Select Your Language

Notifications

webdunia
webdunia
webdunia
webdunia

ವಿರಾಟ್ ಬ್ಯಾಟಿಂಗ್ ಆರ್ಭಟಕ್ಕೆ ಕಡಿವಾಣ ಹಾಕಲು ಹರ್ಭಜನ್ ಉಪಾಯ

harbhajan singh
ನವದೆಹಲಿ: , ಶನಿವಾರ, 23 ಜುಲೈ 2016 (17:15 IST)
2016 ವಿರಾಟ್ ಕೊಹ್ಲಿ ವರ್ಷ ಎಂದೇ ಕ್ರಿಕೆಟ್ ಇತಿಹಾಸದಲ್ಲಿ ಹೇಳಬಹುದು. ಆಸ್ಟ್ರೇಲಿಯಾದಲ್ಲಿ ಏಕದಿನ ಪಂದ್ಯಗಳಿಂದ ಹಿಡಿದು ವೆಸ್ಟ್ ಇಂಡೀಸ್‌ನ ಈಗಿನ ಟೆಸ್ಟ್ ಸರಣಿವರೆಗೆ ಯಾವುದೇ ಬೌಲರ್‌ಗೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆರ್ಭಟಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.  ವೇಗ ಅಥವಾ ಸ್ಪಿನ್ ಎಲ್ಲವುದಕ್ಕೂ ವಿರಾಟ್ ಬಳಿ ಸಿದ್ಧ ಉತ್ತರವಿರುತ್ತದೆ. ಕೊಹ್ಲಿ ಜಾಸನ್ ಹೋಲ್ಡರ್ ತಂಡದ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಮೊದಲ ದ್ವಿಶತಕ ದಾಖಲಿಸಿ ತಮ್ಮ ಆಟವನ್ನು ಇನ್ನೊಂದು ಮಟ್ಟಕ್ಕೆ ಒಯ್ದರು.
 
ಎಲ್ಲಕ್ಕಿಂತ ಮುಖ್ಯವಾಗಿ ಅವರು ತೊಂದರೆಗೆ ಸಿಕ್ಕಿಬೀಳದೆ ಬ್ಯಾಟಿಂಗ್ ತುಂಬಾ ಸುಲಭವೆನ್ನುವಂತೆ ಆಡಿದರು.
ಈ ಪ್ರದರ್ಶನ ಹೀಗೆ ಮುಂದುವರಿದರೆ ಸರಣಿಯ ಮುಂದಿನ ಅವಧಿಯಲ್ಲಿ ಬೌಲರುಗಳು ಗಂಭೀರ ಸಮಸ್ಯೆಗೆ ಸಿಕ್ಕಿಬೀಳಲಿದ್ದಾರೆ.
ಬೌಲರುಗಳ ಸಂಕಷ್ಟವನ್ನು ಅರ್ಥಮಾಡಿಕೊಂಡ ಹರ್ಭಜನ್ ಸಿಂಗ್ ಶನಿವಾರ ವಿರಾಟ್ ಅವರ ಬ್ಯಾಟಿಂಗ್ ಆರ್ಭಟ ತಡೆಯಲು ಪೂರ್ಣ ಸ್ವರೂಪದ ಉಪಾಯವನ್ನು ವಿಂಡೀಸ್ ತಂಡಕ್ಕೆ ಆಫರ್ ಮಾಡಿದ್ದಾರೆ.
 
ವಿಂಡೀಸ್ ವಿರಾಟ್ ಕೊಹ್ಲಿ ಅವರ ರನ್ ಪ್ರವಾಹ ತಡೆಯಲು ಏಕಮಾತ್ರ ಮಾರ್ಗ ಕೊಹ್ಲಿಯ ಕಿಟ್ ಬ್ಯಾಗ್ ಅಡಗಿಸಿಡುವುದು ಎಂದು ಟ್ವಿಟರ್‌ನಲ್ಲಿ ಹರ್ಭಜನ್ ಸಿಂಗ್ ಜೋಕ್ ಮಾಡಿದ್ದಾರೆ.
 
ವಿರಾಟ್ ಅವರ ಪ್ರಸಕ್ತ ಫಾರಂ ಪರಿಗಣಿಸಿದರೆ, ವಿರಾಟ್ ಬ್ಯಾಟಿನಿಂದ ರನ್ ಸುರಿಮಳೆ ತಡೆಯಲು ಇದೊಂದೇ ಉಪಾಯವಾಗಿ ಕಾಣುತ್ತದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಬ್ಯಾಟಿಂಗ್ ಕ್ರಮಾಂಕದಲ್ಲಿ ಅಶ್ವಿನ್‌ಗೆ ಬಡ್ತಿ: ಕುಂಬ್ಳೆ, ಕೊಹ್ಲಿಗೆ ಧನ್ಯವಾದ