ಐಪಿಎಲ್ 2024: ಪ್ಲೇ ಆಫ್ ರೇಸ್ ನಲ್ಲಿ ಉಳಿದುಕೊಳ್ಳಲು ಗುಜರಾತ್ ಟೈಟನ್ಸ್ ವಿರುದ್ಧ ಸಿಎಸ್ ಕೆ ಹೋರಾಟ

Krishnaveni K
ಶುಕ್ರವಾರ, 10 ಮೇ 2024 (11:02 IST)
Photo Courtesy: Twitter
ಅಹಮ್ಮದಾಬಾದ್: ಐಪಿಎಲ್ 2024 ರಲ್ಲಿ ಇಂದು ಗುಜರಾತ್ ಟೈಟನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಹತ್ವದ ಪಂದ್ಯವಾಡಲಿದೆ. ಪ್ಲೇ ಆಫ್ ದೃಷ್ಟಿಯಿಂದ ಸಿಎಸ್ ಕೆಗೆ ಇಂದಿನ ಪಂದ್ಯ ಮಹತ್ವದ್ದಾಗಿದೆ.

ಋತುರಾಜ್ ಗಾಯಕ್ ವಾಡ್ ನೇತೃತ್ವದ ಸಿಎಸ್ ಕೆ ತಂಡ 11 ಪಂದ್ಯಗಳಿಂದ 6 ಗೆಲುವು ಕಂಡುಕೊಂಡು 12 ಅಂಕ ಸಂಪಾದಿಸಿದೆ. ಸದ್ಯಕ್ಕೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಚೆನ್ನೈ ಈಗ ಸೋತರೆ ಮುಂದೆ ಪ್ಲೇ ಆಫ್ ಹಾದಿ ಕಷ್ಟವಾಗಲಿದೆ. ಈಗಾಗಲೇ ಡೆಲ್ಲಿ ಮತ್ತು ಲಕ್ನೋ ಕೂಡಾ ಸಿಎಸ್ ಕೆಗೆ ಪೈಪೋಟಿ ನೀಡುತ್ತಿವೆ. ಹೀಗಾಗಿ ಇಂದು ಸಿಎಸ್ ಕೆಗೆ ಗೆಲುವು ಅನಿವಾರ್ಯವಾಗಿದೆ.

ಕಳೆದ ಪಂದ್ಯದಲ್ಲಿ ದುರ್ಬಲ ಪಂಜಾಬ್ ಕಿಂಗ್ಸ್ ವಿರುದ್ಧ ಸಿಎಸ್ ಕೆ ಪ್ರಯಾಸಕರ ಗೆಲುವು ಕಂಡಿತ್ತು. ದೀಪಕ್ ಚಹರ್ ಗಾಯಗೊಂಡಿರುವುದು ತಂಡಕ್ಕೆ ಹೊಡೆತ  ನೀಡಲಿದೆ. ಇತ್ತ ಧೋನಿಯೂ ಸಂಪೂರ್ಣ ಫಿಟ್ ಆಗಿಲ್ಲ. ಹಾಗಿದ್ದರೂ ಆಡುತ್ತಿದ್ದಾರೆ. ಹೀಗಾಗಿ ನಾಯಕ ಋತುರಾಜ್ ಗಾಯಕ್ ವಾಡ್, ರವೀಂದ್ರ ಜಡೇಜಾ, ಪತಿರಾಣನಂತಹ ಆಟಗಾರರು ತಂಡದ ಹೊಣೆ ಹೊತ್ತುಕೊಳ್ಳಬೇಕಿದೆ.

ಇತ್ತ ಗುಜರಾತ್ ಟೈಟನ್ಸ್ ಗೆ ಈಗ 11 ಪಂದ್ಯಗಳಿಂದ ಕೇವಲ 4 ಗೆಲುವು ಪಡೆದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಸಿಕ್ಕಿದೆ. ಇದೀಗ ಗುಜರಾತ್ ಪ್ಲೇ ಆಫ್ ಹಾದಿ ಬಹುತೇಕ ಬಂದ್ ಆಗಿದೆ. ಹಾಗಿದ್ದರೂ ಇಂದು ತವರು ಅಹಮ್ಮದಾಬಾದ್ ನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಶುಬ್ಮನ್ ಗಿಲ್ ಪಡೆಗೆ ಗೆಲ್ಲುವುದು ಪ್ರತಿಷ್ಠೆಯ ವಿಚಾರವಾಗಿದೆ. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಇಂಥಾ ಪಿಚ್ ನಲ್ಲಿ ಸಚಿನ್, ಕೊಹ್ಲಿಗೂ ಆಡಕ್ಕೆ ಆಗ್ತಿರಲಿಲ್ಲ: ಹರ್ಭಜನ್ ಸಿಂಗ್ ವಾಗ್ದಾಳಿ

ಐಪಿಎಲ್ ನಲ್ಲಿ ಮಾಲಿಕರು ಏನೇನೋ ಪ್ರಶ್ನೆ ಕೇಳ್ತಾರೆ: ಕೆಎಲ್ ರಾಹುಲ್ ಬಿಚ್ಚಿಟ್ಟ ಸತ್ಯ

ಟೀಂ ಇಂಡಿಯಾ ಟೆಸ್ಟ್ ತಂಡ ಹಳ್ಳ ಹಿಡಿಸಿದ ಗೌತಮ್ ಗಂಭೀರ್ ಟೆಸ್ಟ್ ದಾಖಲೆ ಹೇಗಿತ್ತು ನೋಡಿ

IND vs SA: ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ ಯಾವಾಗ, ಎಲ್ಲಿ ಇಲ್ಲಿದೆ ವಿವರ

ಕೋಚ್ ಆಗಿ ಬಂದಾಗ ರಾಹುಲ್ ದ್ರಾವಿಡ್ ಹೇಳಿದ್ದ ಈ ಮಾತು ಗಂಭೀರ್ ಗೂ ಪಾಠವಾಗಬೇಕು

ಮುಂದಿನ ಸುದ್ದಿ
Show comments