Daily Horoscope

Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಮತ್ತೆ ವಿಶ್ವ ನಂ 1 ಆಟಗಾರ

Virat Kohli
ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಮತ್ತೆ ವಿಶ್ವ ಕ್ರಿಕೆಟ್ ನಲ್ಲಿ ನಂ1 ಶ್ರೇಯಾಂಕಕ್ಕೇರಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಕೊಹ್ಲಿ ನಂ1 ಶ್ರೇಯಾಂಕಕ್ಕೆ ಬಡ್ತಿ ಪಡೆದಿದ್ದಾರೆ.

ಕಳೆದ ದಕ್ಷಿಣ ಆಫ್ರಿಕಾ ಸರಣಿ ಬಳಿಕ ಈಗ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ಕೊಹ್ಲಿ ಅದ್ಭುತ ಫಾರ್ಮ್ ಮುಂದವರಿಸಿದ್ದಾರೆ. ಕಳೆದ ಪಂದ್ಯದಲ್ಲಿ ಅವರು 93 ರನ್ ಗಳ ಭರ್ಜರಿ ಇನಿಂಗ್ಸ್ ಆಡಿದ್ದರು. ಇದರ ಬೆನ್ನಲ್ಲೇ ಅವರಿಗೆ ಐಸಿಸಿ ಶ್ರೇಯಾಂಕದಲ್ಲಿ ಬಡ್ತಿ ಸಿಕ್ಕಿದೆ.

ವಿರಾಟ್ ಕೊಹ್ಲಿ ನಂ1 ಆಗುತ್ತಿರುವುದು ಇದೇ ಮೊದಲಲ್ಲ. ಆದರೆ ಈಗ ಬಹಳ ದೀರ್ಘ ಸಮಯದ ನಂತರ 1 ನೇ ಶ್ರೇಯಾಂಕಕ್ಕೇರಿದ್ದಾರೆ. ಅದೂ ಬರೋಬ್ಬರಿ 1403 ದಿನಗಳ ನಂತರ ಕಿಂಗ್ ನಂ1 ಏಕದಿನ ಬ್ಯಾಟರ್ ಆಗಿದ್ದಾರೆ. ಒಟ್ಟು 785 ಅಂಕಗಳೊಂದಿಗೆ ಕೊಹ್ಲಿ ನಂ1 ಸ್ಥಾನದಲ್ಲಿದ್ದರೆ ನ್ಯೂಜಿಲೆಂಡ್ ನ ಡೆರಿಲ್ ಮಿಚೆಲ್ 2 ನೇ ಸ್ಥಾನದಲ್ಲಿದ್ದಾರೆ.

ಟಾಪ್ 10 ರಲ್ಲಿ ನಾಲ್ವರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ. ರೋಹಿತ್ ಶರ್ಮಾ 3, ಶುಭಮನ್ ಗಿಲ್ 5, ಶ್ರೇಯಸ್ ಅಯ್ಯರ್ 10 ನೇ ಸ್ಥಾನದಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಚಿನ್ನದ ಮೊಬೈಲ್ ಕವರ್ ಗಿಫ್ಟ್ ಕೊಡಲು ಬಂದ ಫ್ಯಾನ್: ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ video