ವಿಶ್ವಕಪ್ ಫೈನಲ್: ಮನರಂಜನಾ ಕಾರ್ಯಕ್ರಮಗಳ ಪಟ್ಟಿ ನೀಡಿದ ಬಿಸಿಸಿಐ

Webdunia
ಶನಿವಾರ, 18 ನವೆಂಬರ್ 2023 (11:22 IST)
Photo Courtesy: Twitter
ಅಹಮ್ಮದಾಬಾದ್: ನರೇಂದ್ರ ಮೋದಿ ಮೈದಾನದಲ್ಲಿ ನಾಳೆ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ನಡುವೆ ಕೆಲವು ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಬಿಸಿಸಿಐ ಮಾಹಿತಿ ನೀಡಿದೆ.

ನಾಳೆ ಏರ್ ಶೋ, ಲೇಸರ್ ಲೈಟ್ ಶೋ, ಹಾಡುಗಳು ಸೇರಿದಂತೆ ಪಂದ್ಯಕ್ಕೆ ಮುನ್ನ, ನಡುವೆ ಮತ್ತು ಬಳಿಕ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಒದಗಿಸಲು ಬಿಸಿಸಿಐ ಸಿದ್ಧತೆ ಮಾಡಿಕೊಂಡಿದೆ.

ಪಂದ್ಯಕ್ಕೆ ಮುನ್ನ ವಾಯುಪಡೆಯ ಸೂರ್ಯಕಿರಣ್ ಏರ್ ಶೋ ನಡೆಯಲಿದೆ. ಬಾನಂಗಳದಲ್ಲಿ ಚಿತ್ತಾರ ಮೂಡಿಸಲು ಈಗಾಗಲೇ ಸೂರ್ಯಕಿರಣ್ ತಂಡ ತಾಲೀಮು ನಡೆಸಿದೆ. ಇದು ಟಾಸ್ ಆದ ಬಳಿಕ ಮಧ್ಯಾಹ್ನ 1.35 ರಿಂದ 1.50 ರ ನಡುವೆ ನಡೆಯಲಿದೆ. ಅದಾದ ಬಳಿಕ ರಾಷ್ಟ್ರಗೀತೆ ಮೊಳಗಲಿದೆ.

ಡ್ರಿಂಕ್ಸ್ ಬ್ರೇಕ್ ನ ನಡುವೆ ಗುಜರಾತಿ ಗಾಯಕ ಆದಿತ್ಯ ಗದ್ವಿ ಅವರಿಂದ ಕಾರ್ಯಕ್ರಮವಿರಲಿದೆ. ಎರಡನೇ ಡ್ರಿಂಕ್ಸ್ ಬ್ರೇಕ್ ನಡುವೆ ಲೇಸರ್ ಮತ್ತು ಲೈಟ್ ಶೋ ಇರಲಿದೆ. ಇನಿಂಗ್ಸ್ ಬ್ರೇಕ್ ನ ನಡುವೆ ಪ್ರೀತಮ್ ಚಕ್ರವರ್ತಿ, ಜೊನಿತಾ ಗಾಂಧಿ, ನಕಾಶ ಆಝಿಝ್, ಅಮಿತ್ ಮಿಶ್ರ, ಆಕಾಶ ಸಿಂಗ್ ಮತ್ತು ತುಷಾರ್ ಜೋಶಿ ಕಾರ್ಯಕ್ರಮ ನೀಡಲಿದ್ದಾರೆ.

ಒಟ್ಟಾರೆ ಇಡೀ ದಿನ ಕ್ರಿಕೆಟ್ ಜೊತೆಗೆ ಅಭಿಮಾನಿಗಳ ಮನರಂಜಿಸಲು ಬಿಸಿಸಿಐ ಭರ್ಜರಿ ಕಾರ್ಯಕ್ರಮಗಳನ್ನೇ ಹಮ್ಮಿಕೊಂಡಿದೆ. ವಿಶ್ವಕಪ್‍ ಉದ್ಘಾಟನಾ ಪಂದ್ಯದಲ್ಲಿ ಯಾವುದೇ ಮನರಂಜನೆಯಿಲ್ಲದೇ ಪೇಲವವಾಗಿತ್ತು. ಆದರೆ ಸಮಾರೋಪದಲ್ಲಿ ಆ ಕೊರತೆ ನೀಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಧೋನಿ, ಕೊಹ್ಲಿ ಸೋತಿಲ್ವಾ, ಶ್ರೇಯಸ್ ಕೂಡಾ ಅವರಂತೆ ಗ್ರೇಟ್ ಕ್ಯಾಪ್ಟನ್ ಆಗ್ತಾನೆ: ಅಣ್ಣನ ಪರ ತಂಗಿ ಬ್ಯಾಟಿಂಗ್ Video

IND vs ENG: ಟೀಂ ಇಂಡಿಯಾಕ್ಕೆ ಇಂದು ಕೊನೆ ಚಾನ್ಸ್, ಈ ಆಟಗಾರನಿಗೆ ಕೊಕ್ ಸಾಧ್ಯತೆ

IND vs ENG: ವಿ ವಾಂಟ್ ಸಂಜು ಎಂದು ಜೋರಾಗಿ ಕೂಗಿದ ಫ್ಯಾನ್ಸ್: ಗಂಭೀರ್, ತಿಲಕ್ ವರ್ಮ ಮುಖಭಾವ ನೋಡಬೇಕು Video

IND vs ENG: ಟೀಂ ಇಂಡಿಯಾ ಹೀನಾಯವಾಗಿ ಸೋತ ಮೇಲೂ ಪತ್ರಿಕಾಗೋಷ್ಠಿಯಲ್ಲಿ ಕೋಚ್ ಗೌತಮ್ ಗಂಭೀರ್ ಹೀಗೆ ಹೇಳೋದಾ Video

IND vs ENG: ಇಂದು ವೈಭವ್ ಸೂರ್ಯವಂಶಿ ಆಡೋದು ಡೌಟ್, ಎಲ್ಲದಕ್ಕೂ ಕನ್ನಡಿಗ ರಘು ಕಾರಣ Video

ಮುಂದಿನ ಸುದ್ದಿ
Show comments