ಇದನ್ನು ಓದಿದ ಮೇಲೆ ವಿರಾಟ್ ಕೊಹ್ಲಿಯನ್ನು ದುರಹಂಕಾರಿ ಎನ್ನಲು ನಿಮಗೆ ಮನಸ್ಸಾಗದು!

Webdunia
ಶುಕ್ರವಾರ, 20 ಜುಲೈ 2018 (09:14 IST)
ಲೀಡ್ಸ್: ವಿರಾಟ್ ಕೊಹ್ಲಿ ಎಂದರೆ ಅವರ ಆಕ್ರಮಣಕಾರಿ ವರ್ತನೆಯಿಂದ ಜನರು ಅವರ ಬಗ್ಗೆ ಹೆಚ್ಚಾಗಿ ತಪ್ಪಾಗಿ ಭಾವಿಸುತ್ತಾರೆ. ಆದರೆ ತಾವು ಹಾಗಲ್ಲ ಎನ್ನುವುದನ್ನು ಕೊಹ್ಲಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಮೂರನೇ ಏಕದಿನ ಪಂದ್ಯಕ್ಕೆ ಲೀಡ್ಸ್ ಮೈದಾನಕ್ಕೆ ತೆರಳುವ ಮೊದಲು ವಿರಾಟ್ ಕೊಹ್ಲಿ ಅಭಿಮಾನಿ ಮಹಿಳೆಯೊಬ್ಬರ ಜತೆ ನಡೆದುಕೊಂಡ ರೀತಿ ಕ್ರಿಕೆಟ್ ಪ್ರಿಯರ ಮನಸ್ಸು ಗೆದ್ದಿದೆ ಮತ್ತು ಕೊಹ್ಲಿಯೊಳಗೆ ಎಂತಹಾ ಹೃದಯ ಶ್ರೀಮಂತಿಕೆ ಇದೆ ಎನ್ನುವುದು ಸಾಬೀತಾಗಿದೆ.

ಟೀಂ ಇಂಡಿಯಾ ಆಟಗಾರರು ಹೋಟೆಲ್ ದ್ವಾರದಿಂದ ಒಬ್ಬೊಬ್ಬರಾಗಿ ಟೀಂ ಬಸ್ ನೊಳಗೆ ನಡೆದು ಬರುತ್ತಿರುವಾಗ ಪಕ್ಕದಲ್ಲಿ ಕೆಲವು ಅಭಿಮಾನಿಗಳ ಗುಂಪು ತಮ್ಮ ಮೆಚ್ಚಿನ ಕ್ರಿಕೆಟಿಗರನ್ನು ಕಣ್ತುಂಬಿಕೊಳ್ಳಲು ಕಾದಿದ್ದರು.

ಈ ಸಂದರ್ಭದಲ್ಲಿ ಮಧ್ಯ ವಯಸ್ಸಿನ ಮಹಿಳೆಯೊಬ್ಬರು ಕೈಯಲ್ಲಿ ಅಟೋಗ್ರಾಫ್ ಪುಸ್ತಕ ಹಿಡಿದು ಎಲ್ಲಾ ಕ್ರಿಕೆಟಿಗರ ಮುಂದೆ ಒಡ್ಡಿ ಸಹಿ ಹಾಕುವಂತೆ ಕೇಳಿಕೊಳ್ಳುತ್ತಿದ್ದರು. ಆದರೆ ಧೋನಿ, ಕೆಎಲ್ ರಾಹುಲ್, ರವಿಶಾಸ್ತ್ರಿ, ದಿನೇಶ್ ಕಾರ್ತಿಕ್ ಸೇರಿದಂತೆ ಬಹುತೇಕ ಎಲ್ಲಾ ಕ್ರಿಕೆಟಿಗರೂ ಆಕೆಗೆ ನೋ ಎಂದು ಕೈಯಾಡಿಸಿ ಬಸ್ ಏರಿದರು.

ಆದರೆ ಕೊನೆಯಲ್ಲಿ ಬಂದ ವಿರಾಟ್ ಕೊಹ್ಲಿ ತಮ್ಮ ಫೋನ್ ನೋಡುವುದರಲ್ಲಿ ಬ್ಯುಸಿಯಾಗಿದ್ದರೂ, ಮಹಿಳೆ ಅಟೋಗ್ರಾಫ್ ಎದುರು ಹಿಡಿದಾಗ ನಿರಾಸೆ ಮಾಡದೇ ತಾಳ್ಮೆಯಿಂದ ನಿಂತು ಸಹಿ ಹಾಕಿ ಕೊಟ್ಟು ಆಕೆಯ ಆಸೆ ಪೂರೈಸಿದರು. ಕೊಹ್ಲಿ ಮಾಡಿದ್ದನ್ನು ನೋಡಿ ಅಲ್ಲಿದ್ದ ಅಭಿಮಾನಿಗಳೂ ಖುಷ್ ಆದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಷ್ಯಾ ಕಪ್ ಟ್ರೋಫಿ ಕೊಡ್ತೀನಿ ಆದ್ರೆ ಒಂದು ಷರತ್ತು: ಮೊಹ್ಸಿನ್ ನಖ್ವಿ ಕೊಬ್ಬು ಎಷ್ಟಿದೆ ನೋಡಿ

ಮೂವರು ಕ್ರಿಕೆಟಿಗರ ಭವಿಷ್ಯವನ್ನೇ ಕೊಂದು ಹಾಕಿದ ಬಿಸಿಸಿಐ: ಇದೆಂಥಾ ಅನ್ಯಾಯ

ಮೊದಲ ಪಂದ್ಯದಲ್ಲಿ ಫೇಲ್ ಆಗಿದ್ದಕ್ಕೆ ರೋಹಿತ್ ಶರ್ಮಾರದ್ದು ಏನು ಕಮಿಟ್ ಮೆಂಟ್

ರಿಷಬ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌, ಗಾಯದಿಂದ ಚೇತರಿಸಿಕೊಂಡ ಪಂತ್‌ಗೆ ಬಿಸಿಸಿಐ ಹೊಸ ಜವಾಬ್ದಾರಿ

ವೇತನ ಮಾತ್ರ ಪುರುಷರಷ್ಟೇ ಬೇಕು, ಪರ್ಫಾರ್ಮೆನ್ಸ್ ಝೀರೋ: ಟ್ರೋಲ್ ಆದ ಮಹಿಳಾ ಕ್ರಿಕೆಟಿಗರು

ಮುಂದಿನ ಸುದ್ದಿ
Show comments