Publish Date: Sun, 20 Jun 2021 (17:00 IST)
Updated Date: Sun, 20 Jun 2021 (17:03 IST)
ಸೌಥಾಂಪ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಸ್ ಪಂದ್ಯದಲ್ಲಿ ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿದೆ.
ನಿನ್ನೆ ಅಜೇಯರಾಗಿದ್ದ ನಾಯಕ ಕೊಹ್ಲಿ, ಆರ್ ಸಿಬಿ ಮೂಲದ ಆಟಗಾರ ಜೆಮಿಸನ್ ಗೆ ಎಲ್ ಬಿಡಬ್ಲ್ಯು ಆಗಿ ನಿರ್ಗಮಿಸಿದರು. ಅವರ ಬೆನ್ನ ಹಿಂದೇ ಉಪ ನಾಯಕ ಅಜಿಂಕ್ಯಾ ರೆಹಾನೆ ಕೂಡಾ 49 ರನ್ ಗಳಿಸಿ ಔಟಾದರು. ಇವರಿಬ್ಬರ ವಿಕೆಟ್ ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಸಿಲುಕಿದೆ. ವಿಕೆಟ್ ಕೀಪರ್ ರಿಷಬ್ ಪಂತ್ ಕೇವಲ 4 ರನ್ ಗಳಿಸಿ ಔಟಾದರು.
ಇದೀಗ ಆಲ್ ರೌಂಡರ್ ರವೀಂದ್ರ ಜಡೇಜಾ 10 ಮತ್ತು ರವಿಚಂದ್ರನ್ ಅಶ್ವಿನ್ ಖಾತೆ ತೆರೆಯದೇ ಕ್ರೀಸ್ ನಲ್ಲಿದ್ದಾರೆ. ಇವರಿಬ್ಬರು ಜೊತೆಯಾಟವಾಡಿದರೆ ಮಾತ್ರ ಭಾರತಕ್ಕೆ ಉತ್ತಮ ಸ್ಕೋರ್ ಕಲೆ ಹಾಕಲು ಸಾಧ್ಯ.