ತಮ್ಮ ಯುವ ಮತ್ತು ಅನನುಭವಿ ತಂಡ ಕ್ಷಿಪ್ರಗತಿಯಲ್ಲಿ ಸುಧಾರಿಸುತ್ತದೆಂದು ತಾವು ನಿರೀಕ್ಷಿಸಿಲ್ಲ ಎಂದು ವೆಸ್ಟ್ ಇಂಡೀಸ್ ನಾಯಕ ಜಾಸನ್ ಹೋಲ್ಡರ್ ತಿಳಿಸಿದ್ದಾರೆ. ಭಾರತ ವಿರುದ್ಧ ನಾಲ್ಕು ಟೆಸ್ಟ್ ಸರಣಿಯನ್ನು ಸ್ಥಿರವಾದ ಪ್ರಗತಿಯೊಂದಿಗೆ ಆತ್ಮವಿಶ್ವಾಸದಿಂದ ಎದುರುನೋಡುವುದಾಗಿ ಅವರು ತಿಳಿಸಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ತೋರುವುದು ಅಂತಿಮ ಗುರಿಯಾಗಿದೆ. ಕಳೆದ ಬಾರಿ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ನಾವು ಉತ್ತಮವಾಗಿ ಆರಂಭಿಸಲಿಲ್ಲ. ಟೆಸ್ಟ್‌ನಲ್ಲಿ ನಾವು ಯುವ ತಂಡದಿಂದ ದಾಪುಗಾಲು ಹಾಕುವುದನ್ನು ನಿರೀಕ್ಷಿಸುವುದಿಲ್ಲ. ಸುಧಾರಣೆಗೆ ಸಂಬಂಧಿಸಿದಂತೆ ಸ್ಥಿರವಾದ ಪ್ರಗತಿ ಕಂಡುಬಂದಾಗ ನಾವು ಮುಂದೆ ಹೆಜ್ಜೆ ಇರಿಸುತ್ತೇವೆ ಎಂದರು.
ನಾಲ್ಕು ಟೆಸ್ಟ್ ಸರಣಿಯಲ್ಲಿ ಫಿಟ್ನೆಸ್ ಕುರಿತು ಪ್ರಾಮುಖ್ಯತೆ ನೀಡಬೇಕೆಂದು ಹೋಲ್ಡರ್ ಸೂಚಿಸಿದರು. ಇದಕ್ಕೆ ಮುಂಚೆ 2-3 ಟೆಸ್ಟ್ ಸರಣಿ ಆಡುತ್ತಿದ್ದೆವು. ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಿದ್ದು ಇದೇ ಮೊದಲು. ಆದ್ದರಿಂದ ಸಾಧ್ಯವಾದಷ್ಟು ನಮ್ಮ ದೇಹಗಳನ್ನು ಫಿಟ್ ಆಗಿಟ್ಟು ಸರಿಯಾಗಿ ನಿರ್ವಹಿಸುವುದು ಮುಖ್ಯವಾಗಿದೆ ಎಂದು ಹೋಲ್ಡರ್ ತಿಳಿಸಿದರು.
ವೆಸ್ಟ್ ಇಂಡೀಸ್ ಮಾರ್ಲನ್ ಸ್ಯಾಮುಯಲ್ಸ್ ಮತ್ತು ಬ್ರೇವೊ ಅವರ ಅನುಭವದ ಮಿಶ್ರಣದ ಮೇಲೆ ಅವಲಂಬಿತವಾಗಿದ್ದು, ಕೆಲವು ಯುವ ಆಟಗಾರರು ಸೇಂಟ್ ಕಿಟ್ಸ್‌ನಲ್ಲಿ ಈಗಾಗಲೇ ಭಾರತದ ಬೌಲಿಂಗ್ ರುಚಿ ಅನುಭವಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ