ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ತೆಲುಗು ಚಿತ್ರರಂಗದ ಸೂಪರ್ ಸ್ಟಾರ್‌ಗಳಾದ ಚಿರಂಜೀವಿ ಹಾಗೂ ನಾಗಾರ್ಜುನ ತಿರುಪತಿ ದೇವಸ್ಥಾನದಲ್ಲಿ ಒಟ್ಟಿಗೆ ಕಾಣಿಸಿಕೊಂಡು ಗಮನ ಸೆಳೆದರು.
ಮೆಗಾಸ್ಟಾರ್ ಚಿರಂಜೀವಿ, ಅಕ್ಕಿನೇನಿ ನಾಗಾರ್ಜುನ್ , ಅಲ್ಲು ಅರವಿಂದ್, ಸಚಿನ್ ತೆಂಡೂಲ್ಕರ್, ಕೈಗಾರಿಕೋದ್ಯಮಿ ಪ್ರಸಾದ್ ಬುಧವಾರ ತಿರುಪತಿಗೆ ಆಗಮಿಸಿ ವೆಂಕಟೇಶ್ವರ ದೇವರ ದರ್ಶನ ಪಡೆದು ಪುನೀತರಾದರು.
ಮೆಗಾಸ್ಟಾರ್ ಚಿರಂಜೀವಿ, ಅಕ್ಕಿನೇನಿ ನಾಗಾರ್ಜುನ್ , ಅಲ್ಲು ಅರವಿಂದ್, ಸಚಿನ್ ತೆಂಡೂಲ್ಕರ್ ವೆಂಕಟೇಶ್ವರ ದೇವರ ದರ್ಶನ ಪಡೆದು ಮರಳಿದ್ದಾರೆ. ಸೆಲೆಬ್ರಿಟಿಗಳನ್ನು ಒಟ್ಟಿಗೆ ನೋಡಿದ ಭಕ್ತರು ಪುಳಕಿತಗೊಂಡಿದ್ದಾರೆ.
ಕೇರಳ ಬ್ಲಾಸ್ಟರ್ಸ್ ಫುಟ್ಬಾಲ್ ಕ್ಲಬ್ ಮಾಲೀಕರಾದ ಸಚಿನ್ ತೆಂಡೂಲ್ಕರ್, ರಾಜ್ಯದಲ್ಲಿ ಉದಯೋನ್ಮುಖ ಫುಟ್ಬಾಲ್ ಆಟಗಾರರಿಗೆ ತರಬೇತಿ ನೀಡಲು ರೆಸಿಡೆನ್ಶಿಯಲ್ ಫುಟ್ಬಾಲ್ ಆಕಾಡೆಮಿ ಸ್ಥಾಪಿಸುವ ಸರಕಾರದ ಮನವಿಗೆ ಸಹ-ಮಾಲೀಕರು ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕೇರಳ ಬ್ಲಾಸ್ಟರ್ಸ್ ಫುಟ್ಬಾಲ್ ಕ್ಲಬ್ ಸ್ಥಾಪನೆಗೆ ಚಿರಂಜೀವಿ, ನಾಗಾರ್ಜುನ್, ಅಲ್ಲು ಅರವಿಂದ್ ಮತ್ತು ಪ್ರಸಾದ್ ಅವರ ಸಹಕಾರ ಪ್ರೋತ್ಸಾಹ ಫುಟ್ಬಾಲ್ ಆಟಗಾರರ ಪಾಲಿಗೆ ವರದಾನವಾಗಲಿದೆ ಎಂದು ತಿಳಿಸಿದ್ದಾರೆ.
ತಿರುಪತಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಸಚಿನ್, ಚಿರಂಜೀವಿ ನಾಗಾರ್ಜುನ್( ವಿಡಿಯೋ)