Select Your Language

Notifications

webdunia
webdunia
webdunia
Friday, 4 April 2025
webdunia

ಆರ್ ಸಿಬಿ ಕ್ವೀನ್ ಸ್ಮೃತಿ ಮಂದಾನಾಗೆ ಆರ್ ಸಿಬಿ ಸ್ಪೆಷಲ್ ಪೋಸ್ಟ್: ಕ್ರಿಕೆಟ್ ಸುಂದರಿಯ ನೆಟ್ ವರ್ತ್ ಎಷ್ಟು

Smriti Mandhana

Krishnaveni K

ಮುಂಬೈ , ಗುರುವಾರ, 18 ಜುಲೈ 2024 (10:19 IST)
Photo Credit: Instagram
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಆಟಗಾರ್ತಿ, ಆರ್ ಸಿಬಿ ಕ್ವೀನ್ ಸ್ಮೃತಿ ಮಂದಾನಾಗೆ ಇಂದು ಜನ್ಮದಿನದ ಸಂಭ್ರಮ. ಸ್ಮೃತಿ ಹುಟ್ಟುಹಬ್ಬಕ್ಕೆ ಆರ್ ಸಿಬಿ ಹೊಸ ಸಿಡಿಪಿಯೊಂದನ್ನು ಬಿಡುಗಡೆ ಮಾಡಿದೆ.

ಭಾರತ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಕಿಂಗ್ ಎಂದು ಕರೆಸಿಕೊಂಡರೆ ಸ್ಮೃತಿಯನ್ನು ಕ್ವೀನ್ ಎಂದೇ ಕರೆಯುತ್ತಾರೆ. ಯಾಕೆಂದರೆ ಮಿಥಾಲಿ ರಾಜ್ ಬಳಿಕ ಭಾರತ ಮಹಿಳಾ ಕ್ರಿಕೆಟ್ ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುವ ಏಕೈಕ ಸ್ಟಾರ್ ಆಟಗಾರ್ತಿ ಎಂದರೆ ಸ್ಮೃತಿ ಮಂದಾನಾ. ಆಕೆ ಕೇವಲ ಸೌಂದರ್ಯದಿಂದ ಮಾತ್ರವಲ್ಲ, ತಮ್ಮ ಆಟದ ಮೂಲಕ ಅಭಿಮಾನಿಗಳಿಂದ ಕ್ವೀನ್ ಎಂದು ಕರೆಯಿಸಿಕೊಳ್ಳುತ್ತಾರೆ.

ವಿಶ್ವದ ಸುಂದರ ಮಹಿಳಾ ಕ್ರಿಕೆಟ್ ತಾರೆಯರ ಪೈಕಿ ಸ್ಮೃತಿ ಕೂಡಾ ಒಬ್ಬರು. ಡಬ್ಲ್ಯುಪಿಎಲ್ ನಲ್ಲಿ ಆರ್ ಸಿಬಿ ತಂಡದ ನಾಯಕಿಯಾಗಿರುವ ಸ್ಮೃತಿ ಮೊದಲ ಬಾರಿಗೆ ಕಪ್ ಗೆದ್ದುಕೊಟ್ಟು ಕನ್ನಡಿಗರ ಮನಸ್ಸು ಗೆದ್ದವರು. ಮಹಿಳಾ ಕ್ರಿಕೆಟ್ ನ ತಾರಾ ಕ್ರಿಕೆಟ್ ಆಟಾಗಾರ್ತಿಯಾಗಿರುವ ಸ್ಮೃತಿ ಇದೀಗ 27 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಆರ್ ಸಿಬಿ ಕ್ವೀನ್ ಡ್ರೆಸ್ ನಲ್ಲಿರುವ ಸ್ಮೃತಿಯ ಸಿಡಿಪಿಯೊಂದನ್ನು ಬಿಡುಗಡೆ ಮಾಡಿ ಗೌರವ ಸಲ್ಲಿಸಿದೆ.

ಹಲವಾರು ಜಾಹೀರಾತು ಉತ್ಪನ್ನಗಳಿಗೆ ರಾಯಭಾರಿಯಾಗಿರುವ ಸ್ಮೃತಿ ಮಂದಾನಾ ಸುಮಾರು 33 ರಿಂದ 40 ಕೋಟಿ ಆಸ್ತಿ ಮೌಲ್ಯ ಹೊಂದಿದ್ದಾರೆ. ಡಬ್ಲ್ಯುಪಿಎಲ್ ನಲ್ಲೂ ಗರಿಷ್ಠ ಸಂಭಾವನೆ ಪಡೆಯುವ ಆಟಗಾರ್ತಿ ಎಂಬ ಖ್ಯಾತಿ ಹೊಂದಿದ್ದಾರೆ. ಬಿಸಿಸಿಐ ಎ ದರ್ಜೆಯ ಗುತ್ತಿಗೆ ಹೊಂದಿರುವ ಸ್ಮೃತಿ ವಾರ್ಷಿಕವಾಗಿ 50 ಲಕ್ಷ ಪಡೆಯುತ್ತಾರೆ. ಒಂದು ಕಾಲದಲ್ಲಿ ಸ್ವಂತ ಮನೆಯಿಲ್ಲದೇ ಮಧ್ಯಮ ವರ್ಗದ ಕಡು ಕಷ್ಟವನ್ನು ಕಂಡು ಬೆಳೆದಿದ್ದ ಸ್ಮೃತಿ ಈಗ ಕೋಟಿಗಳ ಒಡತಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಾರಿಗುಡಿಯಲ್ಲಿ ಮಾಡಿದ್ದ ಪ್ರಾರ್ಥನೆ ಫಲಿಸಿತು, ಸೂರ್ಯಕುಮಾರ್ ಯಾದವ್ ಗೆ ಸಿಕ್ತು ಕ್ಯಾಪ್ಟನ್ಸಿ