Select Your Language

Notifications

webdunia
webdunia
webdunia
webdunia

WPL 2025: ವಿನ್ನರ್ ಆದ ಮುಂಬೈ ಇಂಡಿಯನ್ಸ್‌ ಬಾಚಿಕೊಂಡ ಹಣವೆಷ್ಟು

WPL 2025 Final, Mumbai Indians, Winner Prize

Sampriya

ಮುಂಬೈ , ಭಾನುವಾರ, 16 ಮಾರ್ಚ್ 2025 (12:15 IST)
Photo Courtesy X
ಮುಂಬೈ: ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8ರನ್‌ಗಳಿಂದ ಸೋಲಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡವು ಜಯಶಾಲಿಯಾಯಿತು. WPL 2025ರ ಫೈನಲ್‌ನಲ್ಲಿ ತಮ್ಮ ವಿನ್ನರ್ ಆಗುವ ಮೂಲಕ ಮುಂಬೈ ಇಂಡಿಯನ್ಸ್‌ ಎರಡನೇ ಬಾರೀ ಕಿರೀಟವನ್ನು ತನ್ನದಾಗಿಸಿಕೊಂಡಿತು.

ಚಾಂಪಿಯನ್ಸ್‌ ಆದ ಮುಂಬೈ ತಂಡವು ₹6 ಕೋಟಿ ಗಣನೀಯ ಬಹುಮಾನ ಪಡೆಯಿತು. ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್‌ ₹3 ಕೋಟಿ ಪಡೆಯಿತು.

ಹಿಂದಿನ ಋತುಗಳಲ್ಲಿ, ಮುಂಬೈ ಇಂಡಿಯನ್ಸ್ 2023 ರಲ್ಲಿ ಟ್ರೋಫಿಯನ್ನು ಗೆದ್ದಿತು, ನಂತರ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿಯನ್ನು ಗೆದ್ದಿತು. ಕಳೆದ ಮೂರು ವರ್ಷದಿಂದಲೂ ಫೈನಲ್‌ಗೆ ಬರುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ ಈ ಬಾರಿಯೂ ಟ್ರೋಫಿಯಿಂದ ದೂರ ಉಳಿಯಿತು.

ಡೆಲ್ಲಿ ಕ್ಯಾಪಿಟಲ್ಸ್ ಮೂರು ಬಾರಿ ಫೈನಲ್ ತಲುಪಿದ್ದರೂ, ಇನ್ನೂ WPL ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ, ಇದು ಅವರ ಗೆಲುವಿನ ಅನ್ವೇಷಣೆಯನ್ನು ಇನ್ನಷ್ಟು ರೋಮಾಂಚನಕಾರಿಯನ್ನಾಗಿ ಮಾಡಿದೆ.

ಇದೀಗ ಮುಂಬೈ ಇಂಡಿಯನ್ಸ್‌ ಬಿಸಿಸಿಐ ನೀಡುವ 6 ಕೋಟಿ ಬಹುಮಾನವನ್ನು ಪಡೆದು, ಗೆಲುವಿನ ನಗೆಯನ್ನು ಬೀರಿತು.

Share this Story:

Follow Webdunia kannada

ಮುಂದಿನ ಸುದ್ದಿ

WPL 2025 Final: ಎರಡನೇ ಬಾರೀ ಕಿರೀಟಕ್ಕೆ ಮುತ್ತಿಕ್ಕಿದ ಮುಂಬೈ ಇಂಡಿಯನ್ಸ್ ವನಿತೆಯರು