Select Your Language

Notifications

webdunia
webdunia
webdunia
webdunia

ಡಬ್ಲ್ಯುಪಿಎಲ್ 2024: ಸೋತ ಯುಪಿ ವಾರಿಯರ್ಸ್-ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ

ಡಬ್ಲ್ಯುಪಿಎಲ್ 2024: ಸೋತ ಯುಪಿ ವಾರಿಯರ್ಸ್-ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ

Krishnaveni K

ಬೆಂಗಳೂರು , ಸೋಮವಾರ, 26 ಫೆಬ್ರವರಿ 2024 (08:41 IST)
ಬೆಂಗಳೂರು: ಡಬ್ಲ್ಯುಪಿಎಲ್ 2024 ರಲ್ಲಿ ಇಂದು ಮೊದಲ ಪಂದ್ಯ ಸೋತಿರುವ ಯುಪಿ ವಾರಿಯರ್ಸ್-ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆಯಲಿದೆ.

ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಇದುವರೆಗೆ ಮೂರು ಪಂದ್ಯಗಳು ನಡೆದಿದ್ದು, ಆ ಪೈಕಿ ಯುಪಿ ವಾರಿಯರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ಮೊದಲ ಪಂದ್ಯವಾಡಿದೆ. ಈ ಪೈಕಿ ಯುಪಿ ವಾರಿಯರ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೋತಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿತ್ತು.

ಡೆಲ್ಲಿ ಕ್ಯಾಪಿಟಲ್ಸ್ ಚೊಚ್ಚಲ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನವಿತ್ತಿತ್ತು. ಆದರೆ ಮುಂಬೈ ವಿರುದ್ಧ ಮಾತ್ರ ಮುಗ್ಗರಿಸಿತ್ತು. ಇದೀಗ ಮತ್ತೆ ಮುಂಬೈ ವಿರುದ್ಧ ಸೋತಿದೆ. ಹಾಗಿದ್ದರೂ ತೀವ್ರ ಪೈಪೋಟಿ ನೀಡಿತ್ತು. ಮೆಗ್ ಲ್ಯಾನಿಂಗ್, ಜೆಮಿಮಾ ರೊಡ್ರಿಗಸ್, ಶಫಾಲಿ ವರ್ಮ ಮುಂತಾದ ಪ್ರಬಲ ಬ್ಯಾಟಿಂಗ್ ಅಸ್ತ್ರ ಡೆಲ್ಲಿ ಬಳಿಯಿದೆ.

ಡೆಲ್ಲಿಗೆ ಹೋಲಿಸಿದರೆ ಯುಪಿ ಕೊಂಚ ದುರ್ಬಲ ತಂಡವೆನಿಸಬಹುದು. ಕಳೆದ ಆವೃತ್ತಿಯಲ್ಲೂ ಯುಪಿ ವಾರಿಯರ್ಸ್ ಅಷ್ಟೊಂದು ಉತ್ತಮ ಪ್ರದರ್ಶನ ನೀಡಿರಲಿಲ್ಲ. ಹಾಗಿದ್ದರೂ ಡ್ಯಾನಿ ವ್ಯಾಟ್, ಕಿರನ್ ನವಿಗರೆರಂತಹ ಉತ್ತಮ ಬ್ಯಾಟಿಗರು ತಂಡದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಆರ್ ಸಿಬಿಗೆ ಉತ್ತಮ ಪೈಪೋಟಿ ನೀಡಿದ್ದ ಯುಪಿ ವಾರಿಯರ್ಸ್ ಕೊನೆಯ ಕ್ಷಣದಲ್ಲಿ ಸೋಲುವ ಮೂಲಕ ತಾನು ಉತ್ತಮ ಪೈಪೋಟಿ ನೀಡಬಲ್ಲೆ ಎಂದು ಸಾಬೀತುಪಡಿಸಿತ್ತು. ಇಂದಿನ ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದ್ದು, ಜಿಯೋ ಸಿನಿಮಾದಲ್ಲಿ ನೇರಪ್ರಸಾರ ವೀಕ್ಷಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

IND vs ENG: ಟೀಂ ಇಂಡಿಯಾ ಗೆಲುವು ನಾಳೆಗೆ ಕಾದಿರಿಸಲಾಗಿದೆ