ಕೊಲೊಂಬೋ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಪಾಕಿಸ್ತಾನದ ಲಾಹೋರ್ ನಲ್ಲಿ ನಡೆದ ಮೊದಲ ಸೂಪರ್ ಫೋರ್ ಪಂದ್ಯವನ್ನು ಪಾಕ್ ತಂಡ ಭರ್ಜರಿಯಾಗಿ ಗೆದ್ದುಕೊಂಡಿದೆ.
ಉಳಿದ ಎಲ್ಲಾ ಸೂಪರ್ ಫೋರ್ ಹಂತದ ಪಂದ್ಯಗಳು ಶ್ರೀಲಂಕಾದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೆ ಈ ಪಂದ್ಯಗಳಿಗೆ ಶೇ.80 ರಷ್ಟು ಮಳೆಯಾಗುವ ಸಾಧ‍್ಯತೆಯಿದೆ ಎನ್ನುವ ವರದಿಗಳು ಆತಂಕ ತಂದಿದೆ. ಭಾರತ-ಪಾಕ್ ಪಂದ್ಯಕ್ಕೆ ಮಾತ್ರ ಮೀಸಲು ದಿನವೂ ನಿಗದಿಯಾಗಿದೆ. ಉಳಿದ ಪಂದ್ಯಗಳು ನಡೆಯದೇ ಇದ್ದರೆ ಆಗ ಅಂಕಗಳು ಪ್ರಮುಖವಾಗಲಿದೆ.
ಅಂಕಗಳ ಆಧಾರದಲ್ಲಿ ಪಾಕಿಸ್ತಾನ ನೇರವಾಗಿ ಫೈನಲ್ ತಲುಪಲಿದೆ. ಆದರೆ ಉಳಿದಂತೆ ಶ್ರೀಲಂಕಾ, ಭಾರತ, ಬಾಂಗ್ಲಾ ತಂಡಗಳು ತಲಾ 3 ಅಂಕ ಗಳಿಸಲಿವೆ. ಬಾಂಗ್ಲಾ ಈಗಾಗಲೇ ಮೊದಲ ಸೂಪರ್ ಫೋರ್ ಪಂದ್ಯ ಸೋತಿರುವುದರಿಂದ ಫೈನಲ್ ರೇಸ್ ನಿಂದ ಹೊರಬೀಳಲಿದೆ. ಉಳಿದಂತೆ ಲಂಕಾ-ಭಾರತ ನಡುವೆ ಟಾಸ್ ನಡೆಯಲಿದೆ. ಟಾಸ್ ಗೆದ್ದ ತಂಡ ಫೈನಲ್ ತಲುಪಲಿದೆ.