Select Your Language

Notifications

webdunia
webdunia
webdunia
webdunia

ಭಾರತಕ್ಕೆ ವೆಸ್ಟ್ ಇಂಡೀಸ್ ವಿರುದ್ಧ ಕ್ಲೀನ್ ಸ್ವೀಪ್ ಗುರಿ: ವಿರಾಟ್ ಕೊಹ್ಲಿ

ಭಾರತಕ್ಕೆ  ವೆಸ್ಟ್ ಇಂಡೀಸ್ ವಿರುದ್ಧ ಕ್ಲೀನ್ ಸ್ವೀಪ್ ಗುರಿ: ವಿರಾಟ್ ಕೊಹ್ಲಿ
ಆಂಟಿಗಾ , ಸೋಮವಾರ, 25 ಜುಲೈ 2016 (19:42 IST)
ಭಾರತ ವೆಸ್ಟ್ ಇಂಡೀಸ್ ವಿರುದ್ಧ ಆಂಟಿಗಾ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಮತ್ತು 92 ರನ್ ಜಯಸಾಧಿಸಿರುವುದು ಏಷ್ಯಾದ ಹೊರಗೆ ಅತೀ ದೊಡ್ಡ ಜಯ ಮಾತ್ರವಲ್ಲ. ಅನಿಲ್ ಕುಂಬ್ಳೆ ಅವರಿಗೆ ಕೋಚ್ ಹುದ್ದೆಯಲ್ಲಿ ಮೊದಲ ಜಯವಾಗಿದೆ. ಎಲ್ಲ ಒಳಿತುಗಳು ಒಟ್ಟಿಗೆ ಆಗುತ್ತಿರುವ ನಡುವೆ, ಸರಣಿಯಲ್ಲಿ ನಾವು ಕ್ಲೀನ್ ಸ್ವೀಪ್ ಸಾಧಿಸುತ್ತೇವೆ ಎಂದು ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
 
 ನಮಗೆ 4-0 ಗೆಲುವಿಗೆ ಅವಕಾಶ ಸಿಕ್ಕಿದರೆ ಯಾಕಾಗಬಾರದು. ನಾವು 2-0 ಮುನ್ನಡೆ ಸಾಧಿಸಿದರೆ, ಮುಂದಿನ ಎರಡು ಟೆಸ್ಟ್‌ಗಳಲ್ಲಿ ನಾವು ಡ್ರಾಗೆ ಆಡುವುದಿಲ್ಲ ಎಂದು ಕೊಹ್ಲಿ ಪಂದ್ಯ ಬಳಿಕದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
.
ಹೆಡ್ ಕೋಚ್ ಆಗಿ ಕುಂಬ್ಳೆ ಅವರ ಹೊಸ ಅಭಿಯಾನವು ಇದಕ್ಕಿಂತ ಚೆನ್ನಾಗಿರಲು ಸಾಧ್ಯವಿಲ್ಲ. ಸುದೀರ್ಘಕಾಲ ಆಡಿರುವ ಅವರು ಜಯದ ಬಗ್ಗೆ ಆಟಗಾರರು ಹೇಗೆ ಭಾವಿಸುತ್ತಾರೆಂಬುದನ್ನು ಅರ್ಥಮಾಡಿಕೊಂಡಿದ್ದಾರೆ. ಅವರು ಪ್ರತಿಯೊಬ್ಬರನ್ನೂ ಅಭಿನಂದಿಸಿ ಆಟಕ್ಕೆ ಉತ್ತಮ ಕೊಡುಗೆ ನೀಡಿದವರನ್ನು ವಿಶೇಷವಾಗಿ ಪ್ರಸ್ತಾಪಿಸಿದರು ಎಂದು ಕೊಹ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
 
 ಗೆಲುವು ಒಂದು ಸಾಂಕ್ರಾಮಿಕದಂತಿದ್ದು, ಅದೊಂದು ಒಳ್ಳೆಯ ಅಭ್ಯಾಸ. ಜಗತ್ತಿನಲ್ಲಿ ಸದೃಢ ತಂಡವಾಗಿ ರೂಪುಗೊಳ್ಳಲು ನಮ್ಮ ಹುಡುಗರು ಗೆಲುವಿನ ಅಭ್ಯಾಸವನ್ನು ಸಾಧಿಸಬಹುದು ಎಂದು ಕೊಹ್ಲಿ ವಿಶ್ಲೇಷಿಸಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹೀನಾ ಸಿದು ರಿಯೊ ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಪದಕದ ಗುರಿ