ಕೊಹ್ಲಿ ಹೆಸರಿನಲ್ಲಿ ಬೆಂಗಳೂರಿನಲ್ಲಿ ರೆಸ್ಟೋರೆಂಟ್ ತೆರೆದ ಅಭಿಮಾನಿ

Krishnaveni K
ಮಂಗಳವಾರ, 13 ಫೆಬ್ರವರಿ 2024 (09:13 IST)
Photo Courtesy: Twitter
ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಎಂದರೆ ಜೀವ ಬಿಡುವ ಅದೆಷ್ಟೋ ಹುಚ್ಚು ಅಭಿಮಾನಿಗಳಿದ್ದಾರೆ. ಕಿಂಗ್ ಕೊಹ್ಲಿಯ ಜೊತೆ ಒಂದು ಸೆಲ್ಫೀ ತೆಗೆದುಕೊಳ್ಳಬೇಕೆಂದು ಮೈದಾನಕ್ಕೆ ನುಗ್ಗುವ ಅಭಿಮಾನಿಗಳನ್ನು ನೋಡಿದ್ದೇವೆ.

ಇದೀಗ ಬೆಂಗಳೂರಿನಲ್ಲಿ ಅಭಿಮಾನಿಯೊಬ್ಬರು ಕೊಹ್ಲಿ ಹೆಸರಿನಲ್ಲಿ ರೆಸ್ಟೋರೆಂಟ್ ಒಂದನ್ನು ತೆರೆದು ಸುದ್ದಿಯಾಗಿದ್ದಾರೆ. ಕೊಹ್ಲಿ ಮೇಲಿನ ಅಭಿಮಾನದಿಂದ ತಮ್ಮ ರೆಸ್ಟೋರೆಂಟ್ ಗೆ ಕೊಹ್ಲಿ’ಸ್ ಕಿಚನ್ ಎಂದು ನಾಮಕರಣ ಮಾಡಿದ್ದಾರೆ. ಇಲ್ಲಿ ವೆಜ್ ಮತ್ತು ನಾನ್ ವೆಜ್ ಶೈಲಿಯ ಆಹಾರ ನೀಡಲಾಗುತ್ತದೆ.

ಬೆಂಗಳೂರು ಕೊಹ್ಲಿಗೆ ಎರಡನೇ ತವರು
ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವ ಕಾರಣಕ್ಕೆ ಕೊಹ್ಲಿಗೆ ಇದು ಎರಡನೇ ತವರಾಗಿದೆ. ಆಗಾಗ ಕೊಹ್ಲಿ ತಮ್ಮ ಬೆಂಗಳೂರು ಪ್ರೀತಿಯ ಬಗ್ಗೆ ಹೇಳಿಕೊಳ್ಳುತ್ತಾರೆ. ಇಲ್ಲಿನ ಅಭಿಮಾನಿಗಳೂ ಅವರನ್ನು ತಮ್ಮ ನೆಲದ ಕ್ರಿಕೆಟಿಗನಂತೇ ಪ್ರೀತಿಸುತ್ತಾರೆ.

ಇದೇ ರೀತಿ ಈ ಅಭಿಮಾನಿಯೂ ಅವರ ಮೇಲಿನ ಪ್ರೀತಿಯಿಂದ ಕೊಹ್ಲಿ ಕಿಚನ್ ತೆರೆದಿದ್ದಾರೆ. ಕೇವಲ ಹೆಸರಿಗೆ ಮಾತ್ರ ಕೊಹ್ಲಿ ಎಂದು ನಾಮಕರಣ ಮಾಡಿಲ್ಲ. ಈ ರೆಸ್ಟೋರೆಂಟ್ ನಲ್ಲಿ ಕೊಹ್ಲಿಯ ಇಷ್ಟದ ಕಾಂಟಿನೆಂಟಲ್, ಚೈನೀಸ್, ತಂದೂರಿ ಇತ್ಯಾದಿ ಆಹಾರಗಳೂ ಸಿಗಲಿವೆ. ಇದೀಗ ಕೊಹ್ಲಿ ಹೆಸರು ನೋಡಿಯೇ ಗ್ರಾಹಕರು ಈ ರೆಸ್ಟೋರೆಂಟ್ ಗೆ ಬರುತ್ತಿದ್ದಾರಂತೆ. ಬೆಂಗಳೂರಿನ ಬನಶಂಕರಿಯ, ಮುನೇಶ್ವರ ನಗರ ರಸ್ತೆಯಲ್ಲಿ ಈ ರೆಸ್ಟೋರೆಂಟ್ ಇದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕ್ರಿಕೆಟ್ ಸುಂದರಿ ಸ್ಮೃತಿ ಮಂಧಾನ ಮದುವೆ ಕಾರ್ಡ್ ಫೋಟೋ ವೈರಲ್

IND vs SA Test: ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ

ಜೀವ ಭಯಕ್ಕೆ ಪಾಕಿಸ್ತಾನದಿಂದ ವಾಪಸ್ ಆಗ್ತೀವಿ ಎಂದ ಶ್ರೀಲಂಕಾ ಕ್ರಿಕೆಟಿಗರು: ಬರಬೇಡಿ ಅಂತಿದೆ ಕ್ರಿಕೆಟ್ ಬೋರ್ಡ್

ಮೊದಲ ಮದುವೆಯ ವರ್ಷದೊಳಗೆ ಎರಡನೇ ಮದುವೆಯಾದ ಅಫ್ಘಾನ್ ಕ್ರಿಕೆಟರ್ ರಶೀದ್ ಖಾನ್‌

ಆರ್‌ಸಿಬಿ ಅಭಿಮಾನಿಗಳಿಗೆ ಶಾಕ್‌ : ಚಿನ್ನಸ್ವಾಮಿಯಿಂದಲೇ ಪಂದ್ಯಗಳು ಶಿಫ್ಟ್‌ ಸಾಧ್ಯತೆ

ಮುಂದಿನ ಸುದ್ದಿ
Show comments