ಯಾವ ದಿನ ನಿವೃತ್ತಿಯಾಗುತ್ತೇನೆಂದು ಅಂದೇ ಹೇಳಿದ್ದರು ವಿರಾಟ್ ಕೊಹ್ಲಿ

Krishnaveni K
ಶನಿವಾರ, 18 ಅಕ್ಟೋಬರ್ 2025 (09:39 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿಗೆ ಆಸ್ಟ್ರೇಲಿಯಾ ಸರಣಿಯೇ ಕೊನೆಯಾಗುತ್ತಾ ಎಂಬಿತ್ಯಾದಿ ಅವರ ನಿವೃತ್ತಿ ಬಗ್ಗೆಯೇ ಹಲವು ವದಂತಿ ಹರಿದಾಡುತ್ತಿದೆ. ಆದರೆ ತಾವು ಯಾವಾಗ ನಿವೃತ್ತಿಯಾಗುವುದೆಂದು ಅವರು ಮೊದಲೇ ಹೇಳಿದ್ದರು.

ಸಚಿನ್ ತೆಂಡುಲ್ಕರ್ ನಂತರ ಭಾರತೀಯ ಕ್ರಿಕೆಟ್ ಪ್ರೇಮಿಗಳು ಅತ್ಯಂತ ಹೆಚ್ಚು ಆರಾಧಿಸಿದ ಆಟಗಾರ ಎಂದರೆ ವಿರಾಟ್ ಕೊಹ್ಲಿ. ಅವರು ಇದೀಗ ತಮ್ಮ ವೃತ್ತಿ ಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಕೆಲವರ ಪ್ರಕಾರ ಅವರು 2027 ರ ವಿಶ್ವಕಪ್ ಆಡುವುದೂ ಅನುಮಾನ ಎನ್ನಲಾಗುತ್ತಿದೆ.

ಈಗಾಗಲೇ ಅವರು ಟೆಸ್ಟ್ ಮತ್ತು ಟಿ20 ಕ್ರಿಕೆಟ್ ಗೆ ನಿವೃತ್ತಿ ಹೇಳಿದ್ದು, ಸದ್ಯಕ್ಕೆ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಆದರೆ ಈ ಮಾದರಿಗೂ ಅವರು ಸದ್ಯದಲ್ಲೇ ನಿವೃತ್ತಿಯಾಗಲಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ಅವರ ಹಳೆಯ ಸಂದರ್ಶನವೊಂದರ ಮಾತುಗಳು ನೆನಪಾಗುತ್ತಿದೆ.

ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ ತಾವು ಯಾವಾಗ ನಿವೃತ್ತಿಯಾಗುತ್ತೇನೆಂದು ಹೇಳಿದ್ದರು. ‘ನನಗೆ ಯಾವಾಗ ತಂಡಕ್ಕಾಗಿ ಏನೂ ಕೊಡುಗೆ ಕೊಡಲು ಸಾಧ್ಯವಿಲ್ಲ ಎನಿಸುತ್ತದೋ ಆವತ್ತು ನಾನು ಆಡುವುದನ್ನುನಿಲ್ಲಿಸುತ್ತೇನೆ. ನನ್ನ ದೇಹ ಸಹಕರಿಸುವುದಿಲ್ಲ ಎನಿಸುವಾಗ ಮತ್ತು ಮೈದಾನದಲ್ಲಿ ನಿಂತು ನನ್ನ ಅಗತ್ಯ ಇಲ್ಲಿಲ್ಲ ಎನಿಸಿದಾಗ ನಾನು ನಿವೃತ್ತಿಯಾಗುತ್ತೇನೆ’ ಎಂದು ಕೊಹ್ಲಿ ಹೇಳಿದ್ದರು. ಆದರೆ ಮೊನ್ನೆ ಆಸ್ಟ್ರೇಲಿಯಾಕ್ಕೆ ಕಾಲಿಟ್ಟ ತಕ್ಷಣ ನೀವು ಯಾವಾಗ ಸೋಲು ಒಪ್ಪಿಕೊಳ್ಳುತ್ತೀರೋ ಆಗ ನೀವು ವಿಫಲರಾಗುತ್ತೀರಿ ಎಂದು ಟ್ವೀಟ್ ಮಾಡಿದ್ದರು. ಅವರ ಈ ಮಾತು ನೋಡಿದರೆ ಸದ್ಯಕ್ಕೆ ಅವರು ನಿವೃತ್ತಿಯಾಗಲ್ಲ ಎನ್ನಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Video: ವಿರಾಟ್ ಕೊಹ್ಲಿ ಅಟೋಗ್ರಾಫ್ ಕೊಟ್ಟಿದ್ದಕ್ಕೆ ಈ ಹುಡುಗ ಹಿಂಗೆಲ್ಲಾ ಮಾಡೋದಾ

ವಿರಾಟ್ ಕೊಹ್ಲಿ ಆರ್ ಸಿಬಿಗೆ ಗುಡ್ ಬೈ ಹೇಳಲ್ಲ: ಮೊಹಮ್ಮದ್ ಕೈಫ್ ನೀಡಿದ ಕಾರಣ ನೋಡಿ

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಒಬ್ಬರನ್ನೊಬ್ಬರು ನೋಡಿ ಎಂಥಾ ಖುಷಿ ವಿಡಿಯೋ ನೋಡಿ

ಕೊಹ್ಲಿ, ರೋಹಿತ್ ಆಡುವ ಭಾರತ ಆಸ್ಟ್ರೇಲಿಯಾ ಏಕದಿನ ಸರಣಿ ಲೈವ್ ಎಲ್ಲಿ ನೋಡಬೇಕು

ಫಿಟ್ ಆಗಿದ್ರೂ ನನ್ನ ಯಾಕೆ ಕಡೆಗಣಿಸ್ತಿದ್ದೀರಿ: ಆಯ್ಕೆ ಸಮಿತಿ ವಿರುದ್ಧ ನೇರ ವಾಗ್ದಾಳಿ ನಡೆಸಿದ ಮೊಹಮ್ಮದ್ ಶಮಿ

ಮುಂದಿನ ಸುದ್ದಿ
Show comments