Webdunia - Bharat's app for daily news and videos

Install App

ಶ್ರೀಲಂಕಾ ಸರಣಿ ಮುಗಿದ ಬೆನ್ನಲ್ಲೇ ಭಾರತಕ್ಕೆ ಟಾಟಾ ಬೈ ಬೈ ಎಂದು ಲಂಡನ್ ಗೆ ಹಾರಿದ ವಿರಾಟ್ ಕೊಹ್ಲಿ

Krishnaveni K
ಶನಿವಾರ, 10 ಆಗಸ್ಟ್ 2024 (11:19 IST)
ಕೊಲಂಬೊ: ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಪಾಲ್ಗೊಂಡ ಬಳಿಕ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಭಾರತಕ್ಕೆ ಬರದೇ ನೇರವಾಗಿ ಲಂಡನ್ ವಿಮಾನವೇರಿದ್ದಾರೆ.

ಇತ್ತೀಚೆಗೆ ವಿರಾಟ್ ಕೊಹ್ಲಿ ತಮ್ಮ ಸಂಸಾರ ಸಮೇತ ಲಂಡನ್ ಗೆ ಶಿಫ್ಟ್ ಆಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಅದಕ್ಕೆ ತಕ್ಕ ಹಾಗೇ ಅನುಷ್ಕಾ ಶರ್ಮಾ ಹೆರಿಗೆ ಬಳಿಕ ಹೆಚ್ಚು ಕಡಿಮೆ ಲಂಡನ್ ನಲ್ಲಿಯೇ ಇದ್ದಾರೆ. ಒಮ್ಮೆ ಮಾತ್ರ ಪುತ್ರ ಅಕಾಯ್ ಜೊತೆ ಭಾರತಕ್ಕೆ ಬಂದಿದ್ದರು. ಹೀಗಾಗಿ ಕೊಹ್ಲಿ ಕೂಡಾ ಬಹುತೇಕ ಲಂಡನ್ ನಲ್ಲಿಯೇ ಇರುತ್ತಾರೆ.

ಟಿ20 ವಿಶ್ವಕಪ್ ಗೆಲುವಿನ ಬಳಿಕ ಕೇವಲ ಒಂದೇ ದಿನಕ್ಕೆ ಭಾರತಕ್ಕೆ ಬಂದಿದ್ದ ವಿರಾಟ್ ಕೊಹ್ಲಿ ರಾತ್ರಿಯೇ ಲಂಡನ್ ವಿಮಾನವೇರಿದ್ದರು. ಅದಾದ ಬಳಿಕ ಅವರು ಭಾರತಕ್ಕೆ ಬಂದೇ ಇಲ್ಲ. ಇತ್ತೀಚೆಗೆ ಲಂಕಾ ವಿರುದ್ಧ ಏಕದಿನ ಸರಣಿಗೆ ನೇರವಾಗಿ ದ್ವೀಪ ರಾಷ್ಟ್ರಕ್ಕೇ ಬಂದಿಳಿದಿದ್ದರು.

ಇದೀಗ ಏಕದಿನ ಸರಣಿ ಮುಕ್ತಾಯವಾದ ಬೆನ್ನಲ್ಲೇ ಕೊಹ್ಲಿ ನೇರವಾಗಿ ಲಂಡನ್ ಗೆ ಮರಳಿದ್ದಾರೆ. ಈ ಮೂಲಕ ಅವರು ಲಂಡನ್ ನಲ್ಲಿಯೇ ನೆಲೆಸಲಿದ್ದಾರೆ ಎಂಬ ಸುದ್ದಿಗೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ. ಕೊಹ್ಲಿ ಲಂಡನ್ ಗೆ ತೆರಳಿರುವುದನ್ನು ನೋಡಿದ ಫ್ಯಾನ್ಸ್ ಅಲ್ಲೇ ಇರಿ, ಇಲ್ಲಿಗೆ ಯಾಕೆ ಬರ್ತೀರಿ ಎಂದು ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಲಂಡನ್ ನಲ್ಲಿ ಮಾಡಿದ್ರೇನು, ವಯಸ್ಸಾದ್ರೇನು ವಿರಾಟ್ ಕೊಹ್ಲಿ ಫಿಟ್ನೆಸ್ ಟೆಸ್ಟ್ ರಿಸಲ್ಟ್ ನೋಡಿ

ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ಈ ರೀತಿ ಆಡುವುದು ಇದೇ ಫಸ್ಟ್

ಚಿನ್ನಸ್ವಾಮಿ ಕಾಲ್ತುಳಿತ ದುರಂತ: ಮೂರು ತಿಂಗಳ ಬಳಿಕ ಕೊನೆಗೂ ಮೌನ ಮುರಿದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಮಾತ್ರ ಏನು ಸ್ಪೆಷಲ್ಲಾ.. ಲಂಡನ್ ವಾಸಿ ಕೊಹ್ಲಿಗೆ ಅಲ್ಲಿಯೇ ಫಿಟ್ನೆಸ್ ಟೆಸ್ಟ್

ವಿಷ್ಣುವರ್ಧನ್ ಗೆ ಕರ್ನಾಟಕ ರತ್ನಕ್ಕೆ ಹೆಚ್ಚಿದ ಒತ್ತಡ: ಇಂದು ಸಿಎಂ ಭೇಟಿ ಮಾಡಲಿರುವ ಭಾರತಿ ವಿಷ್ಣುವರ್ಧನ್

ಮುಂದಿನ ಸುದ್ದಿ
Show comments