Select Your Language

Notifications

webdunia
webdunia
webdunia
webdunia

ಬ್ಯಾಟಿಂಗ್ ಕ್ರಮಾಂಕದಲ್ಲಿ ಅಶ್ವಿನ್‌ಗೆ ಬಡ್ತಿ: ಕುಂಬ್ಳೆ, ಕೊಹ್ಲಿಗೆ ಧನ್ಯವಾದ

ಬ್ಯಾಟಿಂಗ್ ಕ್ರಮಾಂಕದಲ್ಲಿ ಅಶ್ವಿನ್‌ಗೆ ಬಡ್ತಿ: ಕುಂಬ್ಳೆ, ಕೊಹ್ಲಿಗೆ ಧನ್ಯವಾದ
ಆ್ಯಂಟಿಗುವಾ , ಶನಿವಾರ, 23 ಜುಲೈ 2016 (16:31 IST)
ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ವೃತ್ತಿಜೀವನದ ಮೂರನೇ ಶತಕ ಗಳಿಸಿದ ರವಿಚಂದ್ರನ್ ಅಶ್ವಿನ್ ತಮಗೆ 6ನೇ ಕ್ರಮಾಂಕಕ್ಕೆ ಬಡ್ತಿ ನೀಡಿದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಮತ್ತು ಹೊಸ ಕೋಚ್ ಅನಿಲ್ ಕುಂಬ್ಳಗೆ ಧನ್ಯವಾದ ಹೇಳಿದ್ದಾರೆ.
 
 253 ಎಸೆತಕ್ಕೆ 113 ರನ್ ಶತಕ ಗಳಿಸಿದ ಅಶ್ವಿನ್, ಟಾಪ್ ಏಳರಲ್ಲಿ ಬ್ಯಾಟಿಂಗ್ ಮಾಡುವುದು ತಮ್ಮ ದೀರ್ಘಕಾಲೀನ ಇಚ್ಛೆಯಾಗಿದ್ದು, ಕೊಹ್ಲಿ ಮತ್ತು ಕುಂಬ್ಳೆ ಅದಕ್ಕೆ ಬೆಂಬಲಿಸಿದ್ದರು ಎಂದು ಹೇಳಿದರು.
 
ನನ್ನನ್ನು 6ನೇ ಕ್ರಮಾಂಕಕ್ಕೆ ಇಳಿಸುವ ಮೂಲಕ ನನ್ನಲ್ಲಿ ವಿಶ್ವಾಸ ಇರಿಸಿದ ಕುಂಬ್ಳೆ ಮತ್ತು ವಿರಾಟ್‌ಗೆ ಧನ್ಯವಾದ ಸೂಚಿಸುತ್ತೇನೆ.  ಹಿಂದೆ ಕೂಡ ನಾನು ಚೆನ್ನಾಗಿ ಆಡಿದ್ದರೂ ನಿಜವಾಗಲೂ ಕ್ರಮಾಂಕದಲ್ಲಿ ಬಡ್ತಿ ನೀಡಿರಲಿಲ್ಲ.
 
ಕೊಹ್ಲಿ ಬೆಳಿಗ್ಗೆ ಕರೆ ಮಾಡಿ ಸಹಾಗಿಂತ ಮುಂಚೆ ನೀವು 6ನೆಯವರಾಗಿ ಬ್ಯಾಟಿಂಗ್ ಮಾಡುತ್ತೀರಿ ಎಂದಾಗ ನನ್ನ ಆತ್ಮವಿಶ್ವಾಸ ವೃದ್ಧಿಸಿತು ಎಂದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

200 ರನ್ ಸ್ಕೋರಿನಲ್ಲಿ ವಿರಾಟ ದರ್ಶನ: ಐದು ವಿಸ್ಮಯಕಾರಿ ದಾಖಲೆಗಳು