Webdunia - Bharat's app for daily news and videos

Install App

WTC Final: ರಬಾಡ ದಾಳಿಗೆ ತತ್ತರಿಸಿದ ಕಾಂಗರೂ ಪಡೆ: ದಕ್ಷಿಣ ಆಫ್ರಿಕಾ ತಂಡವೂ ಆರಂಭದಲ್ಲೇ ಕುಸಿತ

Sampriya
ಬುಧವಾರ, 11 ಜೂನ್ 2025 (23:29 IST)
Photo Courtesy X
ಲಾರ್ಡ್ಸ್‌: ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ (51ಕ್ಕೆ5) ಅವರ ಮಿಂಚಿನ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಬುಧವಾರ ಲಾರ್ಡ್ಸ್‌ನಲ್ಲಿ ಆರಂಭವಾದ ವಿಶ್ವ ಟೆಸ್ಟ್‌ ಕ್ರಿಕೆಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 212 ರನ್‌ಗಳಿಗೆ ಕಟ್ಟಿಹಾಕಿತು. ಆದರೆ, ದಕ್ಷಿಣ ಆಫ್ರಿಕಾ ತಂಡವೂ ಆರಂಭಿಕ ಕುಸಿತಕ್ಕೆ ಒಳಗಾಯಿತು.

ಮೊದಲ ದಿನದಾಟ ಮುಗಿದಾಗ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ 43 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ. ಮಿಚೆಲ್‌ ಸ್ಟಾರ್ಕ್ 10 ರನ್ನಿಗೆ 2 ವಿಕೆಟ್‌ ಪಡೆದಿದ್ದಾರೆ. ದಿನದಾಟದಲ್ಲಿ 14 ವಿಕೆಟ್‌ಗಳು ಉರುಳಿದವು.

ಟಾಸ್‌ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ತೆಂಬಾ ಬವುಮಾ ನಿರ್ಧಾರ ಸಮರ್ಥಿಸುವಂತೆ ರಬಾಡ ಅವರು ಇನಿಂಗ್ಸ್‌ನ ಏಳನೇ ಓವರಿನಲ್ಲೇ ಉಸ್ಮಾನ್ ಖ್ವಾಜಾ ಮತ್ತು ಕ್ಯಾಮರಾನ್ ಗ್ರೀನ್ ಅವರ ವಿಕೆಟ್‌ಗಳನ್ನು ಪಡೆದು ಅವರು ಆರಂಭದಲ್ಲೇ ಆಸ್ಟ್ರೇಲಿಯಾಕ್ಕೆ ಪೆಟ್ಟು ನೀಡಿದ್ದರು.

ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ರಬಾಡ ಎರಡನೇ ಬಾರಿ ಐದು ವಿಕೆಟ್‌ ಪಡೆದರು. ಟೀ ವಿರಾಮದ ವೇಳೆಗೆ 5 ವಿಕೆಟ್‌ಗೆ 190 ರನ್ ಗಳಿಸಿದ್ದ ಆಸ್ಟ್ರೇಲಿಯಾ ನಂತರ ಆ ಮೊತ್ತಕ್ಕೆ 22 ರನ್‌ ಸೇರಿಸಲಷ್ಟೇ ಶಕ್ತವಾಯಿತು.

ಅವರಿಗೆ ಬೆಂಬಲ ನೀಡಿದ ಮಾರ್ಕೊ ಯಾನ್ಸೆನ್‌ ಅವರು ಮಾರ್ನಸ್‌ ಲಾಬುಶೇನ್ ಮತ್ತು ಅಪಾಯಕಾರಿ ಆಟಗಾರ ಟ್ರಾವಿಸ್‌ ಹೆಡ್‌ ಅವರ ವಿಕೆಟ್‌ಗಳನ್ನು ಪಡೆದರು. ಆಗ ಮೊತ್ತ 4 ವಿಕೆಟ್‌ಗೆ 67 ರನ್‌ ಆಗಿತ್ತು.

ಅನುಭವಿ ಸ್ಟೀವ್ ಸ್ಮಿತ್ (66, 10x4) ಅರ್ಧ ಶತಕ ಬಾರಿಸಿ ಆಸರೆಯಾದರು. ತಂಡದ ಪರ ಅತ್ಯಧಿಕ ಮೊತ್ತ ಗಳಿಸಿದ ಬ್ಯೂ ವೆಬ್‌ಸ್ಟರ್‌ (72, 92ಎ) ಜೊತೆ ಐದನೇ ವಿಕೆಟ್‌ಗೆ 69 ರನ್ ಸೇರಿಸಿದ್ದರಿಂದ ಕಾಂಗರೂ ಪಡೆ ಚೇತರಿಸಿಕೊಂಡಿತು.  

ರಬಾಡ ಈ ಹಾದಿಯಲ್ಲಿ ಅಲನ್ ಡೊನಾಲ್ಡ್‌ (330 ವಿಕೆಟ್‌) ಅವರನ್ನು ಹಿಂದೆಹಾಕಿ ದಕ್ಷಿಣ ಆಫ್ರಿಕಾದ ಸಾರ್ವಕಾಲಿಕ ವಿಕೆಟ್‌ ಗಳಿಕೆದಾರರಲ್ಲಿ ನಾಲ್ಕನೇ ಸ್ಥಾನ ಪಡೆದರು. ರಬಾಡ 332 ವಿಕೆಟ್‌ಗಳನ್ನು ಪಡೆದಂತಾಗಿದೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಇಂದಿನ ದಿನದಾಟಕ್ಕೂ ಓವಲ್ ಮೈದಾನದಲ್ಲಿ ಮಳೆ ಬರುತ್ತಾ: ಇಲ್ಲಿದೆ ಹವಾಮಾನ ವರದಿ

IND vs ENG: ಕರುಣ್ ನಾಯರ್ ಗೆ ಅವಮಾನದ ನಂತರ ಸನ್ಮಾನ

IND vs ENG:ಟೀಂ ಇಂಡಿಯಾ ಕ್ಯಾಪ್ಟನ್ ಶುಭಮನ್ ಗಿಲ್ ಟಾಸ್ ಸೋಲುವುದರಲ್ಲೇ ದಾಖಲೆ

IND vs ENG: ಐದನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ 3 ಬದಲಾವಣೆ ಖಚಿತ

ENG vs IND: ಇಂಗ್ಲೆಂಡ್ ತಂಡಕ್ಕೆ ದೊಡ್ಡ ಆಘಾತ, ತಂಡದ ನಾಯಕನೇ ಪ್ರಮುಖ ಪಂದ್ಯದಿಂದ ಹೊರಕ್ಕೆ

ಮುಂದಿನ ಸುದ್ದಿ
Show comments