Publish Date: Fri, 05 Oct 2018 (11:37 IST)
Updated Date: Fri, 05 Oct 2018 (11:41 IST)
ರಾಜ್ ಕೋಟ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಪ್ರಥಮ ಟೆಸ್ಟ್ ಕ್ರಿಕೆಟ್ ನ ದ್ವಿತೀಯ ದಿನದ ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 506 ರನ್ ಗಳಿಸಿದೆ.
ನಿನ್ನೆ 70 ರನ್ ಗಳಿಗೆ ದಿನದಾಟ ಮುಗಿಸಿದ್ದ ನಾಯಕ ವಿರಾಟ್ ಕೊಹ್ಲಿ ಇಂದು ತಮ್ಮ ಟೆಸ್ಟ್ ಬಾಳ್ವೆಯ 24 ನೇ ಶತಕ ಗಳಿಸಿ ಮಿಂಚಿದರು. ಎಂದಿನಂತೆ ಹೊಡೆಬಡಿಯ ಕ್ರಿಕೆಟ್ ಆಡದೇ ಶಾಂತವಾಗಿ ಆಡಿದ ಕೊಹ್ಲಿ ನಾಯಕನಾಗಿ 17 ನೇ ಶತಕ ಗಳಿಸಿದರು.
ಆದರೆ ಇನ್ನೊಂದು ತುದಿಯಲ್ಲಿ ರಿಷಬ್ ಪಂತ್ ತಮ್ಮ ಶೈಲಿಯಲ್ಲಿ ಸಿಡಿಲಬ್ಬರ ಆಟ ಮುಂದುವರಿಸಿದ್ದರು. ಆದರೆ ಭಾರತದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ರಿಷಬ್ 92 ರನ್ ಗಳಿಗೆ ಔಟಾಗುವ ಮೂಲಕ ಚೊಚ್ಚಲ ಶತಕ ಗಳಿಸುವ ಅವಕಾಶ ಕಳೆದುಕೊಂಡು ನಿರಾಸೆ ಅನುಭವಿಸಿದರು. ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿದ ರಿಷಬ್ ಕೇವಲ 84 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್ ಗಳೊಂದಿಗೆ 92 ರನ್ ಗಳಿಸಿದರು. ಇದೀಗ ನಾಯಕ ವಿರಾಟ್ ಕೊಹ್ಲಿ 120 ಮತ್ತು ರವೀಂದ್ರ ಜಡೇಜಾ 19 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.