ನವದೆಹಲಿ: ಇತ್ತೀಚೆಗೆ ಅಪಘಾತದಿಂದಾಗಿ ಚಿಕಿತ್ಸೆ ಪಡೆಯುತ್ತಿರುವ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ಗೆ ಈ ವರ್ಷದ ಐಪಿಎಲ್ ಆಡಲು ಸಾಧ್ಯವಾಗದು ಎನ್ನಲಾಗಿದೆ.
ವೈದ್ಯರ ಅಭಿಪ್ರಾಯದ ಪ್ರಕಾರ ರಿಷಬ್ ಇನ್ನು ಆರು ತಿಂಗಳು ಕ್ರಿಕೆಟ್ ನಿಂದ ದೂರವುಳಿಯಬೇಕಾದೀತು. ಹೀಗಾದಲ್ಲಿ ರಿಷಬ್ ಗೆ ಐಪಿಎಲ್ ಆಡಲು ಸಾಧ‍್ಯವಾಗದು.
ರಿಷಬ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ. ಒಂದು ವೇಳೆ ಅವರಿಗೆ ಈ ಐಪಿಎಲ್ ಆಡಲು ಸಾಧ್ಯವಾಗದೇ ಇದ್ದರೆ ಐಪಿಎಲ್ ಫ್ರಾಂಚೈಸಿಗೆ ಹೊಸ ನಾಯಕನನ್ನು ನೇಮಿಸಬೇಕಾಗುತ್ತದೆ. ಹೀಗಾದಲ್ಲಿ ಹೈದರಾಬಾದ್ ತಂಡದ ನಾಯಕರಾಗಿ ಅನುಭವ ಹೊಂದಿರುವ ಡೇವಿಡ್ ವಾರ್ನರ್, ಪ್ರತಿಭಾವಂತ ಕ್ರಿಕೆಟಿಗ ಪೃಥ್ವಿ ಶಾ ಇವರಲ್ಲಿ ಯಾರಾದರೂ ಒಬ್ಬರು ಡೆಲ್ಲಿ ತಂಡದ ನಾಯಕರಾಗುವ ಸಾಧ್ಯತೆಯಿದೆ.