ನವದೆಹಲಿ: ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಜೊತೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪತ್ನಿ ಆರತಿ ಸೆಹ್ವಾಗ್ ಗೆ ಅಫೇರ್ ಇದೆ ಎಂಬ ಗುಸು ಗುಸು ಸುದ್ದಿಯೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೆಲವು ಸಮಯದ ಹಿಂದಷ್ಟೇ ವೀರೇಂದ್ರ ಸೆಹ್ವಾಗ್ ಮತ್ತು ಆರತಿ ಪರಸ್ಪರ ದೂರವಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಇಬ್ಬರೂ ಮದುವೆಯಾಗಿ 21 ವರ್ಷಗಳ ಬಳಿಕ ದೂರವಾಗಿದ್ದರು. ಆದರೆ ಆಗ ದಾಂಪತ್ಯ ಮುರಿದು ಬೀಳಲು ಕಾರಣವೇನೆಂದು ಎಲ್ಲೂ ಬಹಿರಂಗವಾಗಿರಲಿಲ್ಲ.
ಆದರೆ ಈಗ ಆರತಿಗೆ ಒಂದು ಕಾಲದಲ್ಲಿ ಸೆಹ್ವಾಗ್ ಗೆಳೆಯನೂ ಆಗಿದ್ದ ಮಿಥುನ್ ಮನ್ಹಾಸ್ ಜೊತೆ ಅಫೇರ್ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ಎಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಮಿಥುನ್ ಜೊತೆಗೆ ಆರತಿ ಇರುವ ಫೋಟೋಗಳೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದೇ ಕಾರಣಕ್ಕೇ ಇಬ್ಬರೂ ದೂರವಾಗಿರಬಹುದೇ ಅಥವಾ ಸೆಹ್ವಾಗ್ ರಿಂದ ದೂರವಾದ ಬಳಿಕ ಆರತಿ ಮತ್ತು ಮಿಥುನ್ ಕ್ಲೋಸ್ ಆಗಿದ್ದಾರೆಯೇ ಎಂಬುದೂ ಸ್ಪಷ್ಟತೆಯಿಲ್ಲ. ಆದರೆ ಇಬ್ಬರ ನಡುವಿನ ಸಂಬಂಧದ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಮಾತ್ರ ಭರ್ಜರಿ ಸುದ್ದಿಯಾಗುತ್ತಿದೆ.