ಮುಂಬೈ: ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಈಗ ನಿವೃತ್ತಿ ಘೋಷಿಸಲು ಕಾರಣವೇನೆಂದು ಮುಕ್ತವಾಗಿ ಮಾತನಾಡಿದ್ದಾರೆ.
ಲಂಡನ್ ನಲ್ಲಿ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಫೌಂಡೇಷನ್ ಗಾಗಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ನಿವೃತ್ತಿಗೆ ಕಾರಣವೇನೆಂದು ಮಾತನಾಡಿದ್ದಾರೆ. ಈ ವೇದಿಕೆಯಲ್ಲಿ ರವಿಶಾಸ್ತ್ರಿ, ಕೆವಿನ್ ಪೀಟರ್ಸನ್ ಸೇರಿದಂತೆ ದಿಗ್ಗಜರು ಇದ್ದರು.
ಈ ವೇಳೆ ಮಾತನಾಡಿದ ಕೊಹ್ಲಿ ನಾನು ಎರಡು ದಿನಗಳ ಹಿಂದಷ್ಟೇ ನನ್ನ ಗಡ್ಡಕ್ಕೆ ಕಲರಿಂಗ್ ಮಾಡಿದೆ. ಈಗ ನಾಲ್ಕು ದಿನಕ್ಕೊಮ್ಮೆ ಗಡ್ಡಕ್ಕೆ ಕಲರ್ ಮಾಡುವ ವಯಸ್ಸು ನನಗಾಗಿದೆ ಎಂದು ತಮಾಷೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು ಈ ಮಾದರಿ ಕ್ರಿಕೆಟ್ ನಿಂದ ನಿವೃತ್ತಿಯಾಗುವುದು ನನಗೆ ಸುಲಭವಾಗಿರಲಿಲ್ಲ. ಈ ಮಾದರಿಗೆ ನಾನು ಸಾಕಷ್ಟು ನೀಡಿದ್ದೇನೆ. ಅದೇ ರೀತಿ ಟೆಸ್ಟ್ ಕ್ರಿಕೆಟ್ ಕೂಡಾ ನಾನು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ನೀಡಿದೆ. ನನ್ನ ಟೆಸ್ಟ್ ವೃತ್ತಿ ಜೀವನದ ಕಡೆಗೊಮ್ಮೆ ಹಿಂತಿರುಗಿ ನೋಡಿದರೆ ನನಗೆ ಹೆಮ್ಮೆಯಾಗುತ್ತದೆ ಎಂದಿದ್ದಾರೆ.