ನಾಲ್ಕು ದಶಕಗಳ ಏಕಾಂಗಿತನದ ಬಳಿಕ ಅಂತಾರಾಷ್ಟ್ರೀಯ ಮಡಿಲಿಗೆ ಹಿಂತಿರುಗಲು ನೆರವಾದ ಭಾರತದ ಪಾತ್ರವನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಸ್ಮರಿಸಿಕೊಂಡಿದೆ.
ದೇಶದಲ್ಲಿ ಜನಾಂಗೀಯ ರಹಿತ ಕ್ರಿಕೆಟ್ ರಜತ ಮಹೋತ್ಸವ ಅಂಗವಾಗಿ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಸಂಭ್ರಮದ ಭೋಜನಕೂಟದಲ್ಲಿ ಮಾತನಾಡುತ್ತಾ ಭಾರತ ನಮ್ಮನ್ನು ಮುಕ್ತ ಹಸ್ತದಿಂದ ಸ್ವಾಗತಿಸಿತು ಎಂದು ಸಿಎಸ್‌ಎ ವಿಡಿಯೊ ಸಂದೇಶದಲ್ಲಿ ತಿಳಿಸಿದೆ. ಇದೇ ಸಂದರ್ಭದಲ್ಲಿ ನರ್ತಕಿಯರು ಎ.ಆರ್. ರೆಹ್ಮಾನ್ ಅವರ ಆಸ್ಕರ್ ವಿಜೇತ ಗೀತೆ ಜೈಹೋ ಸಂಗೀತಕ್ಕೆ ಹೆಜ್ಜೆ ಹಾಕಿದರು.
ಕ್ಲೈವ್ ರೈಸ್ ಭಾರತಕ್ಕೆ ಐತಿಹಾಸಿಕ ಪ್ರವಾಸವನ್ನು ಕೈಗೊಂಡಿದ್ದನ್ನು ಸಭಿಕರಿಗೆ ನೆನಪು ಮಾಡಿದ ಸಿಎಸ್‌ಎ ಚೀಫ್ ಎಕ್ಸಿಕ್ಯೂಟಿವ್ ಹರೂನ್ ಲೋರ್ಗಾಟ್ ಮಾಜಿ ನಾಯಕನ ಪತ್ನಿಯ ಹೃದಯಸ್ಪರ್ಶಿ ಸಂದೇಶವನ್ನು ಓದಿದರು.
ಮಾಜಿ ಕ್ರಿಕೆಟ್ ವರಿಷ್ಠ ಡಾ. ಆಲಿ ಬಾಚರ್ ಜನಾಂಗೀಯವಾಗಿ ವಿಭಜನೆಯಾದ ವಿವಿಧ ಕ್ರಿಕೆಟ್ ಮಂಡಳಿಗಳು ಕ್ರೀಡೆಯ ಅಭಿವೃದ್ಧಿಗೆ ಒಟ್ಟಿಗೆ ಸೇರಿದ್ದನ್ನು ಮೆಲುಕುಹಾಕಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.