Select Your Language

Notifications

webdunia
webdunia
webdunia
webdunia

ಕೊಹ್ಲಿ ದ್ವಿಶತಕಕ್ಕೆ ಮಾರುಹೋದ ರಿಚರ್ಡ್ಸ್ ಪುತ್ರನಿಂದ ವರ್ಣಚಿತ್ರ ಅರ್ಪಣೆ

virat kohli
ಆಂಟಿಗಾ , ಮಂಗಳವಾರ, 26 ಜುಲೈ 2016 (15:49 IST)
ವಿರಾಟ್ ಕೊಹ್ಲಿಯವರ ಅಭಿಮಾನಿಗಳ ಪಟ್ಟಿ ಬೆಳೆಯುತ್ತಿದ್ದು, ಅವರ ಪೈಕಿ ಅತೀ ಗಣ್ಯ ವಿವಿಯನ್ ರಿಚರ್ಡ್ಸ್ ಪುತ್ರ ಮಾಲಿ ಕೂಡ ಸೇರಿದ್ದಾರೆ. ತಮ್ಮ ಚೊಚ್ಚಲ ದ್ವಿಶತಕ ಬಾರಿಸಿದ ಕೊಹ್ಲಿ ರಿಚರ್ಡ್ಸ್ ಕುಟುಂಬಕ್ಕೆ ದಿಢೀರ್ ಹಿಟ್ ಆಗಿದ್ದಾರೆ.
 
ಮಾಲಿ ರಿಚರ್ಡ್ಸ್ 18 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಈಗ ಕಲಾ ಗ್ಯಾಲರಿ ಹೌಸ್ ಆಫ್ ಕ್ರಿಯೆಟಿವಿಟಿ ಮಾಲೀಕರಾಗಿದ್ದಾರೆ. ಮಾಲಿ ಡ್ಯಾಡ್ ರಿಚರ್ಡ್ಸ್ ಪುಸ್ತಕದಲ್ಲಿ ಅಕ್ಷರಶಃ ಎಲ್ಲಾ ಸ್ಟ್ರೋಕ್‌ಗಳಿದ್ದು, ಅವರ ಕಾಲದಲ್ಲಿ ಅತೀ ನಾವೀನ್ಯ ಶೈಲಿಯ ಬ್ಯಾಟ್ಸ್‌ಮನ್ ಆಗಿದ್ದರು. ಈಗ ಮಾಲಿ ಮತ್ತು ಅವರ ಕಲಾ ಸ್ನೇಹಿತರಿಗೆ ಹೊಸ ಸ್ಫೂರ್ತಿ ವಿರಾಟ್ ಕೊಹ್ಲಿ. ಆಂಟಿಗಾದ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ದ್ವಿಶತಕ ಸಿಡಿಸಿದ ಕೊಹ್ಲಿಯ ವರ್ಣಚಿತ್ರವನ್ನು ಮಾಲಿ ಕೊಹ್ಲಿಗೆ ಅರ್ಪಿಸಿದರು.
 
 ಕೊಹ್ಲಿಯ ಚೊಚ್ಚಲ ದ್ವಿಶತಕವನ್ನು ಆಂಟಿಗಾದಲ್ಲಿ ದಾಖಲಿಸಿರುವುದರಿಂದ ಅದರ ಸ್ಮರಣಾರ್ಥವಾಗಿ ಕೊಹ್ಲಿಯ ವರ್ಣಚಿತ್ರವನ್ನು ಕೇವಲ ಒಂದು ದಿನದಲ್ಲಿ ತಯಾರು ಮಾಡಿ ಅವರಿಗೆ ಕೊಡುಗೆ ನೀಡಲು ಇಲ್ಲಿಗೆ ಬಂದಿದ್ದೇವೆ ಎಂದು ಮಾಲಿ ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಆರ್. ಅಶ್ವಿನ್‌ ''ಟಿ 20 ಶತಮಾನದ ಸ್ಪಿನ್ ಎಸೆತ''