ಮುಂಬೈ: ಡಬ್ಲ್ಯುಪಿಎಲ್ ಕೂಟದಲ್ಲಿ ಅಂತೂ ಇಂತೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಳಿಗೆ ಬಂದಿದೆ. ಇಂದಿನ ಪಂದ್ಯದಲ್ಲಿ ಆರ್ ಸಿಬಿ ಬೌಲರ್ ಗಳು ಎದುರಾಳಿ ಯುಪಿ ವಾರಿಯರ್ಸ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ್ದಾರೆ.
ಟಾಸ್ ಗೆದ್ದ ಆರ್ ಸಿಬಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಅದಕ್ಕೆ ತಕ್ಕಂತೆ ಬೌಲರ್ ಗಳೂ ಪ್ರದರ್ಶನ ನೀಡಿದರು. ಒಂದು ಹಂತದಲ್ಲಿ ಯುಪಿ 5 ರನ್ ಗೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಈ ವೇಳೆ ಕಿರನ್ ನವ್ ಗಿರೆ 22 ರನ್ ಗಳಿಸಿದರು. ಸಂಕಷ್ಟದಲ್ಲಿದ್ದ ಯುಪಿಗೆ ಚೇತರಿಕೆ ನೀಡಿದ್ದು ಗ್ರೇಸ್ ಹ್ಯಾರಿಸ್ ಅವರು 46 ರನ್ ಗಳಿಸಿ ಔಟಾದರು. ಅಂತಿಮವಾಗಿ ಯುಪಿ 19.3 ಓವರ್ ಗಳಲ್ಲಿ 135 ರನ್ ಗಳಿಗೆ ಆಲೌಟ್ ಆಯಿತು.
ಆದರೆ ಆರ್ ಸಿಬಿ ಇಂದು ಬೌಲಿಂಗ್ ವಿಭಾಗಕ್ಕೆ ಲೆಗ್ ಸ್ಪಿನ್ನರ್ ಆಶಾ ಶೋಭನಾ ಅವರನ್ನು ಕರೆತಂದಿದ್ದು ಕ್ಲಿಕ್ ಆಯ್ತು. ಶೋಭನಾ 2 ವಿಕೆಟ್ ಕಬಳಿಸಿ ಮಿಂಚಿದರು. ಶ್ರೇಯಾಂಕ ಪಾಟೀಲ್ ಕೊಂಚ ದುಬಾರಿಯಾಗಿದರೂ 1 ವಿಕೆಟ್ ಕಬಳಿಸಿದರು. ಉಳಿದೆಲ್ಲಾ ಬೌಲರ್ ಗಳೂ ಯಶಸ್ವಿಯಾದರು. ಸೋಫಿ ಡಿವೈನ್ 2, ಎಲ್ಸೆ ಪೆರಿ 3 ವಿಕೆಟ್, ಮೇಘನಾ ಶಟ್ 1 ವಿಕೆಟ್ ಕಬಳಿಸಿದರು. ಬಹುಶಃ ಇಂದಿನ ಪ್ರದರ್ಶನವನ್ನು ಆರ್ ಸಿಬಿ ಎರಡು ಪಂದ್ಯಗಳಷ್ಟು ಹಿಂದೆಯೇ ತೋರಿದ್ದರೆ ಈ ಹೀನಾಯ ಪರಿಸ್ಥಿತಿ ಬರುತ್ತಿರಲಿಲ್ಲ.