ಡಬ್ಲ್ಯುಪಿಎಲ್ 2024: ಡೆಲ್ಲಿ ಆರಂಭಿಕರ ಅಬ್ಬರಕ್ಕೆ ಬಸವಳಿದ ಆರ್ ಸಿಬಿ

Krishnaveni K
ಬುಧವಾರ, 6 ಮಾರ್ಚ್ 2024 (21:07 IST)
Photo Courtesy: Twitter
ದೆಹಲಿ: ಡಬ್ಲ್ಯುಪಿಎಲ್ 2024 ರ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಜೈಂಟ್ಸ್ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದು 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 199 ರನ್ ಪೇರಿಸಿದೆ.

ಇಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿಗೆ ಲೌರಾ ವೋಲ್ವಾರ್ಡ್ತ್ ಮತ್ತು ನಾಯಕಿ ಬೆತ್ ಮೂನಿ ಭರ್ಜರಿ ಆರಂಭ ನೀಡಿದರು. ಮೊದಲ ವಿಕೆಟ್ ಗೆ ಈ ಜೋಡಿ 140 ರನ್ ಗಳ ಜೊತೆಯಾಟವಾಡಿತು. ಆದರೆ ಲೌರಾ 76 ರನ್ ಗಳಿಸಿದ್ದಾಗ ದುರದೃಷ್ಟವಶಾತ್ ರನೌಟ್ ಆದರು. ಕೊನೆಯ ಎರಡು ಓವರ್ ಗಳಲ್ಲಿ ಡೆಲ್ಲಿ ನಾಲ್ಕು ವಿಕೆಟ್ ಕಳೆದುಕೊಳ್ಳದೇ ಇದ್ದಿದ್ದರೆ ಬಹುಶಃ ಮೊತ್ತ 200 ರ ಗಡಿ ದಾಟುತ್ತಿತ್ತು.

ಆದರೆ ಇನ್ನೊಂದೆಡೆ ತಮ್ಮ ಭರ್ಜರಿ ಆಟ ಮುಂದುವರಿಸಿದ ಬೆತ್ ಮೂನಿ 85 ರನ್ ಗಳಿಸಿ ಕೊನೆಯವರೆಗೆ ಅಜೇಯರಾಗುಳಿದರು.  ಇನ್ನೊಂದೆಡೆ ಅವರಿಗೆ ಸಾಥ್ ನೀಡಿದ ಫೋಬೆ ಲಿಚ್ ಫೀಲ್ಡ್ ರನ್ ಗಳಿಸಿದರು. ಆರ್ ಸಿಬಿ ಪರ ಇಂದು ಏಳು ಬೌಲರ್ ಗಳು ಕಣಕ್ಕಿಳಿದರೂ ಸೋಫಿ ಮೊಲಿನಾಕ್ಸ್ ಮತ್ತು ಜಾರ್ಜಿಯಾ ವಾರೆ ಹಾಮ್ ಗೆ ಮಾತ್ರ ತಲಾ 1 ವಿಕೆಟ್ ಸಿಕ್ಕಿತ್ತು. ಆರ್ ಸಿಬಿಯ ಏಕ್ತಾ ಬಿಷ್ತ್ ಎರಡು ರನೌಟ್ ಗೆ ಕಾರಣರಾದರು.

ಆರ್ ಸಿಬಿ ಬೌಲರ್ ಗಳು ಮತ್ತೊಮ್ಮೆ ಶಿಸ್ತಿನ ದಾಳಿ ಸಂಘಟಿಸಲು ವಿಫಲರಾದರು. ಇದೀಗ ಆರ್ ಸಿಬಿ ಗೆಲ್ಲಲು ಪ್ರತೀ ಓವರ್ ಗೆ 10 ರನ್ ಗಳಂತೇ ಭರ್ತಿ 200 ರನ್ ಗಳಿಸಬೇಕಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶ್ರೇಯಸ್ ಅಯ್ಯರ್ ಗಾಗಿ ಸೂರ್ಯ ಕುಮಾರ್ ಯಾದವ್ ತಾಯಿ ಪೂಜೆ: ಎಂಥಾ ಅನುಬಂಧ

IND vs AUS T20: ಮಳೆಗೆ ಕೊಚ್ಚಿ ಹೋದ ಮೊದಲ ಟಿ20

IND vs AUS T20: ಟಾಸ್ ಗೆದ್ದ ಆಸ್ಟ್ರೇಲಿಯಾ, ಮತ್ತೆ ಹರ್ಷಿತ್ ರಾಣಾಗೆ ಜೈ ಎಂದ ಗಂಭೀರ್

ರೋಹಿತ್ ಶರ್ಮಾ ಈಗ ವಿಶ್ವ ನಂ 1: ವಯಸ್ಸಾಯ್ತು ಎಂದವರಿಗೆ ತಕ್ಕ ತಿರುಗೇಟು ಕೊಟ್ಟ ಹಿಟ್ ಮ್ಯಾನ್

ಶ್ರೇಯಸ್ ಅಯ್ಯರ್ ನಿಂದ ಸದ್ಯದಲ್ಲೇ ಸಿಗಲಿದೆ ಸರ್ಪೈಸ್: ಬಿಸಿಸಿಐ

ಮುಂದಿನ ಸುದ್ದಿ
Show comments