Daily Horoscope
✕

ಕೋಚ್ ರಾಹುಲ್ ದ್ರಾವಿಡ್ ಬರ್ತ್ ಡೇಗೆ ಗೆಲುವಿನ ಉಡುಗೊರೆ ಕೊಡುತ್ತಾ ಟೀಂ ಇಂಡಿಯಾ?

Krishnaveni K
ಗುರುವಾರ, 11 ಜನವರಿ 2024 (09:50 IST)
ಮೊಹಾಲಿ: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಇಂದಿನ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ ಅದು ಕೋಚ್ ರಾಹುಲ್ ದ್ರಾವಿಡ್ ಗೆ ವಿಶೇಷ ಉಡುಗೊರೆಯಾಗಲಿದೆ.

ಯಾಕೆಂದರೆ ಗುರು ದ್ರಾವಿಡ್ ಗೆ ಇಂದು ಜನ್ಮದಿನದ ಸಂಭ್ರಮ. ದ್ರಾವಿಡ್ ಇಂದು 51 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವರ ಹುಟ್ಟುಹಬ್ಬ ದಿನವೇ ಟೀಂ ಇಂಡಿಯಾ ಪಂದ್ಯವಾಡುತ್ತಿರುವುದು ವಿಶೇಷ.

ಟೀಂ ಇಂಡಿಯಾದ ವಾಲ್ ಎಂದೇ ಖ್ಯಾತರಾಗಿದ್ದ ದ್ರಾವಿಡ್ ಭಾರತ ಕಂಡ ದಿಗ್ಗಜ ಆಟಗಾರರಲ್ಲೊಬ್ಬರು. ಟೀಂ ಇಂಡಿಯಾ ಕ್ಯಾಪ್ಟನ್ ಆಗಿ ಅವರ ಸಾಧನೆ ಅಷ್ಟೇನೂ ಇರಲಿಲ್ಲ. ಆದರೆ ಕೋಚ್ ಆಗಿ ಹಲವು ಉದಯೋನ್ಮುಖ ಆಟಗಾರರು ಬೆಳಕಿಗೆ ಬರಲು ಕಾರಣರಾದವರು.

ಒಟ್ಟು 509 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ದ್ರಾವಿಡ್ 24,208 ರನ್ ಗಳಿಸಿದ್ದಾರೆ. 48 ಅಂತಾರಾಷ್ಟ್ರೀಯ ಶತಕಗಳೂ ಇದರಲ್ಲಿ ಸೇರಿವೆ. ಈ ಅಪರೂಪದ ಸಾಧಕನಿಗೆ ಇಂದು ಟೀಂ ಇಂಡಿಯಾ ಗೆಲುವಿನ ಉಡುಗೊರೆ ನೀಡುವ ನಿರೀಕ್ಷೆಯಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ಕಣ್ಣಾ ಮುಚ್ಚೇ ಕೂ…. ಪೆವಿಲಿಯನ್ ನಿಂದಲೇ ಮಕ್ಕಳಿಗೆ ರೋಹಿತ್ ಶರ್ಮಾ ಸಿಗ್ನಲ್, ಕಣ್ಣಾಮುಚ್ಚಾಲೆ ಆಟ: ಕ್ಯೂಟ್ Video

IND vs NZ: ನಡಿಯೋ ಲೇಯ್… ನ್ಯೂಜಿಲೆಂಡ್ ಬ್ಯಾಟಿಗ ಸೀಫರ್ಟ್ ಗೆ ವೇಗಿ ಗುರ್ನೂರ್ ಬ್ರಾರ್ ಹದ್ದು ಮೀರಿದ ವರ್ತನೆ: Video

ಹಿರಿಯ ಅಭಿಮಾನಿಯ ಆಸೆ ಈಡೇರಿಸಿದ ರೋಹಿತ್, ವಿರಾಟ್ Video

ಐಪಿಎಲ್ ಇತಿಹಾಸದಲ್ಲೇ ಬಿಗ್ ಟ್ರೇಡ್: ಪಂಜಾಬ್ ಕಿಂಗ್ಸ್‌ಗೆ ಹಾರ್ದಿಕ್ ಪಾಂಡ್ಯ, ಮುಂಬೈ ಇಂಡಿಯನ್ಸ್‌ಗೆ ಅರ್ಶ್‌ದೀಪ್ ಸಿಂಗ್

ಹೃದಯವಂತ ನಮ್ಮ ಕೆಎಲ್… ತಮಗೆ ಸಿಕ್ಕ ಸ್ಮಾರ್ಟ್ ಫೋನ್ ಗಿಫ್ಟ್ ಆಗಿ ನೀಡಿದ ಕೆಎಲ್ ರಾಹುಲ್ Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments