ಕೊಲೊಂಬೋ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಸೂಪರ್ ಫೋರ್ ಹಂತದಲ್ಲಿ ಟೀಂ ಇಂಡಿಯಾ ಭಾನುವಾರ ಪಾಕಿಸ್ತಾನ ವಿರುದ್ಧ ಪಂದ್ಯವಾಡಲಿದೆ. ಆದರೆ ಈ ಪಂದ್ಯಕ್ಕೆ ಮೊದಲು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗೆ ದೊಡ್ಡ ತಲೆನೋವು ಎದುರಾಗಿದೆ.
ತಂಡಕ್ಕೆ ಕೆಎಲ್ ರಾಹುಲ್ ಪುನರಾಗಮನವಾಗಿರುವುದರಿಂದ ಈಗ ಅವರಿಗಾಗಿ ಆಡುವ ಬಳಗದಿಂದ ಹೊರಗುಳಿಯುವುದು ಯಾರು ಎಂಬ ಪ್ರಶ್ನೆ ಎದುರಾಗಿದೆ. ಈ ಮೊದಲು ರಾಹುಲ್ ಸ್ಥಾನದಲ್ಲಿ ಇಶಾನ್ ಕಿಶನ್ ವಿಕೆಟ್ ಕೀಪರ್ ಬ್ಯಾಟಿಗನಾಗಿ ಕಣಕ್ಕಿಳಿದಿದ್ದರು. ಅವರು ಈ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅದರಲ್ಲೂ ಕಳೆದ ಪಾಕ್ ವಿರುದ್ಧದ ಲೀಗ್ ಪಂದ್ಯದಲ್ಲಿ 80 ಪ್ಲಸ್ ರನ್ ಸಿಡಿಸಿ ತಂಡಕ್ಕೆ ಆಧಾರವಾಗಿದ್ದರು.
ಇದೀಗ ರಾಹುಲ್ ಗಾಗಿ ಇಶಾನ್ ಸ್ಥಾನ ಬಿಟ್ಟುಕೊಡಬೇಕಾದರೆ ಅದು ಇಶಾನ್ ಗಾಗುವ ದೊಡ್ಡ ಅನ್ಯಾಯವಾಗಲಿದೆ. ಹೀಗಾದಲ್ಲಿ ಶ್ರೇಯಸ್ ಅಯ್ಯರ್ ಸ್ಥಾನ ಕಳೆದುಕೊಳ್ಳಬೇಕಾಗಬಹುದು. ಆದರೆ ಅಯ್ಯರ್ ಕೂಡಾ ಈಗಷ್ಟೇ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ಹೀಗಾಗಿ ಅವರಿಗೆ ಇನ್ನೂ ಎರಡು ಪಂದ್ಯಗಳಲ್ಲಿ ಅವಕಾಶ ನೀಡಬೇಕಾಗುತ್ತದೆ. ಹೀಗಾಗಿ ಈಗ ರಾಹುಲ್ ಆಡುತ್ತಾರಾ ಅಥವಾ ಅವರು ಆಡಿದರೆ ಅವರಿಗಾಗಿ ಸ್ಥಾನ ತ್ಯಾಗ ಮಾಡುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ.