Webdunia - Bharat's app for daily news and videos

Install App

ವಿರಾಟ್ ಕೊಹ್ಲಿಗೆ ಬೆಂಗಳೂರು ಎಂದರೆ ಎಷ್ಟು ಇಷ್ಟ? ಹೇಳ್ತಾರೆ ಕೇಳಿ!

Webdunia
ಗುರುವಾರ, 9 ನವೆಂಬರ್ 2023 (16:41 IST)
Photo Courtesy: Twitter
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐಪಿಎಲ್ ಆಡುವ ವಿರಾಟ್ ಕೊಹ್ಲಿಗೆ ಬೆಂಗಳೂರು ಎರಡನೇ ತವರಿದ್ದಂತೆ. ಇದೀಗ ವಿಶ್ವಕಪ್ ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯವಾಡಲು ಎಲ್ಲರಿಗಿಂತ ಮೊದಲೇ ಕೊಹ್ಲಿ ಬೆಂಗಳೂರಿಗೆ ಬಂದಿಳಿದಿದ್ದಾರೆ.

ಕೊಹ್ಲಿಯನ್ನು ದತ್ತುಮಗನಂತೆ ಕಾಣುವಂತಹ ಬೆಂಗಳೂರಿಗರ ಬಗ್ಗೆ ಸ್ವತಃ ಅವರಿಗೆ ಎಂತಹ ಭಾವನೆಯಿದೆ? ಅವರು ಬೆಂಗಳೂರನ್ನು ಎಷ್ಟು ಇಷ್ಟಪಡುತ್ತಾರೆ ಎಂಬುದನ್ನು ಸ್ಟಾರ್ ಸ್ಪೋರ್ಟ್ಸ್ ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

‘ನಾನು ಆರ್ ಸಿಬಿಗೆ ಸೇರಿದ ಬಳಿಕ ಇಲ್ಲಿನ ಜನ ನನ್ನನ್ನು ಪ್ರೀತಿಸುವ ರೀತಿ, ನನ್ನನ್ನು ಸ್ವೀಕರಿಸಿದ ಬಗೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ನಾನು ಇಲ್ಲಿ ಹುಟ್ಟಿದವನಲ್ಲ. ಹಾಗಿದ್ದರೂ ಇಲ್ಲಿನ ಜನ ನನಗೆ ತೋರಿಸಿದ ಪ್ರೀತಿ ಬೆಲೆ ಕಟ್ಟಲಾಗದಂತದ್ದು. ಇದು ನನಗೆ ಎರಡನೇ ಮನೆ ಅಲ್ಲ, ನನ್ನ ಮನೆಯೇ ಆಗಿದೆ. ಇಲ್ಲಿನ ಅಭಿಮಾನಿಗಳ ಅಭಿಮಾನ, ಅವರ ವಿಧೇಯತೆ ಅದಕ್ಕೆ ಬದಲಿಯಾಗಿ ನಾನು ಏನು ಕೊಟ್ಟರೂ ಕಡಿಮೆಯೇ. ಏನೇ ಆದರೂ ಅವರು ನಮ್ಮ ತಂಡದ ಜೊತೆಗೆ ನಿಲ್ಲುವ ವಿಧೇಯತೆಗೆ, ನಮ್ಮ ತಂಡದ ಬಗ್ಗೆ ಅವರಿಗಿರುವ ಕಾಳಜಿಗೆ ಏನು ಹೇಳಿದರೂ ಕಡಿಮೆಯೇ. ಅವರ ಮುಂದೆ ಮತ್ತೆ ಆಡುವುದು ನನಗೆ ವಿಶೇಷ ಕ್ಷಣ’ ಎಂದಿದ್ದಾರೆ ಕೊಹ್ಲಿ. ಅವರ ಈ ಸಂದರ್ಶನದ ಸಂಪೂರ್ಣ ವಿಡಿಯೋ ನವಂಬರ್ 12 ರಂದು ರಿಲೀಸ್ ಆಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಆರ್ ಸಿಬಿ ವೇಗಿ ಯಶ್ ದಯಾಳ್ ವಿರುದ್ಧ ಮಹಿಳೆಗೆ ವಂಚನೆ ಮಾಡಿದ ಆರೋಪ

ರೋಹಿತ್ ಶರ್ಮಾ ಇದ್ದ ರೂಂಗೆ ಗರ್ಲ್ ಫ್ರೆಂಡ್ ಕರೆದಿದ್ದ ಶಿಖರ್ ಧವನ್

ಜಸ್ಪ್ರೀತ್ ಬುಮ್ರಾ ಎರಡನೇ ಟೆಸ್ಟ್ ಆಡಲ್ಲ: ಅವರ ಸ್ಥಾನಕ್ಕೆ ಇವರೇ ಬೆಸ್ಟ್ ಅಂತಿದ್ದಾರೆ ಫ್ಯಾನ್ಸ್

ಆರೋಗ್ಯ ಸಂಬಂಧ ಬಿಗ್‌ ಅಪ್ಡೇಡ್ ನೀಡಿದ ಸೂರ್ಯಕುಮಾರ್ ಯಾದವ್‌

ಟೀಂ ಇಂಡಿಯಾಗೆ ಮುಂದಿನ ಟೆಸ್ಟ್ ಪಂದ್ಯ ಎಲ್ಲಿ, ಯಾವಾಗ ಇಲ್ಲಿದೆ ಡೀಟೈಲ್ಸ್

ಮುಂದಿನ ಸುದ್ದಿ
Show comments