ಟಿ20 ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ಎಷ್ಟು ರನ್ ಗಳಿಸಿದ್ದಾರೆ, ದಾಖಲೆಗಳೇನು ಇಲ್ಲಿದೆ ವಿವರ

Krishnaveni K
ಶನಿವಾರ, 25 ಮೇ 2024 (11:58 IST)
ಮುಂಬೈ: ಐಪಿಎಲ್ ಜಾತ್ರೆ ಮುಗಿದು ಇನ್ನೇನು ಟಿ20 ವಿಶ್ವಕಪ್ ಆರಂಭವಾಗಲು ಕೆಲವೇ ದಿನಗಳು ಬಾಕಿಯಿದೆ. ಇದಕ್ಕೆ ಮೊದಲು ಟಿ20 ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ದಾಖಲೆಗಳೇನು, ಅವರು ಗಳಿಸಿದ ರನ್ ಎಷ್ಟು ಎಂಬ  ವಿವರ ನೋಡೋಣ.
 
ಟಿ20 ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ಅನೇಕ ಸ್ಮರಣೀಯ ಇನಿಂಗ್ಸ್ ಗಳನ್ನು ಆಡಿದ್ದಾರೆ. ಅದರಲ್ಲಿ ಕಳೆದ ಬಾರಿ ಪಾಕಿಸ್ತಾನ ವಿರುದ್ಧ ಆಡಿದ ಇನಿಂಗ್ಸ್ ಕೂಡಾ ಸೇರಿದೆ. ಪಿಚ್ ಯಾವುದೇ ಇರಲಿ ಸಂದರ್ಭಕ್ಕೆ ತಕ್ಕಂತೆ ರನ್ ಕಲೆ ಹಾಕುವ ಕಲೆಗಾರ ವಿರಾಟ್ ಕೊಹ್ಲಿ. 
 
ವಿರಾಟ್ ಕೊಹ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ತಂಡದ ಭಾಗವಾಗಿದ್ದು 2012 ರಲ್ಲಿ. ಇದುವರೆಗೆ ಅವರಿ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯ ಎನಿಸಿಕೊಳ‍್ಳುವ ಭಾಗ್ಯ ಸಿಕ್ಕಿಲ್ಲ. ಈ ಬಾರಿಯಾದರೂ ಅದು ನೆರವೇರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
 
ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ನಲ್ಲಿ ಇದುವರೆಗೆ ಒಟ್ಟು 25 ಇನಿಂಗ್ಸ್ ಗಳನ್ನು ಆಡಿ 1141 ರನ್ ಗಳಿಸಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಗರಿಷ್ಠ ರನ್ ಕಲೆ ಹಾಕಿದ ದಾಖಲೆ ಅವರ ಹೆಸರಿನಲ್ಲಿದೆ.  81.50 ಸರಾಸರಿಯಲ್ಲಿ ಅವರು ರನ್ ಗಳಿಸಿದ್ದಾರೆ. ಆಧುನಿಕ ಕ್ರಿಕೆಟ್ ನಲ್ಲಿ ಈಗ ಆಡುವ ಕ್ರಿಕೆಟಿಗರ ಪೈಕಿ ಯಾರೂ ಇಷ್ಟು ಸರಾಸರಿಯಲ್ಲಿ ರನ್ ಗಳಿಸಿದ್ದೇ ಇಲ್ಲ. ನಾಯಕನಾಗಿಯೂ ಅವರು ಅಮೋಘ ಸಾಧನೆ ಮಾಡಿದ್ದರು. ಟಿ20 ವಿಶ್ವಕಪ್ ಗಳಲ್ಲಿ ನಾಯಕನಾಗಿ ಕೊಹ್ಲಿ 9 ಪಂದ್ಯ ಮುನ್ನಡೆಸಿದ್ದು 7 ಗೆಲುವು ಕಂಡಿದ್ದಾರೆ.  ಈ ಬಾರಿ ಕೊಹ್ಲಿ ಬ್ಯಾಟ್ ಮತ್ತೊಮ್ಮೆ ಝಳಪಿಸಬೇಕು, ಟೀಂ ಇಂಡಿಯಾ ಗೆಲ್ಲಬೇಕು ಎಂಬುದು ಅಭಿಮಾನಿಗಳ ಪ್ರಾರ್ಥನೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕಳಪೆ ಪ್ರದರ್ಶನದ ಬಳಿಕ ಎಲ್‌ಎಸ್‌ಜಿ ನಾಯಕತ್ವದಿಂದ ರಿಷಭ್‌ ಪಂತ್‌ಗೆ ಗೇಟ್‌ಪಾಸ್‌

IPL 2026: ಇಂದು ಎಲಿಮಿನೇಟರ್‌ ಪಂದ್ಯದಲ್ಲಿ ರಾಯಲ್ಸ್‌-ಟೈಟನ್ಸ್‌ ಫೈಟ್: ಯಾರಿಗೆ ಸಿಗಲಿದೆ ಫೈನಲ್‌ ಟಿಕೆಟ್‌

ಶತಕ ಜಸ್ಟ್‌ ಮಿಸ್ ಆದಾಗ ಸಪ್ಪೆ ಮುಖ ಮಾಡಿ ನಿಂತ ವೈಭವ್‌ ಸೂರ್ಯವಂಶಿ, ಸನ್‌ರೈಸರ್ಸ್ ಹೈದರಾಬಾದ್‌ ಆಟಗಾರರು ಏನ್ ಮಾಡಿದ್ರು ನೋಡಿ, Video

IPL 2026: ರಾಜಸ್ಥಾನ ರಾಯಲ್ಸ್‌ಗೆ ಗೆಲುವಿನ ವೈಭವ: ಸೋತು ಅಭಿಯಾನ ಮುಗಿಸಿದ ಸನ್‌ರೈಸರ್ಸ್‌ ಹೈದರಾಬಾದ್‌

IPL 2026: ಸೂರ್ಯವಂಶಿಗೆ ದಾಖಲೆಯ ಶತಕ ಜಸ್ಟ್‌ಮಿಸ್‌: ಸನ್‌ರೈಸರ್ಸ್‌ ತಂಡಕ್ಕೆ ಕಠಿಣ ಗುರಿ ನೀಡಿದ ರಾಯಲ್ಸ್‌

ಮುಂದಿನ ಸುದ್ದಿ
Show comments