ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು ಅಂಡರ್‌ಡಾಗ್ಸ್ ಆಗಿ ಟೆಸ್ಟ್ ಸರಣಿಯನ್ನು ಆರಂಭಿಸಿದರು. ವಿರಾಟ್ ಕೊಹ್ಲಿ ತಂಡದ ವಿರುದ್ಧ ಭಾರೀ ಸೋಲನ್ನು ಅನುಭವಿಸಿದ ಬಳಿಕ ನಾಲ್ಕು ಟೆಸ್ಟ್ ಸರಣಿಯ ಉಳಿದ ಪಂದ್ಯಗಳಲ್ಲಿ ಹಣಾಹಣಿ ಹೋರಾಟದ ಸಂಭವನೀಯತೆ ಮಬ್ಬಾಗಿದೆ.
ಈ ಫಲಿತಾಂಶವು ಐದು ದಿನಗಳ ಮಾದರಿ ಕ್ರಿಕೆಟ್ ಆಡುವುದರಲ್ಲಿ ಕ್ಯಾರಿಬಿಯನ್ ಆಟಗಾರರ ಸಾಮರ್ಥ್ಯವನ್ನು ಪ್ರಶ್ನಿಸಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಆಸಕ್ತಿ ಜೀವಂತವಾಗುಳಿಯಲು ಐಸಿಸಿ ಎರಡು ಹಂತದ ಮಾದರಿಯನ್ನು ಆಲೋಚಿಸುತ್ತಿರುವ ನಡುವೆ ಒಂದೊಮ್ಮೆ ಕ್ರಿಕೆಟ್ ದೈತ್ಯರು ಎನಿಸಿಕೊಂಡಿದ್ದ ವೆಸ್ಟ್ ಇಂಡೀಸ್ ಕ್ರಿಕೆಟ್‌ನ ಶೀಘ್ರ ಅವನತಿ ಶುಭಸುದ್ದಿಯಲ್ಲ. ಗ್ರೇಟ್ ವಿವಿಯನ್ ರಿಚರ್ಡ್ಸ್ ನಾಮಾಂಕಿತ ಮೈದಾನದಲ್ಲೇ ಅವರು ಸೋತಿದ್ದು ವ್ಯಂಗ್ಯವೆನಿಸಿದೆ.
ವೆಸ್ಟ್ ಇಂಡೀಸ್ ಐಸಿಸಿ ಟೆಸ್ಟ್ ಶ್ರೇಯಾಂಕಗಳಲ್ಲಿ 8ನೇ ಸ್ಥಾನಕ್ಕೆ ಕುಸಿದಿದ್ದು, ಐದು ದಿನಗಳ ಮಾದರಿಯಲ್ಲಿ ಕ್ಯಾರಿಬಿಯನ್ ತಂಡದ ಭವಿಷ್ಯ ಕುರಿತು ಪ್ರಶ್ನೆಗಳು ಎದ್ದಿವೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.