Publish Date: Fri, 05 Oct 2018 (08:44 IST)
Updated Date: Fri, 05 Oct 2018 (08:45 IST)
ರಾಜ್ ಕೋಟ್: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಅವಕಾಶ ಸಿಕ್ಕಿಯೂ ಬಳಸಿಕೊಳ್ಳದ ಕೆಎಲ್ ರಾಹುಲ್ ಮೇಲೆ ಅಭಿಮಾನಿಗಳು ಟೀಕಾಪ್ರಹಾರ ನಡೆಸಿದ್ದಾರೆ.
ಶಿಖರ್ ಧವನ್ ಇದ್ದಾಗ ಟೆಸ್ಟ್ ತಂಡದಲ್ಲಿಯೂ ಆರಂಭಿಕ ಸ್ಥಾನಕ್ಕಾಗಿ ಪೈಪೋಟಿ ನಡೆಸಬೇಕಾಗುತ್ತದೆ. ಇದೀಗ ಓಪನಿಂಗ್ ಅವಕಾಶ ಸಿಕ್ಕಿಯೂ ಭಾರತೀಯ ಪಿಚ್ ನಲ್ಲಿಯೇ ಶೂನ್ಯಕ್ಕೆ ಔಟಾದ ರಾಹುಲ್ ಮೇಲೆ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ.
ಇಂಗ್ಲೆಂಡ್ ವಿರುದ್ಧ ಕೊನೆಯ ಪಂದ್ಯದಲ್ಲಿ ಶತಕ ಭಾರಿಸಿದ್ದು, ಏನೋ ಲಕ್ ನಿಂದಾಗಿ. ಅಂತೂ ಇಂಗ್ಲೆಂಡ್ ನಲ್ಲಿ ತೋರಿಸಿದ್ದ ಫಾರ್ಮ್ ನ್ನು ಇಲ್ಲಿಯೂ ಡಕ್ ಔಟ್ ಆಗುವ ಮೂಲಕ ಮುಂದುವರಿಸಿದ್ದಾರೆ ಎಂದು ಅಭಿಮಾನಿಗಳು ಲೇವಡಿ ಮಾಡಿದ್ದಾರೆ.
ಇನ್ನು ಕೆಲವರು ರೋಹಿತ್ ಶರ್ಮಾರಂತಹ ಫಾರ್ಮ್ ನಲ್ಲಿರುವ ಆಟಗಾರನನ್ನು ಕಡೆಗಣಿಸಿ ರಾಹುಲ್ ಗೆ ಅವಕಾಶ ಕೊಟ್ಟು ಬಿಸಿಸಿಐ ಒಳ್ಳೆಯ ಕೆಲಸವನ್ನೇ ಮಾಡಿದೆ ಎಂದು ವ್ಯಂಗ್ಯ ಮಾಡಿದ್ದಾರೆ. ಹಲವರು ರಾಹುಲ್ ರನ್ನು ಕಿತ್ತೊಗೆದು ರೋಹಿತ್ ಶರ್ಮಾಗೆ ಅವಕಾಶ ನೀಡಿ ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.