Daily Horoscope

ಡಬ್ಲ್ಯುಪಿಎಲ್ 2024: ಡೆಲ್ಲಿ ಕ್ಯಾಪಿಟಲ್ಸ್ ಗೆ ಮೊದಲ ಗೆಲುವು

Krishnaveni K
ಮಂಗಳವಾರ, 27 ಫೆಬ್ರವರಿ 2024 (08:30 IST)
Photo Courtesy: Twitter
ಬೆಂಗಳೂರು: ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಗೆಲುವಿನ ಸಿಹಿ ಕಂಡಿದೆ. ಯುಪಿ ವಾರಿಯರ್ಸ್ ವಿರುದ್ಧ 9 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.

ಕಳೆದ ಪಂದ್ಯದಲ್ಲಿ ಸೋತಿದ್ದ ಡೆಲ್ಲಿಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿಯರ್ಸ್ ಮರಿಝನೆ ಕಪ್, ರಾಧಾ ಯಾದವ್ ಬೌಲಿಂಗ್ ದಾಳಿಗೆ ಸಿಲುಕಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಲಷ್ಟೇ ಶಕ್ತವಾಯಿತು.

ಈ ಮೊತ್ತ ಬೆನ್ನತ್ತಿದ ಡೆಲ್ಲಿಗೆ ಶಫಾಲಿ ವರ್ಮ, ಮೆಗ್ ಲ್ಯಾನಿಂಗ್ ಭರ್ಜರಿ ಆರಂಭ ನೀಡಿದರು. ಶತಕದ ಜೊತೆಯಾಟವಾಡಿದ ಜೋಡಿ ಇನ್ನೇನು ಗೆಲುವಿನ ರನ್ ಗಳಿಸಬೇಕು ಎನ್ನುವಷ್ಟರಲ್ಲಿ ಬೇರ್ಪಟ್ಟಿತು. ಈ ಪೈಕಿ ಶಫಾಲಿ ವರ್ಮ 4 ಸಿಕ್ಸರ್, 6 ಬೌಂಡರಿ ಸಹಿತ ಅಜೇಯ 64, ಮೆಗ್ ಲ್ಯಾನಿಂಗ್ 6 ಬೌಂಡರಿ ಸಹಿತ 51 ರನ್ ಗಳಿಸಿ ಔಟಾದರು. ಕೊನೆಗೆ ಬೌಂಡರಿ ಮೂಲಕ ಜೆಮಿಮಾ ರೊಡ್ರಿಗಸ್ ಗೆಲುವಿನ ಔಪಚಾರಿಕತೆ ಮುಗಿಸಿದರು. ಅಂತಿಮವಾಗಿ ಡೆಲ್ಲಿ ಕೇವಲ 14.3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿತು. ಯುಪಿ ಪರ ಏಕೈಕ ವಿಕೆಟ್ ಸೋಫಿ ಎಕ್ಲೆಸ್ಟೋನ್ ಪಾಲಾಯಿತು.

ಕಳೆದ ಪಂದ್ಯದಲ್ಲಿ ಡೆಲ್ಲಿ ತಂಡ ಮುಂಬೈ ವಿರುದ್ಧ ಸೋತಿತ್ತು. ಇದು ಡೆಲ್ಲಿಗೆ ಎರಡನೇ ಪಂದ್ಯವಾಗಿತ್ತು. ಎರಡನೇ ಪಂದ್ಯದ ಮೂಲಕ ಈ ಕೂಟದಲ್ಲಿ ಮೊದಲ ಗೆಲುವು ಕಂಡಿತು. ಆದರೆ ಅತ್ತ ಯುಪಿ ವಾರಿಯರ್ಸ್ ಆಡಿದ ಎರಡೂ ಪಂದ್ಯಗಳನ್ನು ಸೋತು ನಿರಾಶೆ ಅನುಭವಿಸಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AFG: ಅಫ್ಘಾನಿಸ್ತಾನ ವಿರುದ್ಧ ವಿಶ್ವದಾಖಲೆಯ ಶತಕ ಸಿಡಿಸಿ ವಿಶಿಷ್ಟವಾಗಿ ಸಂಭ್ರಮಿಸಿದ ಅಭಿಷೇಕ್ ಶರ್ಮಾ Video

ಟೀಂ ಇಂಡಿಯಾ ಮುಖ್ಯ ಆಯ್ಕೆಗಾರನ ಸ್ಥಾನಕ್ಕೆ ಅಜಿತ್ ಅಗರ್ಕರ್ ಬಳಿಕ ಕೇಳಿಬರುತ್ತಿದೆ ಈ ಅಚ್ಚರಿಯ ಹೆಸರು

ಏಷ್ಯನ್ ಗೇಮ್ಸ್ 2026 ಆರಂಭ ಯಾವಾಗ, ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ಸಂಪೂರ್ಣ ವಿವರ

ಪಾಕಿಸ್ತಾನದ ಯುವ ಕ್ರಿಕೆಟಿಗನಿಗೆ ಜಸ್ಪ್ರೀತ್ ಬುಮ್ರಾಗೆ ಆರು ಸಿಕ್ಸರ್ ಚಚ್ಚೋದೇ ಗುರಿಯಂತೆ ನೋಡ್ರಪ್ಪಾ..

ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಗೆ ಶಾಕ್ ಕೊಡಲು ಮುಂದಾದ ಬಿಸಿಸಿಐ

ಮುಂದಿನ ಸುದ್ದಿ
Show comments