ವಿರಾಟ್ ಕೊಹ್ಲಿ ಚಿರತೆಯ ವೇಗ ನೋಡಿದ್ಮೇಲೂ ವಯಸ್ಸಾಯ್ತು ಅಂತೀರಾ

Krishnaveni K
ಶುಕ್ರವಾರ, 10 ಮೇ 2024 (12:21 IST)
Photo Courtesy: Twitter
ಧರ್ಮಶಾಲಾ: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಮಾಡಿದ ಚಿರತೆಯ ವೇಗದ ರನೌಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದೆ.

ವಿರಾಟ್ ಕೊಹ್ಲಿಗೆ ವಯಸ್ಸಾಗಿದೆ. ಅವರು ಇನ್ನು ಟಿ20 ಕ್ರಿಕೆಟ್ ಆಡುವುದಕ್ಕೆ ಲಾಯಕ್ಕಲ್ಲ. ಕಿರಿಯ ಆಟಗಾರರಿಗೆ ತಮ್ಮ ಸ್ಥಾನ ಬಿಟ್ಟುಕೊಡಬೇಕು ಎಂದು ಟೀಕೆ ಮಾಡುವವರಿಗೆ ಕೊಹ್ಲಿಯ ಈ ಮಿಂಚಿನಂತಹ ರನೌಟ್ ಉತ್ತರವಾಗಿತ್ತು. ನಿನ್ನೆಯ ಪಂದ್ಯದಲ್ಲಿ ಕೊಹ್ಲಿ ಪಂಜಾಬ್ ಬ್ಯಾಟಿಗ ಶಶಾಂಕ್ ಸಿಂಗ್ ರನ್ನು ರನೌಟ್ ಮಾಡಿದರು.

ಈ ವೇಳೆ ಶಶಾಂಕ್ ಅಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದರು. ಒಂದು ವೇಳೆ ಅವರು ಕೊನೆಯವರೆಗೆ ಇದ್ದಿದ್ದರೆ ಪಂದ್ಯ ಪಂಜಾಬ್ ಗೆಲ್ಲಬಹುದಿತ್ತೇನೋ. ಆದರೆ ಮಿಡ್ ವಿಕೆಟ್ ಗೆ ಹೋದ ಬಾಲ್ ನ್ನು ತಡೆಹಿಡಿದು 30 ಯಾರ್ಡ್ ವೃತ್ತದವರೆಗೆ ಓಡಿ ನೇರವಾಗಿ ನಾನ್ ಸ್ಟ್ರೈಕರ್ ಕಡೆಗೆ ಡೈರೆಕ್ಟ್ ಹಿಟ್ ಮಾಡಿದರು. ಇದರಿಂದಾಗಿ ಶಶಾಂಕ್ ಸಿಂಗ್ ರನೌಟ್ ಆದರು.

ಕೊಹ್ಲಿಯ ಈ ರನೌಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೊಹ್ಲಿಯನ್ನು ವಯಸ್ಸಾಯ್ತು ಅನ್ನುವವರೆಲ್ಲಾ ಈ ರನೌಟ್ ನೋಡಿ ಏನಂತೀರಿ ಎಂದು ಅವರ ಅಭಿಮಾನಿಗಳು ಟಾಂಗ್ ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ ಫಿಟ್ಟೆಸ್ಟ್ ಕ್ರಿಕೆಟಿಗನಾಗಿದ್ದು, ಅವರ ಫಿಟ್ನೆಸ್ ಗೆ ಈ ರನೌಟ್ ಸಾಕ್ಷಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮೊಹಮ್ಮದ್ ಶಮಿ ಯಾಕೆ ಆಯ್ಕೆ ಮಾಡಿಲ್ಲ ಎಂದು ಕೇಳಿದ್ದಕ್ಕೆ ಶುಭಮನ್ ಗಿಲ್ ಉತ್ತರ ಹೀಗಿತ್ತು

ಕ್ರಿಕೆಟ್ ಸುಂದರಿ ಸ್ಮೃತಿ ಮಂಧಾನ ಮದುವೆ ಕಾರ್ಡ್ ಫೋಟೋ ವೈರಲ್

IND vs SA Test: ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ

ಜೀವ ಭಯಕ್ಕೆ ಪಾಕಿಸ್ತಾನದಿಂದ ವಾಪಸ್ ಆಗ್ತೀವಿ ಎಂದ ಶ್ರೀಲಂಕಾ ಕ್ರಿಕೆಟಿಗರು: ಬರಬೇಡಿ ಅಂತಿದೆ ಕ್ರಿಕೆಟ್ ಬೋರ್ಡ್

ಮೊದಲ ಮದುವೆಯ ವರ್ಷದೊಳಗೆ ಎರಡನೇ ಮದುವೆಯಾದ ಅಫ್ಘಾನ್ ಕ್ರಿಕೆಟರ್ ರಶೀದ್ ಖಾನ್‌

ಮುಂದಿನ ಸುದ್ದಿ
Show comments