Select Your Language

Notifications

webdunia
webdunia
webdunia
webdunia

ಟೆಸ್ಟ್‌ಗಳಲ್ಲಿ ಪ್ರಭುತ್ವ ಸಾಧಿಸಿ, ಬರೀ ಸುಧಾರಣೆಯಲ್ಲಿ ತೃಪ್ತಿಹೊಂದದಿರಿ: ವಿರಾಟ್ ಕೊಹ್ಲಿ

ಟೆಸ್ಟ್‌ಗಳಲ್ಲಿ ಪ್ರಭುತ್ವ ಸಾಧಿಸಿ, ಬರೀ ಸುಧಾರಣೆಯಲ್ಲಿ ತೃಪ್ತಿಹೊಂದದಿರಿ: ವಿರಾಟ್ ಕೊಹ್ಲಿ
ಮುಂಬೈ: , ಮಂಗಳವಾರ, 26 ಜುಲೈ 2016 (19:52 IST)
ಭಾರತ ಟೆಸ್ಟ್ ಪಂದ್ಯಗಳಲ್ಲಿ ಪ್ರಭುತ್ವ ಸಾಧಿಸಬೇಕಾದ ಅಗತ್ಯವಿದ್ದು, ಆಟಗಾರರು ಬರೀ  ಸುಧಾರಣೆಯತ್ತ ಗಮನಹರಿಸುವುದರಲ್ಲಿ ಮಾತ್ರ ತೃಪ್ತಿ ಹೊಂದಬಾರದು ಎಂದು ನಾಯಕ ವಿರಾಟ್ ಕೊಹ್ಲಿ ತಿಳಿಸಿದರು. ನಾವು ಬರೀ ಸುಧಾರಣೆಯ ಹಂತದಲ್ಲಿರಬಾರದು ಎಂದು ವೆಸ್ಟ್ ಇಂಡಿಸ್ ವಿರುದ್ಧ ಟೆಸ್ಟ್‌ನಲ್ಲಿ ದ್ವಿಶತಕ ಗಳಿಸಿದ ಕೊಹ್ಲಿ ಹೇಳಿದರು.
 
ನಾವು ಟೆಸ್ಟ್ ಪಂದ್ಯಗಳಲ್ಲಿ ಪ್ರಭುತ್ವ ಸಾಧಿಸುವ ಮೂಲಕ ನಿರ್ಣಾಯಕ ಸನ್ನಿವೇಶಗಳಲ್ಲಿ ಜಯಗಳಿಸಲು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿದ್ಧವಾಗಿರಬೇಕು. ಈ ರೀತಿ ನಾವು ಉತ್ತಮ ತಂಡವಾಗಿ ರೂಪುಗೊಳ್ಳಲು ನೆರವಾಗುತ್ತದೆ ಎಂದು ಕೊಹ್ಲಿ ಹೇಳಿದರು.
ಪ್ರತಿಯೊಂದು ಸರಣಿಯಲ್ಲಿ ನಾವು ಕಲಿಯುತ್ತಿದ್ದೇವೆಂದು ಭಾವಿಸಿದರೆ, ಕಷ್ಟದ ಸನ್ನಿವೇಶಗಳಲ್ಲಿ ಪಂದ್ಯವನ್ನು ಗೆಲ್ಲುವ ಹಸಿವು ಮತ್ತು ಮನಸ್ಥಿತಿಯನ್ನು ನಾವು ಪಡೆಯುವುದಿಲ್ಲ ಎಂದು ಕೊಹ್ಲಿ ಅಭಿಪ್ರಾಯಪಟ್ಟರು. 
 
 ಕೊಹ್ಲಿ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಗೆಲುವು ಗಳಿಸಲು ಭಾರತವನ್ನು ಮುನ್ನಡೆಸಿದ್ದು, ದಕ್ಷಿಣ ಆಫ್ರಿಕಾವನ್ನು ಸ್ವದೇಶದಲ್ಲಿ 3-0ಯಿಂದ ಸೋಲಿಸಿದ್ದರು. ಆದರೆ ದೀರ್ಘಾವಧಿ ಮಾದರಿ ಕ್ರಿಕೆಟ್‌ನಲ್ಲಿ ದಕ್ಷಿಣ ಏಷ್ಯಾ ಹೊರಗೆ ಭಾರತದ ದಾಖಲೆ ಕಳಪೆಯಾಗಿದೆ.
ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯಾದಲ್ಲಿ 2013ರಿಂದೀಚೆಗಿನ ಪ್ರವಾಸದಲ್ಲಿ ಭಾರತ ಸರಣಿಗಳಲ್ಲಿ ಸೋತಿದೆ. 2014ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ಬಳಿಕ ಧೋನಿ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿಯಾಗಿ ಕೊಹ್ಲಿ ಅವರಿಗೆ ಬದಲಿಯಾಗಿ ನಾಯಕರಾದರು.
 
 ಕೊಹ್ಲಿ ತಮ್ಮ ತಂಡವು ಸ್ಥಿರತೆ ಮತ್ತು ಗೆಲುವನ್ನು ಗುರಿಯಾಗಿಟ್ಟುಕೊಳ್ಳಬೇಕು ಎಂದು ಬಯಸಿದರು. ನಾವು ಟೆಸ್ಟ್ ಪಂದ್ಯಗಳನ್ನು ಗೆಲ್ಲುವುದನ್ನು ಕಲಿತರೆ ಎಲ್ಲಾ ಕಡೆಯೂ ಟೆಸ್ಟ್ ಪಂದ್ಯಗಳನ್ನು ಗೆಲ್ಲಬಹುದು. ಭಿನ್ನ ಸ್ಥಿತಿಗಳಲ್ಲಿ ನಾವು ಹೇಗೆ ಆಡಬೇಕೆಂದು ಕಲಿಯಬೇಕು. ಕೆಲವು ಪರಿಸ್ಥಿತಿ ಕೆಲವು ಮಾರ್ಗವನ್ನು ಹಿಡಿದಾಗ ನಾವು ನಿಖರವಾಗಿ ಏನು ಮಾಡಬೇಕೆಂದು ತಿಳಿಯಬೇಕು ಎಂದು ಕೊಹ್ಲಿ ವಿಶ್ಲೇಷಿಸಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರಜತ ಮಹೋತ್ಸವದಲ್ಲಿ ಭಾರತದ ನೆರವನ್ನು ಮೆಲಕು ಹಾಕಿದ ದಕ್ಷಿಣ ಆಫ್ರಿಕಾ ಕ್ರಿಕೆಟ್