Select Your Language

Notifications

webdunia
webdunia
webdunia
webdunia

ಭಾರತದ ವಿರುದ್ಧ 2ನೇ ಟೆಸ್ಟ್‌ಗೆ ವಿಂಡೀಸ್ ಅಂಡರ್- 19 ವೇಗಿ ಅಲ್ಜಾರಿ ಜೋಸೆಫ್ ಸೇರ್ಪಡೆ

ಭಾರತದ ವಿರುದ್ಧ 2ನೇ ಟೆಸ್ಟ್‌ಗೆ ವಿಂಡೀಸ್ ಅಂಡರ್- 19 ವೇಗಿ ಅಲ್ಜಾರಿ ಜೋಸೆಫ್  ಸೇರ್ಪಡೆ
ಕಿಂಗ್‌ಸ್ಟನ್: , ಶುಕ್ರವಾರ, 29 ಜುಲೈ 2016 (17:59 IST)
ಟೆಸ್ಟ್‌ ಆಡಿರದ ಹದಿವಯಸ್ಸಿನ ವೇಗಿ ಅಲ್ಜಾರಿ ಜೋಸೆಫ್ ಅವರು ಭಾರತದ ವಿರುದ್ಧ ಎರಡನೇ ಟೆಸ್ಟ್‌ಗೆ 13 ಆಟಗಾರರ ವೆಸ್ಟ್ ಇಂಡೀಸ್ ತಂಡವನ್ನು ಸೇರಲಿದ್ದಾರೆಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.  ಅಂಡರ್ 19 ತಂಡಕ್ಕೆ ಮನೋಜ್ಞ ಬೌಲಿಂಗ್ ಸಾಧನೆಯನ್ನು 19 ವರ್ಷದ ಜೋಸೆಫ್ ಮಾಡಿದ್ದು, ವೆಸ್ಟ್ ಇಂಡೀಸ್ ತಂಡಕ್ಕೆ ಬಾಂಗ್ಲಾದೇಶದಲ್ಲಿ 13 ವಿಕೆಟ್ ಕಬಳಿಸಿ ವಿಶ್ವ ಕಪ್ ಜಯಿಸಿಕೊಟ್ಟಿದ್ದರು.  

ಭಾರತದ ಬಲಾಢ್ಯತೆಯ ವಿರುದ್ಧ ಅನನುಭವಿಗಳಂತೆ ಕಾಣುವ ವೆಸ್ಟ್ ಇಂಡೀಸ್ ತಂಡದಲ್ಲಿ ಬೇರಾವುದೇ ಬದಲಾವಣೆಯನ್ನು ಜಾಸ್ ಹೋಲ್ಡರ್ ತಂಡ ಮಾಡಿಲ್ಲ.
 
8 ಪ್ರಥಮ ದರ್ಜೆ ಪಂದ್ಯಗಳಲ್ಲಿ 24ವಿಕೆಟ್ ಕಬಳಿಸಿರುವ ಜೋಸೆಫ್, ಅಂಡರ್ 19 ಯುವ ವಿಶ್ವಕಪ್‌ನಲ್ಲಿ  ಗಂಟೆಗೆ 91.5 ಮೈಲು ವೇಗದ ಎಸೆತವನ್ನು ಬೌಲ್ ಮಾಡಿದ್ದಾರೆ.
 
ಅಲ್ಜಾರಿ ಐಸಿಸಿ ಯುವ ವಿಶ್ವ ಕಪ್‌ನಲ್ಲಿ ಅತ್ಯಂತ ತಜ್ಞತೆಯಿಂದ ಬೌಲಿಂಗ್ ಮಾಡಿದ್ದು, ನಮ್ಮ ಕೋಚಿಂಗ್ ಸಿಬ್ಬಂದಿಯ ವೃತ್ತಿಪರ ಮಾರ್ಗದರ್ಶನದಲ್ಲಿ ಮತ್ತು ವೇಗದ ಬೌಲಿಂಗ್ ಲಿಜೆಂಡ್ ಮ್ಯಾನೇಜರ್ ಜೋಯಿಲ್ ಗಾರ್ನರ್ ಉಪಸ್ಥಿತಿಯಲ್ಲಿ ಅನುಕೂಲ ಪಡೆಯುತ್ತಾರೆಂದು ವೆಸ್ಟ್ ಇಂಡೀಸ್ ಆಯ್ಕೆಸಮಿತಿಯ ಅಧ್ಯಕ್ಷ  ಕರ್ಟ್ನಿ ಬ್ರೌನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಕ್ರಿಕೆಟ್ ಫ್ಯಾನ್‌ಗೆ ಕೊಹ್ಲಿ ಹಸ್ತಾಕ್ಷರದ ಬ್ಯಾಟ್ ನೀಡುವ ಭರವಸೆ