Select Your Language

Notifications

webdunia
webdunia
webdunia
webdunia

200 ರನ್ ಸ್ಕೋರಿನಲ್ಲಿ ವಿರಾಟ ದರ್ಶನ: ಐದು ವಿಸ್ಮಯಕಾರಿ ದಾಖಲೆಗಳು

200 ರನ್ ಸ್ಕೋರಿನಲ್ಲಿ ವಿರಾಟ ದರ್ಶನ: ಐದು ವಿಸ್ಮಯಕಾರಿ ದಾಖಲೆಗಳು
ನವದೆಹಲಿ: , ಶನಿವಾರ, 23 ಜುಲೈ 2016 (15:25 IST)
ರನ್ ಯಂತ್ರ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಅದ್ಭುತ ಫಾರಂನೊಂದಿಗೆ ಮುಂದುವರಿದಿದ್ದಾರೆ. ಏಕದಿನ ಮತ್ತು ಟಿ 20 ಮಾದರಿಗಳಲ್ಲಿ ಮೇಲುಗೈ ಸಾಧಿಸಿದ ಭಾರತದ ಟೆಸ್ಟ್ ನಾಯಕ ಸುದೀರ್ಘ ಮಾದರಿ ಕ್ರಿಕೆಟ್‌ನಲ್ಲಿ ಕೂಡ ತಮ್ಮ ಛಾಪು ಮೂಡಿಸಿದ್ದಾರೆ.
 
27 ವರ್ಷದ ನಾಯಕ ಆಂಟಿಗುವಾದಲ್ಲಿ 200 ರನ್ ಸ್ಕೋರ್ ಮಾಡಿ ತಮ್ಮ ತಂಡವನ್ನು ಸದೃಢ ಸ್ಥಿತಿಯಲ್ಲಿ ಇರಿಸಿದ್ದಾರೆ.
ಇದು ವಿರಾಟ್ ಅವರ ವೃತ್ತಿಜೀವನದಲ್ಲಿ ಚೊಚ್ಚಲ ದ್ವಿಶತಕ.
 
200 ರನ್ ಗಡಿಯನ್ನು ಮುಟ್ಟುವ ದಾರಿಯಲ್ಲಿ ದೆಹಲಿ ಬ್ಯಾಟ್ಸ್‌ಮನ್ ಐದು ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ.
 ವಿದೇಶದಲ್ಲಿ ವಿರಾಟ್ ಬ್ಯಾಟಿಂಗ್ ಸರಾಸರಿ(74.7) ಬ್ರಾಡ್‌ಮನ್ (85.6) ನಂತರದ ಎರಡನೇ ಸ್ಥಾನದಲ್ಲಿದ್ದಾರೆ. 
 
10 ಅಥವಾ ಅದಕ್ಕಿಂತ ಹೆಚ್ಚು ಇನ್ನಿಂಗ್ಸ್ ಆಡಿದ ನಾಯಕರ ಪೈಕಿ ಕೊಹ್ಲಿ ಕ್ಯಾರಿಬಿಯನ್‌ನಲ್ಲಿ ದ್ವಿಶತಕ ಸಿಡಿಸಿದ ಏಕಮಾತ್ರ ಪ್ರವಾಸಿ ತಂಡದ ನಾಯಕ  ವಿದೇಶದಲ್ಲಿ ಭಾರತದ ನಾಯಕ ಗಳಿಸಿದ ಅತ್ಯಧಿಕ ಸ್ಕೋರ್ ಇದಾಗಿದೆ. ವಿರಾಟ್ ಕೊಹ್ಲಿ ಅವರು ಭಾರತದ ನಾಯಕ ವಿದೇಶದಲ್ಲಿ ಗಳಿಸಿದ ಅತಿ ಹೆಚ್ಚು (5) ಶತಕಗಳಿಗೆ ಅಜರುದ್ದೀನ್ ಅವರನ್ನು  ಸರಿಗಟ್ಟಿದ್ದಾರೆ.
 
2015ರ ಆಗಸ್ಟ್ ಒಂದರಿಂದ ಕೊಹ್ಲಿ 2901 ರನ್ ಸ್ಕೋರ್ ಮಾಡಿದ್ದು, ಯಾವುದೇ ಆಟಗಾರನ ಅತ್ಯಧಿಕ ಸ್ಕೋರಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಂತ ಹೊಟೆಲ್ ಆರಂಭಿಸಿದ ರೊನಾಲ್ಡೊ ಹೆಸರಿನಲ್ಲಿ ಏರ್‌ಪೋರ್ಟ್