Select Your Language

Notifications

webdunia
webdunia
webdunia
webdunia

ಕೈಕೊಟ್ಟ ರೋಹಿತ್, ಗಿಲ್: ಸಂಕಷ್ಟದಲ್ಲಿ ಟೀಂ ಇಂಡಿಯಾ

ಕೈಕೊಟ್ಟ ರೋಹಿತ್, ಗಿಲ್: ಸಂಕಷ್ಟದಲ್ಲಿ ಟೀಂ ಇಂಡಿಯಾ
ದಿ ಓವಲ್ , ಗುರುವಾರ, 8 ಜೂನ್ 2023 (20:01 IST)
ದಿ ಓವಲ್: ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಟೀಂ ಇಂಡಿಯಾ ಬ್ಯಾಟಿಂಗ್ ಆರಂಭಿಸಿದ್ದು, ಆರಂಭಿಕ ಆಘಾತ ಅನುಭವಿಸಿದೆ.

ಮೊದಲ ಇನಿಂಗ್ಸ್ ನಲ್ಲಿ ಆಸೀಸ್ 469 ರನ್ ಗಳಿಗೆ ಆಲೌಟ್ ಆಗಿದೆ. ಭಾರತದ ಪರ ಮೊಹಮ್ಮದ್ ಸಿರಾಜ್ 4, ಮೊಹಮ್ಮದ್ ಶಮಿ, ಶ್ರಾದ್ಧೂಲ್ ಠಾಕೂರ್ 2 ಹಾಗೂ ರವೀಂದ್ರ ಜಡೇಜಾ 1 ವಿಕೆಟ್ ಕಬಳಿಸಿದರು.

ಈ ಬೃಹತ್ ಮೊತ್ತ ಬೆನ್ನತ್ತಿದ ಭಾರತಕ್ಕೆ ನಾಯಕ ರೋಹಿತ್-ಶುಬ್ಮನ್ ಗಿಲ್ ಜೋಡಿ ಕೈಕೊಟ್ಟಿತು. ನಾಯಕ ರೋಹಿತ್ ಶರ್ಮಾ 15 ರನ್ ಗಳಿಗೆ ಔಟಾದರೆ ಐಪಿಎಲ್ ನಲ್ಲಿ ಅಬ್ಬರಿಸಿದ್ದ ಶುಬ್ಮನ್ ಗಿಲ್ 13 ರನ್ ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಭಾರತ 37 ರನ್ ಗೇ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಇದೀಗ ಚೇತೇಶ್ವರ ಪೂಜಾರ 3, ವಿರಾಟ್ ಕೊಹ್ಲಿ 4 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಭಾರತ ಇನ್ನೂ 432 ರನ್ ಗಳ ಹಿನ್ನಡೆಯಲ್ಲಿದೆ. ಇಂದು 41 ಓವರ್ ಗಳ ಪಂದ್ಯ ಬಾಕಿಯಿದೆ. ನಾಳೆ ಮಧ‍್ಯಾಹ್ನದವರೆಗೂ ಬ್ಯಾಟಿಂಗ್ ನಡೆಸದೇ ಹೋದರೆ ಟೀಂ ಇಂಡಿಯಾಗೆ ಸೋಲು ಕಟ್ಟಿಟ್ಟ ಬುತ್ತಿ.

Share this Story:

Follow Webdunia kannada

ಮುಂದಿನ ಸುದ್ದಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ವೇಗಿ ಪ್ರಸಿದ್ಧ ಕೃಷ್ಣ