ಭಾರತ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ ಸದ್ಯದ ಪರಿಸ್ಥಿತಿಯಲ್ಲಿ ವಿಶ್ವಶ್ರೇಷ್ಠ ಕ್ರಿಕೆಟಿಗರಾಗಿದ್ದಾರೆ.ಆದರೆ, ಸಚಿನ್ ತೆಂಡೂಲ್ಕರ್ ನಿಜವಾಗಿಯೂ ನಂಬರ್ ಒನ್ ಎಂದು ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ಬ್ರೆಟ್ ಲೀ ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಭಿನ್ನ ರೀತಿಯ ಆಟಗಾರರು. ಆದ್ದರಿಂದ ಹೋಲಿಕೆ ಮಾಡುವುದು ತುಂಬಾ ಕಷ್ಟ. ನಾವು ಬ್ರಾಡ್ಮನ್ ಮತ್ತು ಸ್ಟೀವ್ ವಾ ಅಥವಾ ಬ್ರಾಡ್ಮನ್ ರಿಂದ ಸಚಿನ್ ಅವರನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಸಚಿನ್ ಟಿ-20 ಪಂದ್ಯಗಳಲ್ಲಿ ಹೆಚ್ಚು ಪಾಲ್ಗೊಂಡಿಲ್ಲ ಎಂದು ತಿಳಿಸಿದ್ದಾರೆ.
200 ಟೆಸ್ಟ್ ಪಂದ್ಯಗಳನ್ನಾಡಿದ ಸಚಿನ್ ತೆಂಡೂಲ್ಕರ್ ನನ್ನ ಪಾಲಿಗೆ ನಿಜವಾಗಿಯೂ ನಂಬರ್ ಒನ್. ವಿರಾಟ್ ಕೊಹ್ಲಿ ಪ್ರಸ್ತುತ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮೆನ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ನಂತರ ಸ್ಟೀವ್ ಸ್ಮಿತ್, ಜೊಯ್ ರೂಟ್ ಮತ್ತು ಕಾನೆ ವಿಲಿಯಮ್ಸನ್ ಅತ್ಯುತ್ತಮ ಬ್ಯಾಟ್ಸ್‌ಮೆನ್ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.