ ಲೀಡ್ ಗಳಿಸಿತ್ತು. 
ಸ್ಕೋರು ವಿವರ
ವೆಸ್ಟ್ ಇಂಡೀಸ್ ಅಧ್ಯಕ್ಷರ ಇಲೆವನ್ 
ಮೊದಲ ಇನ್ನಿಂಗ್ಸ್- 180ಕ್ಕೆ ಆಲೌಟ್ 
 ಭಾರತ-  ಮೊದಲ ಇನ್ನಿಂಗ್ಸ್ 364ಕ್ಕೆ ಆಲೌಟ್
ವೆಸ್ಟ್ ಇಂಡೀಸ್ ಅಧ್ಯಕ್ಷರ ಇಲೆವನ್
ಎರಡನೇ ಇನ್ನಿಂಗ್ಸ್
ಬ್ಯಾಟಿಂಗ್ ವಿವರ
ಜಾನ್ ಕ್ಯಾಂಪ್‌ಬೆಲ್ 31 ರನ್, ಜರ್ಮೈನ್ ಬ್ಲಾಕ್ ವುಡ್  51 ರನ್, ವಿಶೌಲ್ ಸಿಂಗ್ 39 ರನ್, ಮಾಂಟ್ಕಿನ್ ಹಾಡ್ಜ್ 39 ರನ್ ಕಾರ್ನ್‌ವಾಲ್  21 ರನ್ 
 ಬೌಲಿಂಗ್ ವಿವರ
ರವಿಚಂದ್ರನ್ ಅಶ್ವಿನ್ 3 ವಿಕೆಟ್,  ರವೀಂದ್ರ ಜಡೇಜಾ 1 ವಿಕೆಟ್, ಶಮಿ 1 ವಿಕೆಟ್.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಲ್ಯುಬಿಒ ಏಷ್ಯ ಪೆಸಿಫಿಕ್ ಬಾಕ್ಸಿಂಗ್ ಪ್ರಶಸ್ತಿ ವಿಜೇಂದರ್ ಮುಡಿಗೆ