ಚಿನ್ನಸ್ವಾಮಿ ಮೈದಾನದಲ್ಲಿ ಫ್ಯಾನ್ಸ್ ಕ್ವಾಟ್ಲೆ, ವಿರಾಟ್ ಕೊಹ್ಲಿ ತಮಾಷೆ

Webdunia
ಭಾನುವಾರ, 13 ಮಾರ್ಚ್ 2022 (09:00 IST)
ಬೆಂಗಳೂರು: ಬೆಂಗಳೂರು ವಿರಾಟ್ ಕೊಹ್ಲಿ ಪಾಲಿಗೆ ಎರಡನೇ ತವರಿದ್ದಂತೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿರುವ ಕೊಹ್ಲಿ ಇಲ್ಲಿ ಟೀಂ ಇಂಡಿಯಾ ಪರ ಆಡುತ್ತಿದ್ದರೂ ಜನ ತಮ್ಮ ಪ್ರೀತಿ ತೋರಿಸುವುದನ್ನು  ಮರೆಯುವುದಿಲ್ಲ.

ಭಾರತ ಮತ್ತು ಶ್ರೀಲಂಕಾ ನಡುವೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿಯೂ ಇಂತಹದ್ದೇ ಘಟನೆಯಾಗಿದೆ. ನಿನ್ನೆ ಕೊಹ್ಲಿ ಬ್ಯಾಟಿಂಗ್ ಗೆ ಕ್ರೀಸ್ ಗಿಳಿದಾಗ ಅಭಿಮಾನಿಗಳು ಜೋರಾಗಿ ಅವರ ಹೆಸರೆತ್ತಿ ತಮ್ಮ ಸಂತೋಷ ಹೊರಹಾಕಿದ್ದರು.

ಬಳಿಕ ಫೀಲ್ಡಿಂಗ್ ಮಾಡುತ್ತಿದ್ದಾಗ ಕೊಹ್ಲಿ ಮತ್ತು ಪ್ರೇಕ್ಷಕರ ನಡುವಿನ ಆಟ ನೋಡುವುದೇ ತಮಾಷೆಯಾಗಿತ್ತು. ಅಭಿಮಾನಿಗಳು ಆರ್ ಸಿಬಿ ಎಂದು ಕೂಗಿದ್ದಕ್ಕೆ ಕೊಹ್ಲಿ ತಮ್ಮ ಜೆರ್ಸಿ ಒಳಗೆ ಹಾಕಿದ್ದ ಕೆಂಪು ಬಣ್ಣದ ಬನಿಯನ್ ತೋರಿಸಿದ್ದರು. ಕೊಹ್ಲಿ ಸ್ಲಿಪ್ ನಲ್ಲಿ ಫೀಲ್ಡಿಂಗ್ ಮಾಡುತ್ತಿರುವಾಗ ಅಭಿಮಾನಿಗಳು ಬೇಕೆಂದೇ ಎಬಿಡಿ ವಿಲಿಯರ್ಸ್ ಹೆಸರು ಕೂಗಿ ಕರೆದಾಗ ಎಬಿಡಿ ಶೈಲಿಯಲ್ಲಿ ಬ್ಯಾಟ್ ಬೀಸುವಂತೆ ಆಕ್ಷನ್ ಮಾಡಿ ಅಭಿಮಾನಿಗಳನ್ನು ರಂಜಿಸಿದರು. ಅಷ್ಟೇ ಅಲ್ಲ, ಪದೇ ಪದೇ ಅಭಿಮಾನಿಗಳತ್ತ ತಿರುಗಿ ಆಟಗಾರರನ್ನು ಜೋರಾಗಿ ಹುರಿದುಂಬಿಸುವಂತೆ ಸನ್ನೆ ಮಾಡುತ್ತಲೇ ಇದ್ದರು. ಅಂತೂ ಚಿನ್ನಸ್ವಾಮಿ ಅಂಗಣದಲ್ಲಿ ಕೊಹ್ಲಿ ಮತ್ತು ಅಭಿಮಾನಿಗಳ ಜೊತೆಯಾಟ ನೋಡುವುದೇ ಸ್ವಾರಸ್ಯಕರವಾಗಿತ್ತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಇಂಥಾ ಪಿಚ್ ನಲ್ಲಿ ಸಚಿನ್, ಕೊಹ್ಲಿಗೂ ಆಡಕ್ಕೆ ಆಗ್ತಿರಲಿಲ್ಲ: ಹರ್ಭಜನ್ ಸಿಂಗ್ ವಾಗ್ದಾಳಿ

ಐಪಿಎಲ್ ನಲ್ಲಿ ಮಾಲಿಕರು ಏನೇನೋ ಪ್ರಶ್ನೆ ಕೇಳ್ತಾರೆ: ಕೆಎಲ್ ರಾಹುಲ್ ಬಿಚ್ಚಿಟ್ಟ ಸತ್ಯ

ಟೀಂ ಇಂಡಿಯಾ ಟೆಸ್ಟ್ ತಂಡ ಹಳ್ಳ ಹಿಡಿಸಿದ ಗೌತಮ್ ಗಂಭೀರ್ ಟೆಸ್ಟ್ ದಾಖಲೆ ಹೇಗಿತ್ತು ನೋಡಿ

IND vs SA: ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ ಯಾವಾಗ, ಎಲ್ಲಿ ಇಲ್ಲಿದೆ ವಿವರ

ಕೋಚ್ ಆಗಿ ಬಂದಾಗ ರಾಹುಲ್ ದ್ರಾವಿಡ್ ಹೇಳಿದ್ದ ಈ ಮಾತು ಗಂಭೀರ್ ಗೂ ಪಾಠವಾಗಬೇಕು

ಮುಂದಿನ ಸುದ್ದಿ
Show comments