ಗೆಲುವಿನ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ ಜೊತೆ ವಿರಾಟ್ ಕೊಹ್ಲಿ ಶಾಕಿಂಗ್ ವರ್ತನೆ: ವಿಡಿಯೋ

Krishnaveni K
ಬುಧವಾರ, 5 ಮಾರ್ಚ್ 2025 (10:05 IST)
Photo Credit: X
ದುಬೈ: ಆಸ್ಟ್ರೇಲಿಯಾ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಗೆಲುವಿಗೆ ತಾವೇ ರೂವಾರಿಯಾದರೂ ಪಂದ್ಯದ ಬಳಿಕ ನಾಯಕ ರೋಹಿತ್ ಶರ್ಮಾರನ್ನೇ ನೀನೇ ಮುಂದೆ ಹೋಗು ಎಂದು ತಳ್ಳಿದ ವಿರಾಟ್ ಕೊಹ್ಲಿ ವರ್ತನೆ ಎಲ್ಲರ ಮನಗೆದ್ದಿದೆ. ಈ ವಿಡಿಯೋ ಈಗ ವೈರಲ್ ಆಗಿದೆ.

ಕೆಎಲ್ ರಾಹುಲ್ ಸಿಕ್ಸರ್ ಸಿಡಿಸಿ ಪಂದ್ಯ ಗೆಲ್ಲಿಸುತ್ತಿದ್ದಂತೇ ಡ್ರೆಸ್ಸಿಂಗ್ ರೂಂನಲ್ಲಿದ್ದ ಎಲ್ಲಾ ಆಟಗಾರರೂ ಕುಣಿದು ಕುಪ್ಪಳಿಸಿದ್ದರು. ಕೊಹ್ಲಿ ಎಲ್ಲರಿಗಿಂತ ಮೊದಲು ಮೈದಾನಕ್ಕೆ ಓಡಿ ಬಂದಿದ್ದರು.

ಅಲ್ಲಿಯೇ ಎಲ್ಲಾ ಆಟಗಾರರನ್ನು ಅಪ್ಪಿ ಮುದ್ದಾಡಿದ ಕೊಹ್ಲಿ ಬಳಿಕ ಗ್ಯಾಲರಿಯಲ್ಲಿ ಕೂತಿದ್ದ ಅನುಷ್ಕಾ ಕಡೆಗೂ ನಾವು ಗೆದ್ದೆವು ಎಂದು ಸನ್ನೆ ಮಾಡಿ ಸಂಭ್ರಮಿಸಿದ್ದಾರೆ. ಈ ವೇಳೆ ಮೈದಾನದಲ್ಲಿದ್ದ ಆಸ್ಟ್ರೇಲಿಯಾ ಆಟಗಾರರು ಪೆವಿಲಿಯನ್ ಕಡೆಗೆ ಬರುತ್ತಿದ್ದರು.

ಶಿಷ್ಟಾಚಾರ ಪ್ರಕಾರ ಅವರಿಗೆ ಕೈಕುಲುಕಬೇಕಿತ್ತು. ಈ ವೇಳೆ ಮುಂದಿದ್ದ ಕೊಹ್ಲಿ ಹಿಂದೆ ಸರಿದು ತಮಗಿಂತ ಹಿಂದಿದ್ದ ನಾಯಕ ರೋಹಿತ್ ಶರ್ಮಾರನ್ನು ಮುಂದೆ ತಳ್ಳಿ ನೀನೇ ಮುಂದೆ ಹೋಗು ಕಳುಹಿಸಿ ಅವರ ಹಿಂದೆ ತಾವು ತೆರಳಿದ್ದಾರೆ. ಕೊಹ್ಲಿಯ ಈ ವರ್ತನೆ ಅಭಿಮಾನಿಗಳ ಮನಗೆದ್ದಿದೆ. ಈ ಪಂದ್ಯ ಗೆಲ್ಲಲು ಕಾರಣವಾಗಿದ್ದು ಕೊಹ್ಲಿಯ ಇನಿಂಗ್ಸ್. ಹಾಗಿದ್ದರೂ ನಾಯಕನಿಗೆ ಸಿಗಬೇಕಾದ ಗೌರವವನ್ನು ಕೊಡುವ ಮೂಲಕ ಕೊಹ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬ್ರೇಕಪ್ ಆದ ಸ್ಮೃತಿ ಮಂಧಾನಗೆ ಇಂಥಾ ಕಾಮೆಂಟ್ ಮಾಡೋದಾ: ಇದೆಂಥಾ ಮನಸ್ಥಿತಿ

ಟೀಂ ಇಂಡಿಯಾ ಪರ ರೋಹಿತ್, ಕೊಹ್ಲಿ ಆಡುವ ಮುಂದಿನ ಪಂದ್ಯ ಯಾವುದು ನೋಡಿ

IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಇಂದಿನಿಂದ ಟಿ20 ಸರಣಿ, ಅದೊಂದು ದಾಖಲೆಯಾಗದಿದ್ರೆ ಸಾಕಪ್ಪಾ..

ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸೂರ್ಯಕುಮಾರ್ ಯಾದವ್

ಪಾಲಾಶ್ ಜೊತೆ ಮದುವೆ ಮುರಿದ ಬೆನ್ನಲ್ಲೇ ಸ್ಮೃತಿ ಮಂಧಾನ ಮತ್ತು ಕ್ರಿಕೆಟಿಗರು ಮಾಡಿದ್ದೇನು ಗೊತ್ತಾ

ಮುಂದಿನ ಸುದ್ದಿ