Select Your Language

Notifications

webdunia
webdunia
webdunia
webdunia

WTC Final: ಚೋಕರ್ಸ್‌ ಹಣೆಪಟ್ಟಿ ಕಳಚುವತ್ತ ದಕ್ಷಿಣ ಆಫ್ರಿಕಾ: ಹಿಡಿತ ಸಾಧಿಸಿದ ಹರಿಣ ಪಡೆ

ICC Test Championship, Australian Cricket, South African Cricket

Sampriya

‌ಲಂಡನ್‌ , ಶನಿವಾರ, 14 ಜೂನ್ 2025 (15:31 IST)
Photo Courtesy X
‌ಲಂಡನ್‌: ಐಸಿಸಿ ಟೂರ್ನಿಗಳಲ್ಲಿ ದಕ್ಷಿಣ ಆಫ್ರಿಕಾ ತಂಡವು ಚೋಕರ್ಸ್‌ ಹಣೆಪಟ್ಟಿ ಕಳಚಿ ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸುವತ್ತ ದಾಪುಗಾಲು ಇಟ್ಟಿದೆ.

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಫೈನಲ್‌ನಲ್ಲಿ ನಾಲ್ಕನೇ ದಿನವಾದ ಶನಿವಾರ ಫಲಿತಾಂಶ ಪ್ರಕಟವಾಗಲಿದೆ. ಹಾಕಿ ಚಾಂಪಿಯನ್‌ ಆಸ್ಟ್ರೇಲಿಯಾವನ್ನು ಸೋಲಿಸಿ ಐತಿಹಾಸಿಕ ಸಾಧನೆ ನಿರ್ಮಿಸಲು ಕೇವಲ 60 ರನ್‌ ಬೇಕಿದೆ. ಕೈಯಲ್ಲಿ ಏಳು ವಿಕೆಟ್‌ಗಳಿವೆ.

ಎರಡನೇ ಇನ್ನಿಂಗ್ಸ್‌ನಲ್ಲಿ 282 ರನ್‌ಗಳ ಗುರಿಯನ್ನು ಪಡೆದ ಆಫ್ರಿಕಾ ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿ ಸುಭದ್ರ ಸ್ಥಿತಿಯಲ್ಲಿದೆ. ಶನಿವಾರ ಇನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡವು ನಾಯಕ ತೆಂಬಾ ಬವುಮಾ (66;134 ಎಸೆತ) ಅವರ ವಿಕೆಟ್‌ ಪತನಗೊಂಡಿದೆ.

ದಕ್ಷಿಣ ಆಫ್ರಿಕಾ ತಂಡ ಇಲ್ಲಿಯವರೆಗೆ ವಿಶ್ವಕಪ್‌, ಟಿ 20 ಲೀಗ್‌ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಆಫ್ರಿಕಾ ಸೆಮಿಫೈನಲ್‌ ಪ್ರವೇಶಿಸುತ್ತಿತ್ತು. ಆದರೆ ಸೆಮಿಫೈನಲ್‌ನಲ್ಲಿ ಪ್ರತಿ ಬಾರಿಯೂ ಸೋಲು ಕಾಣುತ್ತಿತ್ತು.

ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ 5 ಬಾರಿ ಸೆಮಿಫೈನಲ್‌ನಲ್ಲೇ ಸೋತಿತ್ತು. 1992, 1999, 2007, 2015, 2023 ರಲ್ಲಿ ಸೋಲು ಕಂಡಿತ್ತು. ವಿಶ್ವಕಪ್‌ನ ಲೀಗ್‌ ಹಂತದಲ್ಲಿ ಅದ್ಭುತ ಪ್ರದರ್ಶನ ತೋರಿ ಪದೇ ಪದೆ ನಾಕೌಟ್ ಪಂದ್ಯಗಳಲ್ಲಿ ಎಡವುತ್ತಿರುವ ಕಾರಣ ಆಫ್ರಿಕಾಗೆ ಚೋಕರ್ಸ್ ಪಟ್ಟ ಅಂಟಿಕೊಂಡಿತ್ತು. 2024ರ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ನಲ್ಲಿ ಭಾರತದ ವಿರುದ್ಧ ಮುಗ್ಗರಿಸಿತ್ತು. 

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ 7 ವರ್ಷದ ಹಳೆಯ ಟ್ವೀಟ್ ವೈರಲ್: ಅಂತಹದ್ದೇನಿದೆ ಅದರಲ್ಲಿ