Select Your Language

Notifications

webdunia
webdunia
webdunia
webdunia

ಕಿರು ಓವರುಗಳ ಕ್ರಿಕೆಟ್‌ ಯಶಸ್ಸಿನ ಬಳಿಕ ಟೆಸ್ಟ್‌ಗಳಲ್ಲಿ ಮಿಂಚಲು ಕೊಹ್ಲಿಗೆ ಸಕಾಲ

west indies
ನವದೆಹಲಿ: , ಗುರುವಾರ, 21 ಜುಲೈ 2016 (15:47 IST)
ಭಾರತದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಸೀಮಿತ ಓವರುಗಳ ಕ್ರಿಕೆಟ್‌ನಲ್ಲಿ ರನ್ ಯಂತ್ರವಾಗಿದ್ದು, ಆಸ್ಟ್ರೇಲಿಯಾಕ್ಕೆ ಭಾರತದ ಪ್ರವಾಸ, ಏಷ್ಯಾ ಕಪ್ 2016ನಿಂದ ಐಸಿಸಿ ವಿಶ್ವ ಟ್ವೆಂಟಿ20ವರೆಗೆ ದೆಹಲಿ ಬ್ಯಾಟ್ಸ್‌ಮನ್ ಉತ್ತಮ ಫಾರಂನಲ್ಲಿದ್ದು, ಅಸಂಖ್ಯಾತ ದಾಖಲೆಗಳನ್ನು ಮುರಿದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೂಡ, ಕೊಹ್ಲಿ ಏಕಾಂಗಿಯಾಗಿ ರಾಯಲ್ ಚಾಲೆಂಜರ್ಸ್ ತಂಡವನ್ನು ಫೈನಲ್‌ಗೆ ಮುಟ್ಟಿಸಿದ್ದರು.
 
ಕೊಹ್ಲಿಯ ಅದ್ಭುತ ಫಾರಂ ವರ್ಣಿಸಲು ಕ್ರಿಕೆಟ್ ಪಂಡಿತರಿಗೆ ಪದಗಳೇ ಸಿಗುತ್ತಿಲ್ಲ. ಇಂದು ಗುರುವಾರ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಆಡಲಿದೆ. ಕಳೆದ ವರ್ಷ ಕೊಹ್ಲಿಯ ನಾಯಕತ್ವದಲ್ಲಿ ಭಾರತ ಶ್ರೀಲಂಕಾ ವಿರುದ್ಧ ಮನೋಜ್ಞವಾಗಿ ಆಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಸ್ವದೇಶಿ ಸರಣಿಯಲ್ಲಿ 3-0ಯಿಂದ ಗೆಲುವು ಗಳಿಸಿದೆ.
 
ಸ್ವದೇಶದಿಂದ ಹೊರಗೆ ಆಡುವಾಗಲೂ ಗೆಲುವಿನ ಗತಿಯನ್ನು ಕಾಯ್ದುಕೊಳ್ಳುವುದು ಕೊಹ್ಲಿಗೆ ಈಗ ಸವಾಲಾಗಿ ಪರಿಣಮಿಸಿದೆ.
ಕೊಹ್ಲಿ ಹೊಸ ಕೋಚ್ ಅನಿಲ್ ಕುಂಬ್ಳೆ ಸಹಯೋಗದಲ್ಲಿ ವಿದೇಶಿ ಪಂದ್ಯಗಳಲ್ಲಿ ಸೋಲಿನ ಸಂಕಷ್ಟಕ್ಕೆ ತೆರೆಎಳೆಯುವರೇ ಕಾದು ನೋಡಬೇಕು. ತಂಡದ ಸಂಯೋಜನೆಯನ್ನು ಸರಿಯಾಗಿ ಇರಿಸಲು ವಿಂಡೀಸ್ ತಿಣುಕಾಡುತ್ತಿರುವ ನಡುವೆ, ಭಾರತದ ಫಾರಂ ಕಂಡುಕೊಂಡಿರುವ ಅನೇಕ ಬ್ಯಾಟ್ಸ್‌ಮನ್‌ಗಳು ವೆಸ್ಟ್ ಇಂಡೀಸ್ ಬೌಲರುಗಳಿಗೆ ಸಂಕಷ್ಟ ತರಬಲ್ಲರು.

ಭಾರತಕ್ಕೆ ಕಳವಳದ ಸಂಗತಿಯೆಂದರೆ ವೇಗಿಗಳ ಫಾರಂ ಕೊರತೆ. ವಿದೇಶಗಳಲ್ಲಿ ಎರಡು ಬಾರಿ ತಮ್ಮ ಎದುರಾಳಿಗಳನ್ನು ಔಟ್ ಮಾಡಲು ಈ ಬೌಲರುಗಳು ತಿಣುಕಾಡಿದ್ದರು. ಎರಡು ತಂಡಗಳ ನಡುವೆ ಮೊದಲ ಟೆಸ್ಟ್ ಆ್ಯಂಟಿಗುವಾದ  ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಇಂದು ನಡೆಯಲಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಸ್ಥಿರವಾದ ಪ್ರಗತಿಗೆ ವೆಸ್ಟ್ ಇಂಡೀಸ್ ಎದುರುನೋಡುತ್ತಿದೆ: ಜಾಸನ್ ಹೋಲ್ಡರ್