ದಿ ಓವಲ್: ತಂಡ ಸಂಕಷ್ಟದಲ್ಲಿದ್ದಾಗ ಹಿರಿಯ ಆಟಗಾರರು ತಂಡದ ನಾಯಕನಿಗೆ ಸಲಹೆ ನೀಡುವುದು ಸಾಮಾನ್ಯ. ಅದೇ ರೀತಿ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಆಸೀಸ್ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾಗ ಭಾರತ ನಾಯಕ ರೋಹಿತ್ ಶರ್ಮಾಗೆ ವಿರಾಟ್ ಕೊಹ್ಲಿ ಸಲಹೆ ನೀಡಿದರು.
ಆಸೀಸ್ 350 ರನ್ ಗೆ 3 ವಿಕೆಟ್ ಅಷ್ಟೇ ಕಳೆದುಕೊಂಡು ಭರ್ಜರಿ ಮೊತ್ತದತ್ತ ದಾಪುಗಾಲಿಡುತ್ತಿತ್ತು. ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್ ಶತಕ ಗಳಿಸಿ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದರು. ಈ ವೇಳೆ ದಿಕ್ಕೆಟ್ಟು ನಿಂತಿದ್ದ ನಾಯಕ ರೋಹಿತ್ ಶರ್ಮಾಗೆ ಫೀಲ್ಡಿಂಗ್ ಸೆಟ್ ಮಾಡುವ ವಿಚಾರದಲ್ಲಿ ವಿರಾಟ್ ಕೊಹ್ಲಿ ಕೆಲವು ಸಲಹೆ ನೀಡಿದರು.
ರೋಹಿತ್ ಬಳಿ ಬಂದ ಕೊಹ್ಲಿ ಫೀಲ್ಡಿಂಗ್ ಬಗ್ಗೆ ಕೆಲವು ಅಮೂಲ್ಯ ಸಲಹೆ ನೀಡಿದರು. ಇದಾದ ಬಳಿಕ ಆಸೀಸ್ ಕುಸಿತ ಆರಂಭವಾಯಿತು. ಬಳಿಕ 100 ರನ್ ಗಳಿಸುವಷ್ಟರಲ್ಲಿ ಆಸ್ಟ್ರೇಲಿಯಾ ಆಲೌಟ್ ಆಗಿತ್ತು. ರೋಹಿತ್ ಗೆ ಕೊಹ್ಲಿ ಸಲಹೆ ನೀಡಿರುವ ವಿಚಾರ ನೆಟ್ಟಿಗರ ಗಮನ ಸೆಳೆಯಿತು.