ಹಾರ್ದಿಕ್ ಪಾಂಡ್ಯ, ನತಾಶಾ ವಿಚ್ಛೇದನದ ಬಳಿಕ ಮಗ ಯಾರ ಬಳಿಯಿರುತ್ತಾನೆ

Krishnaveni K
ಶುಕ್ರವಾರ, 19 ಜುಲೈ 2024 (09:04 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಅಧಿಕೃತವಾಗಿ ವಿಚ್ಛೇದನದ ಬಗ್ಗೆ ಪ್ರಕಟಣೆ ನೀಡಿದ್ದಾರೆ. ಈ ಮೂಲಕ ಎಲ್ಲಾ ರೂಮರ್ ಗಳಿಗೂ ತೆರೆ ಎಳೆದಿದ್ದಾರೆ.

ನಾವಿಬ್ಬರೂ ನಮ್ಮ ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಕೊನೆ ಹಾಡುತ್ತಿದ್ದೇವೆ. ನಮ್ಮ ನಡುವಿನ ಭಿನ್ನಾಭಿಪ್ರಾಯ ಸರಿಪಡಿಸಲು ತುಂಬಾ ಪ್ರಯತ್ನಪಟ್ಟೆವು. ಆದರೆ ನಾವು ಜೊತೆಯಾಗಿರುವುದಕ್ಕಿಂತ ನಮ್ಮ ಕ್ಷೇಮಕ್ಕೆ ಬೇರೆಯಾಗಿರುವುದೇ ಉತ್ತಮವೆನಿಸಿತು. ಹೀಗಾಗಿ ಬೇರೆಯಾಗುತ್ತಿದ್ದೇವೆ. ನಮ್ಮ ಖಾಸಗಿತನವನ್ನು ಗೌರವಿಸಿ, ಈ ಕಷ್ಟದ ಸಮಯದಲ್ಲಿ ಜೊತೆಗಿರುತ್ತೀರಿ ಎಂದು ನಂಬಿದ್ದೇವೆ ಎಂದು ಹಾರ್ದಿಕ್ ಮತ್ತು ನತಾಶಾ ಇಬ್ಬರೂ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ದಂಪತಿಗೆ ಅಗಸ್ತ್ಯ ಎನ್ನುವ ಮುದ್ದಾದ ಮಗನೂ ಇದ್ದಾನೆ. ದಂಪತಿ ಬೇರೆಯಾದ ಬಳಿಕ ಮಗ ಯಾರ ಬಳಿಯಿರುತ್ತಾನೆ ಎಂಬ ಪ್ರಶ್ನೆಗಳಿಗೂ ದಂಪತಿ ಉತ್ತರಿಸಿದ್ದಾರೆ. ನಾನು ಮತ್ತು ನತಾಶಾ ಇಬ್ಬರೂ ಮಗನ ಜವಾಬ್ಧಾರಿ ಹೊಂದಿದ್ದೇವೆ. ಅವನಿಗೆ ಯಾವುದೇ ಕಾರಣಕ್ಕೂ ಯಾವ ಕೊರತೆಯೂ ಆಗದಂತೆ ನಾವಿಬ್ಬರೂ ಸಮನಾಗಿ ಜವಾಬ್ಧಾರಿ ಹಂಚಿಕೊಳ್ಳಲಿದ್ದೇವೆ ಎಂದು ಹಾರ್ದಿಕ್ ಹೇಳಿದ್ದಾರೆ.

ಹಾರ್ದಿಕ್ ಮತ್ತು ನತಾಶಾ ದಾಂಪತ್ಯ ವಿರಸದ ಬಗ್ಗೆ ಬಹಳ ದಿನಗಳಿಂದ ರೂಮರ್ ಗಳಿತ್ತು. ಇತ್ತೀಚೆಗೆ ನತಾಶಾ ತಮ್ಮ ಮಗನನ್ನು ಕರೆದುಕೊಂಡು ತಮ್ಮ ತವರು ಸರ್ಬಿಯಾಗೆ ಲಗೇಜ್ ಸಮೇತ ವಿಮಾನವೇರಿದ್ದರು. ಇದರ ಬಳಿಕವೇ ದಂಪತಿ ತಮ್ಮ ವಿಚ್ಛೇದನದ ಬಗ್ಗೆ ಅಧಿಕೃತವಾಗಿ ಪ್ರಕಟಣೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಮೃತಿ ಮಂಧಾನ, ಪಾಲಾಶ್ ಮುಚ್ಚಲ್ ಹೊಸ ಮದುವೆ ದಿನಾಂಕ ಫಿಕ್ಸ್

ವಿವಾದಗಳ ಬೆನ್ನಲ್ಲೇ ಏರ್ ಪೋರ್ಟ್ ನಲ್ಲಿ ಆಯ್ಕೆ ಸಮಿತಿಯ ಪ್ರಗ್ಯಾನ್ ಓಝಾ ಜೊತೆ ಕೊಹ್ಲಿ ಗಂಭೀರ ಚರ್ಚೆ video

ವಿರಾಟ್ ಕೊಹ್ಲಿ ಶತಕ ಸಿಡಿಸಿದಾಗ ಅಗ್ರೆಸಿವ್ ಆಗಿ ರೋಹಿತ್ ಶರ್ಮಾ ಹೇಳಿದ್ದೇನು: ಕೊನೆಗೂ ರಿವೀಲ್

ಗೌತಮ್ ಗಂಭೀರ್ ವಿರುದ್ಧ ಸೀನಿಯರ್ ಆಟಗಾರರು ಸಿಟ್ಟಾಗಿರುವುದಕ್ಕೆ ಕಾರಣ ಬಯಲು

ವಿರಾಟ್ ಕೊಹ್ಲಿ, ಧೋನಿ ಮೇಲೆ ಗೌತಮ್ ಗಂಭೀರ್ ಗೆ ವೈಮನಸ್ಯ ಹುಟ್ಟಿಕೊಂಡಿದ್ದು ಇದೇ ಕಾರಣಕ್ಕಾ

ಮುಂದಿನ ಸುದ್ದಿ
Show comments