Webdunia - Bharat's app for daily news and videos

Install App

ವಿರಾಟ್ ಕೊಹ್ಲಿ ಆಯ್ಕೆ ಬಗ್ಗೆ ಪೂರಾ ಕನ್ ಫ್ಯೂಷನ್!

Webdunia
ಬುಧವಾರ, 9 ಮೇ 2018 (08:59 IST)
ಮುಂಬೈ: ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯವನ್ನು ಕೌಂಟಿ ಕ್ರಿಕೆಟ್ ಆಡುವ ನೆಪದಿಂದ ತಪ್ಪಿಸಿಕೊಂಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐರ್ಲೆಂಡ್ ವಿರುದ್ಧ ನಡೆಯಲಿರುವ ಟಿ20 ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ.

ಕೌಂಟಿ ಕ್ರಿಕೆಟ್ ನಡುವೆಯೇ ಐರ್ಲೆಂಡ್ ನಲ್ಲಿ ನಡೆಯಲಿರುವ ಟಿ20 ಸರಣಿಗೆ ಕೊಹ್ಲಿಯನ್ನು ನಾಯಕನಾಗಿ ಆಯ್ಕೆ ಮಾಡಿ ಬಿಸಿಸಿಐ ಆಯ್ಕೆ ಸಮಿತಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದೆ.

ಕೊಹ್ಲಿ ಜೂನ್ ತಿಂಗಳು ಪೂರಾ ಕೌಂಟಿ ಕ್ರಿಕೆಟ್ ಆಡಲಿದ್ದು, ಜೂನ್ 25 ರಿಂದ 28 ರವರೆಗೆ ಅವರಿಗೆ ಕೌಂಟಿ ಪಂದ್ಯವಿದೆ. ವಿಶೇಷವೆಂದರೆ 27 ರಿಂದ 29 ರವರೆಗೆ ನಡೆಯಲಿರುವ ಟಿ20 ಸರಣಿಗೂ ಅವರನ್ನೇ ನಾಯಕನಾಗಿ ಆಯ್ಕೆ ಮಾಡಲಾಗಿದೆ.

ಇದರಿಂದಾಗಿ ಅಭಿಮಾನಿಗಳಲ್ಲಿ ಗೊಂದಲ ಮೂಡಿದೆ. ಕೌಂಟಿ ಕ್ರಿಕೆಟ್ ಆಡುವ ಜತೆಗೇ ಕೊಹ್ಲಿ ಟೀಂ ಇಂಡಿಯಾ ಪರವೂ ಆಡುವುದು ಹೇಗೆ ಎಂಬ ಗೊಂದ ಶುರುವಾಗಿದೆ. ಈ ಬಗ್ಗೆ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ಅವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ ಎಲ್ಲದಕ್ಕೂ ಬಿಸಿಸಿಐ ಕಾರ್ಯದರ್ಶಿ ಅಮಿತ್ ಚೌಧರಿ ಅವರನ್ನೇ ಕೇಳಿ ಎಂದಿದ್ದಾರೆ. ಅಲ್ಲದೆ, ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆಂದರೆ ಆ ಸಂದರ್ಭದಲ್ಲಿ ಕೊಹ್ಲಿ ಕೌಂಟಿ ಕ್ರಿಕೆಟ್ ಆಡಲ್ಲ ಎಂದೇ ಅರ್ಥ ಎಂದಿದ್ದಾರೆ. ಆದರೆ ಅಭಿಮಾನಿಗಳಿಗಂತೂ ಗೊಂದಲ ಮುಗಿದಿಲ್ಲ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

INDvsSL: ಕಾದು ಕಾದು ಸಾಕಾಯ್ತು.. ಕೊನೆಗೂ ಧ್ರುವ ಜ್ಯುರೆಲ್ ಶತಕ ಸಿಡಿಸಿದಾಗ ಗಿಲ್, ಗಂಭೀರ್ ರಿಯಾಕ್ಷನ್ ಹೇಗಿತ್ತು ಗೊತ್ತಾ Video

ನನಗೆ ಆತ ಏನು ಹೇಳಿದ್ದ ಎಂದು ಗೊತ್ತಿಲ್ಲದೇ ಜಡ್ಜ್ ಮಾಡಬೇಡಿ: ಕಿತ್ತಾಡಿದ್ದಕ್ಕೆ ಯಶಸ್ವಿ ಜೈಸ್ವಾಲ್ ಖಡಕ್ ಹೇಳಿಕೆ

IND vs SL: ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಹೊಸ ದಾಖಲೆ

Ind vs SL 2nd TEST: ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿದ ಭಾರತಕ್ಕೆ ಆರಂಭಿಕ ಆಘಾತ

ವಿಡಿಯೊ: ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಡಬಲ್ಸ್‌ ಆಟಗಾರ್ತಿಯರ ಚಾರಿತ್ರಿಕ ಸಾಧನೆ

ಮುಂದಿನ ಸುದ್ದಿ
Show comments