ಡಬ್ಲ್ಯುಪಿಎಲ್: ಕೊನೆಗೂ ಆರ್ ಸಿಬಿಗೆ ಸಿಕ್ಕಿತ್ತು ಮೊದಲ ಗೆಲುವು

Webdunia
ಗುರುವಾರ, 16 ಮಾರ್ಚ್ 2023 (08:30 IST)
ಮುಂಬೈ: ಡಬ್ಲ್ಯುಪಿಎಲ್ ಕೂಟದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್ ಸಿಬಿಗೆ ಕೊನೆಗೂ ಗೆಲುವಿನ ಸಿಹಿ ಸಿಕ್ಕಿದೆ. ಯುಪಿ ವಾರಿಯರ್ಸ್ ವಿರುದ್ಧ ಆರ್ ಸಿಬಿ 5 ವಿಕೆಟ್ ಗಳ ಗೆಲುವು ಸಂಪಾದಿಸಿದೆ.
 

ನಿನ್ನೆ ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿಯರ್ಸ್ 19.3 ಓವರ್ ಗಳಲ್ಲಿ 135 ರನ್ ಗೆ ಆಲೌಟ್ ಆಗಿತ್ತು. ಈ ಮೊತ್ತ ಬೆನ್ನತ್ತಿದ ಆರ್ ಸಿಬಿ 18 ಓವರ್ ಗಳಲ್ಲಿ 5 ವಿಕೆಟ್ ಗೆ 136 ರನ್ ಗಳಿಸಿ ಮೊದಲ ಗೆಲುವಿನ ಸಂಭ್ರಮ ಪಡೆದುಕೊಂಡಿತು.

ಆರಂಭದಲ್ಲಿಯೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾದ ಆರ್ ಸಿಬಿಗೆ ನೆರವಾಗಿದ್ದು ಕನಿಕಾ ಅಹುಜಾ. 30 ಎಸೆತಗಳಿಂದ 46 ರನ್ ಸಿಡಿಸಿದ ಕನಿಕಾ ಆರ್ ಸಿಬಿ ಗೆಲುವನ್ನು ಖಾತ್ರಿಗೊಳಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ರಿಚಾ ಘೋಷ್ 31 ರನ್ ಗಳ ಕಾಣಿಕೆ ನೀಡಿದರು. ಹೀದರ್ ನೈಟ್ 24 ರನ್ ಗಳಿಸಿದರು. ನಾಯಕಿ ಸ್ಮೃತಿ ಮಂಧನಾ ಶೂನ್ಯಕ್ಕೆ ಔಟಾಗುವ ಮೂಲಕ ಮತ್ತೆ ಬ್ಯಾಟಿಂಗ್ ಬರಗಾಲ ಮುಂದುವರಿಸಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ ಪುರುಷ, ಮಹಿಳಾ ಕ್ರಿಕೆಟ್‌ ತಂಡಗಳಿಗೆ ಖುಲಾಯಿಸಿದ ಅದೃಷ್ಟ: ಏಷ್ಯನ್‌ ಗೇಮ್ಸ್‌ನಲ್ಲಿ ನೇರ ಕ್ವಾರ್ಟರ್‌ಗೆ

ಗೌತಮ್ ಗಂಭೀರ್ ಇಲ್ಲದ್ದಕ್ಕೇ ಟೀಂ ಇಂಡಿಯಾ ಗೆದ್ದಿದ್ದು: ಫುಲ್ ಟ್ರೋಲ್

IND VS ZIM: ಜಿಂಬಾಬ್ವೆ ವಿರುದ್ಧ ಗೆದ್ದು ಬೀಗಿ ಟಿ20 ಸೋಲಿನ ಸರಣಿಗೆ ಅಂತ್ಯ ಹಾಡಿದ ಭಾರತ

IND vs ZIM: ಭಾರತದ ಯುವ ಬೌಲರ್‌ಗಳಿಗೆ ತತ್ತರಿಸಿದ ಜಿಂಬಾಬ್ವೆ, ಗಳಿಸಿದ ರನ್ ಎಷ್ಟು ಗೊತ್ತಾ

IND vs ZIM: ಟೀಂ ಇಂಡಿಯಾಗೆ ಇಂದಿನಿಂದ ಜಿಂಬಾಬ್ವೆ ಟಿ20 ಸರಣಿ: ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments